ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ನಿರಂತರವಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿ. ಚಾಮುಂಡೇಶ್ವರಿ ಆಶೀರ್ವಾದ ಸಿಎಂ ಬೊಮ್ಮಾಯಿ ಮೇಲಿರಲಿ ಎಂದು ಸಹಕಾರ ಮಂಡಳಿ ಅಧ್ಯಕ್ಷ, ಶಾಸಕ ಜಿಟಿ ದೇವೇಗೌಡ ಹಾರೈಸಿದರು.
ಕೆಂಗೇರಿಯ ಗಣೇಶ ಆಟದ ಮೈದಾನದಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನಿಲ್ಲಿಸದ ಜಿಟಿ ದೇವೇಗೌಡರ ಮೇಲೆ ಸಚಿವ ಸೋಮಶೇಖರ್ ಬೇಸರಗೊಂಡ ಘಟನೆ ನಡೆಯಿತು.
ಇದನ್ನೂ ಓದಿ:ಹಿಂದುತ್ವ ವಿಚಾರ ಇಟ್ಟುಕೊಂಡು ಕರ್ನಾಟಕದಲ್ಲಿ ಬಿಜೆಪಿಗೆ ಗೆಲುವು ಸಾಧ್ಯವಿಲ್ಲ: ಸಿದ್ದರಾಮಯ್ಯ
ಸ್ವಾಗತ ಭಾಷಣ ಬೇಗ ಮುಗಿಸುವಂತೆ ಸೋಮಶೇಖರ್ ಎರಡು ಮೂರು ಬಾರಿ ಸೂಚಿಸಿದ ಜಿಟಿ ದೇವೇಗೌಡರು ಭಾಷಣ ಮುಂದುವರಿಸಿದರು. ಕೊನೆಗೆ ಇನ್ನೊಂದು ಮನವಿ ಇದೆ ಎಂದು ಮಾತಾಡುವಾಗ ಟೈಮ್ ಆಯ್ತು ಬನ್ನಿ ಸಾಕು ಎಂದು ಸೋಮಶೇಖರ್ ಹೇಳಬೇಕಾಯಿತು.
ಸಹಕಾರ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ನೀರಾವರಿ ಸಚಿವ ಗೋವಿಂದ ಕಾರಜೋಳ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಅಬಕಾರಿ ಸಚಿವ ಗೋಪಾಲಯ್ಯ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದರು.