Advertisement

ಯುವ ಸಮುದಾಯದೊಂದಿಗೆ ಸಹಕಾರ ಕ್ಷೇತ್ರ ಮುನ್ನಡೆಯಲಿ

11:55 AM Oct 30, 2017 | Team Udayavani |

ಪುತ್ತೂರು: ಭವಿಷ್ಯದಲ್ಲಿ ಯುವ ಸಮುದಾಯವನ್ನು ಸಹಕಾರ ಕ್ಷೇತ್ರದತ್ತ ಆಕರ್ಷಿಸುವುದರ ಜತೆಗೆ ಪೂರಕ ಯೋಜನೆಗಳನ್ನು ಹಾಕಿಕೊಂಡು ಕ್ಷೇತ್ರವನ್ನು ಮುನ್ನಡೆಸುವ ಅಗತ್ಯ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಸಹಕಾರ ಕ್ಷೇತ್ರದಲ್ಲಿ ಪ್ರಥಮವಾಗಿ ರಾಷ್ಟ್ರ ಮಟ್ಟದಲ್ಲಿ “ಬೆಸ್ಟ್‌ ಚೇರ್‌ಮನ್‌’ ಪ್ರಶಸ್ತಿ ಪುರಸ್ಕೃತರಾದ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೇತೃತ್ವದಲ್ಲಿ ಹಾಗೂ ತಾಲೂಕಿನ ಎಲ್ಲ ಸಹಕಾರ ಸಂಘಗಳು ಮತ್ತು ಸಹಕಾರಿಗಳ ಸಹಯೋಗದಲ್ಲಿ ರವಿವಾರ ಪುತ್ತೂರು ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನರಿಂದ ಗೌರವ
1909ರಲ್ಲಿ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಪುತ್ತೂರಿನಲ್ಲಿ ಸಹಕಾರ ಕ್ಷೇತ್ರದ ಜನನ ಆಯಿತು. ಅದೇ ಕ್ಷೇತ್ರದಲ್ಲಿ ಸಮ್ಮಾನಗೊಳ್ಳುತ್ತಿರುವುದಕ್ಕೆ ವಿಶೇಷ ಅರ್ಥವಿದೆ ಎಂದು ಹೇಳಿದ ರಾಜೇಂದ್ರ ಕುಮಾರ್‌ ಅವರು, ಜಾತಿ, ತೋಳ್ಬಲ, ಆರ್ಥಿಕ ಬಲ ಇಲ್ಲದಿದ್ದರೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಲು ನನಗೆ ಸಾಧ್ಯವಾಗಿರುವುದಕ್ಕೆ ಜಿಲ್ಲೆಯ ಜನರೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಸಮಸ್ಯೆಗಳ ಪ್ರಸ್ತಾವ
ಜಿಲ್ಲೆಯಲ್ಲಿ ಯೂರಿಯಾ ಕಂಪೆನಿ ಸ್ಥಾಪನೆಗೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರು 100 ಎಕ್ರೆ ಜಾಗ ಕೇಳಿದ್ದರೂ ನೀಡಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಅವಕಾಶಗಳನ್ನು ನಾವು ಎಂದಿಗೂ ಬಿಡಬಾರದು ಎಂದರು. ಈ ಬಾರಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಹಕಾರ ಸಮ್ಮೇಳನದಲ್ಲಿ ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು, ತೊಡಕುಗಳ ಕುರಿತು ಪ್ರಸ್ತಾವಿಸುವುದಾಗಿ ಭರವಸೆ ನೀಡಿದರು.

ಯೋಗ್ಯತೆ, ಪರಿಶ್ರಮಕ್ಕೆ ಗೌರವ ಅಧ್ಯಕ್ಷತೆ ವಹಿಸಿದ್ದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮಾತನಾಡಿ, ದ.ಕ. ಜಿಲ್ಲೆಯ ಸಹಕಾರ ಕ್ಷೇತ್ರದ ಸಾಮ್ರಾಟರಾಗಿ, ಫೆಡರೇಶನ್‌, ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರಾಗಿ ಅನನ್ಯ ಕೆಲಸ ಮಾಡಿದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಯೋಗ್ಯತೆ, ಪರಿಶ್ರಮಕ್ಕೆ ಅರ್ಹವಾ
ಗಿಯೇ ರಾಷ್ಟ್ರ ಮಟ್ಟದ ಗೌರವ ಲಭಿಸಿದೆ ಎಂದರು.

Advertisement

ಸಮ್ಮಾನ
ಪುತ್ತೂರು ತಾಲೂಕಿನ 19 ಪ್ರಾಥಮಿಕ ಕೃ. ಪ. ಸ. ಸಂಘಗಳ ಅಧ್ಯಕ್ಷರು, ತಾಲೂಕಿನ ಇತರ ಎಲ್ಲ ಸಹಕಾರ ಸಂಘಗಳು, ಸಹಕಾರಿಗಳು, ವೈಯಕ್ತಿಕ ನೆಲೆಯಲ್ಲಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಿದರು. ಕಾವು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಅಭಿನಂದನ ಭಾಷಣ ಮಾಡಿದರು. ಕಡಬ ಸಂಘದ ಉಪಾಧ್ಯಕ್ಷ ರಮೇಶ್‌ ಕಲ್ಕುರೆ ಅಭಿನಂದನ ಪತ್ರ ವಾಚಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ
ರಾದ ಎಸ್‌.ಬಿ. ಜಯರಾಮ ರೈ, ಶಶಿಕುಮಾರ್‌ ರೈ ಬಾಲೊÂಟ್ಟು, ದೇವಿಪ್ರಸಾದ್‌ ಶೆಟ್ಟಿ, ದೇವರಾಜ್‌, ಪುತ್ತೂರು ಸಹಕಾರಿ ಯೂನಿಯನ್‌ ಮಾಜಿ ಅಧ್ಯಕ್ಷ ಶಿವರಾಮ ಕಜೆ ವೇದಿಕೆಯಲ್ಲಿದ್ದರು.

ಶಶಿಧರ್‌ ರಾವ್‌ ಸ್ವಾಗತಿಸಿ, ರಮೇಶ್‌ ಭಟ್‌ ಉಪ್ಪಂಗಳ ಪ್ರಸ್ತಾವನೆಗೈದರು. ಕೃಷ್ಣಕುಮಾರ್‌ ರೈ ವಂದಿಸಿದರು. ರಾಕೇಶ್‌ ರೈ ಕೆಡೆಂಜಿ ಕಾರ್ಯಕ್ರಮ ನಿರ್ವಹಿಸಿದರು.

ರಾಜಕೀಯ ಬೇಡ
ಸಹಕಾರ ಕ್ಷೇತ್ರದ ಎಂಎಲ್‌ಸಿ ಸ್ಥಾನ ಆರಂಭಗೊಂಡು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಸ್ಥಾನ ಲಭ್ಯವಾಗಬೇಕು ಎಂಬ ಸಹಕಾರಿಗಳ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಸ್ಥಾನ ಲಭಿಸಿದರೆ ಜನರಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ನನಗೆ ರಾಜಕೀಯ ಸ್ಥಾನ ಬೇಡ ಎಂದು ಡಾ| ರಾಜೇಂದ್ರ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next