Advertisement

ಎಲ್ಲರಲ್ಲೂ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ ಬೆಳೆಯಲಿ

12:26 PM Aug 16, 2017 | Team Udayavani |

ತಿ.ನರಸೀಪುರ: ಪ್ರತಿಯೊಬ್ಬರಲ್ಲೂ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವೈಕ್ಯತೆ ಬೆಳೆದಾಗ ಸ್ವಾತಂತ್ರ್ಯ ಭಾರತ ಪ್ರಬುದ್ಧತೆ ರಾಷ್ಟ್ರವಾಗಿ ರೂಪುಗೊಳ್ಳುತ್ತದೆ ಎಂದು ಎನ್‌ಕೆಎಫ್ ಫೌಂಡೇಷನ್‌ ಅಧ್ಯಕ್ಷ ಎನ್‌.ಕೆ.ಫ‌ರೀದ್‌ ಹೇಳಿದರು.

Advertisement

ಪಟ್ಟಣದ ಅಗ್ರಹಾರದಲ್ಲಿರುವ ಎನ್‌ಕೆಎಫ್ ಪಬ್ಲಿಕ್‌ ಶಾಲೆಯಲ್ಲಿ ಮಂಗಳವಾರ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಕತೆಯ ಐಕ್ಯತೆ ನಮ್ಮಲ್ಲಿ ಜಾತ್ಯತೀತವಾಗಿ ಬೆಸೆಯಬೇಕು. ಅತಿಥಿ ದೇವೋಭವವೆಂಬ ಸಂಸ್ಕಾರ ಗುಣ ವಿಶಾಲವಾಗಿ ವ್ಯಾಪಿಸಿದಾಗ ಸಂಘರ್ಷ ಮುಕ್ತ ದೇಶವಾಗಲಿದೆ ಎಂದರು.

ಇನ್ನೂರು ವರ್ಷಗಳ ಕಾಲ ಬ್ರಿಟಿಷರು ನಮ್ಮನ್ನಾಳಿದರೆ, ದೇಶದ ಸಂಪತ್ತು ಮತ್ತು ಆಹಾರ ಪದಾರ್ಥಗಳನ್ನು ಲೂಟಿ ಮಾಡಲು ಡಚ್ಚರು, ಪೋರ್ಚುಗೀಸರು, ಮೊಘಲರು ಹಾಗೂ ಇನ್ನಿತರರು 525 ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ಭಾರತದ ಮೇಲೆ ದಂಡೆತ್ತಿ ಬಂದರು.

ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಲು ಹಲವು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ಬಿಟ್ಟರು. ಅಹಿಂಸಾ ಮಾರ್ಗದ ಮೂಲಕ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯವನ್ನು ತಂದುಕೊಟ್ಟು ರಾಷ್ಟ್ರಪಿತರಾದರು. ಇಂದಿನ ಮಕ್ಕಳು ಆಹಾರ ಪದಾರ್ಥವನ್ನು ಬೀಸಾಡದೆ ಹೆತ್ತವರವನ್ನು ಗೌರವಿಸುವ ಸಂಸ್ಕಾರವನ್ನು ರೂಡಿಸಿಕೊಳ್ಳ ಬೇಕೆಂದು ತಿಳಿಸಿದರು.

ಧ್ವಜಾರೋಹಣ ನೇರವೇರಿಸಿದ ಪುರಸಭಾ ಸದಸ್ಯ ಟಿ.ಜಿ.ಪುಟ್ಟಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ನಂತರದ ದೇಶದಲ್ಲಿನ ಯುವ ಸಮೂಹ ಜಾಗತೀಕರಣದ ಪರಿಣಾಮ ಮೊಬೈಲ್‌ ಬಳಕೆಗೆ ಮಾರುಹೋಗಿ ಹಾಳಾಗಿತ್ತಿದ್ದರೆ, ಅಪ್ರಾಪ್ತ ವಯಸ್ಸಿನಲ್ಲಿ ಬೈಕ್‌ ಚಲಾಯಿಸಿ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಬೇಡವಾದ ವಿಚಾರಗಳನ್ನು ಕಲೆಹಾಕಿ ಸಂಸ್ಕಾರ ಕಳೆದುಕೊಳ್ಳುತ್ತಿದ್ದಾರೆ. ಸ್ವಾತಂತ್ರೋತ್ಸವ ಯುವ ಸಮೂಹವನ್ನು ಜಾಗೃತಿಗೊಳಿಸುವ ಕಾರ್ಯಕ್ರಮವಾಗಬೇಕೆಂದು ಸಲಹೆ ನೀಡಿದರು.

ಜಿಲ್ಲಾ ವಕ್ಫ್ ಬೋರ್ಡ್‌ ನಿರ್ದೇಶಕ ಹಾಗೂ ಕೆಪಿಸಿಸಿ ಅಲ್ಪ ಸಂಖ್ಯಾತ ಕಾರ್ಯದರ್ಶಿ ಬಿ.ಮನ್ಸೂರ್‌ ಆಲಿ, ಕಸಾಪ ಯೋಜನಾ ಸಮಿತಿ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ಆರ್‌.ನಾಗೇಂದ್ರಕುಮಾರ್‌(ಮೂರುನಾಕು), ಮುಖಂಡರಾದ ಮಹದೇವಪ್ಪ, ರಿಯಾಜ್‌ ಅಹಮ್ಮದ್‌, ಶಾಲೆ ಮುಖ್ಯ ಶಿಕ್ಷಕಿ ಹೇಮ, ಸಹ ಶಿಕ್ಷಕರಾದ ಕೆ.ಅಶ್ವಿ‌ನಿ, ಗೀತಾ, ನೇತ್ರಾವತಿ, ಉಷಾ, ಶೈಲಜಾ, ಶಾಲಿನಿ, ರೇಖಾ, ವಿಜಯಲಕ್ಷ್ಮೀ, ರಶ್ಮಿ, ನಾಗವೇಣಿ, ಸಲ್ಮಾ, ಆಶಾ, ಹಾಜಿರಾ, ದಿವ್ಯಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next