ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪ್ರಧಾನಿ ಕಾಲರ್ ಹಿಡಿದು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ
ಸಾಲ ಮನ್ನಾ ಮಾಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸವಾಲು ಹಾಕಿದರು.
Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಕೋರಿ ಸಿಎಂ ನಿಯೋಗ ಪ್ರಧಾನಿಗೆ ಮನವಿಯನ್ನೂ ಮಾಡಿದೆ. ರೈತರ ಸಂಕಷ್ಟ ಅರಿತು ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು. ಸಾಲ ಮನ್ನಾ ಮಾಡುವುದು ಫ್ಯಾಶನ್ಗಾಗಿ ಎಂಬ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿಕೆ ರೈತರಿಗೆ ಅಪಮಾನಮಾಡಿದಂತೆ ಎಂದರು.