Advertisement

ಎಲ್ಲಾ ಜಾನಪದ ಕಲಾವಿದರಿಗೂ ಅವಕಾಶ ಕಲ್ಪಿಸಿ

07:10 AM Feb 05, 2019 | |

ಕೊಳ್ಳೇಗಾಲ: ಅನಕ್ಷರಸ್ಥರಿಂದ ಸೃಷ್ಟಿಯಾಗಿರುವ ಜಾನಪದ ಕಲೆಯನ್ನು ಇಂದಿನ ಯುವಪೀಳಿಗೆ ಉಳಿಸಿ ಬೆಳೆಸಬೇಕೆಂದು ಶಾಸಕ ಎನ್‌.ಮಹೇಶ್‌ ಸಲಹೆ ನೀಡಿದರು.

Advertisement

ನಗರದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಯುವ ಸೌರಭ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ ಹೊರ ಬರಬೇಕಾದರೆ ಅವಕಾಶ ಸಿಗಬೇಕು. ಆಗ ಪ್ರತಿಭೆ ಹೊರಹೊಮ್ಮುತ್ತದೆ. ಎಲ್ಲಾ ಜಾನಪದ ಕಲಾವಿದರಿಗೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ದೇಸಿ ಸಂಸ್ಕೃತಿ: ಭಾರತದ ಸಂಸ್ಕೃತಿಗೆ ಇತರ ರಾಷ್ಟ್ರಗಳಲ್ಲಿ ಅಪಾರ ಗೌರವವಿದೆ. ಇದನ್ನು ಅಳವಡಿಸಿಕೊಳ್ಳಲು ಪ್ರಯತ್ನ ವನ್ನು ಇತರ ರಾಷ್ಟ್ರಗಳು ಮಾಡುತ್ತಿವೆ. ಆದರೆ ನಮ್ಮ ವರು ಪಾಶ್ಚಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಇದರಿಂದ ದೇಸಿ ಸಂಸ್ಕೃತಿ ನಶಿಸುತ್ತಿದೆ ಎಂದರು.

ಜಾನಪದ ಕಲೆ ಸಂಸ್ಕೃತಿಯನ್ನು ಬಿಂಬಿಸಲಿದ್ದು, ಇಂತಹ ಯುವ ಸೌರಭ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರೋತ್ಸಾಹಿಸಿದಾಗ ಮತ್ತಷ್ಟ ಬೆಲೆ ಸಿಗಲಿದೆ. ರಸಮಂಜರಿ ಸೇರಿದಂತೆ ಚಲನಚಿತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಪಾರ ಸಂಖ್ಯೆ ಯಲ್ಲಿ ಜನರು ಸೇರುತ್ತಾರೆ.

ಆದರೆ, ಜಾನಪದ ಪ್ರತಿಬಿಂಬಿಸುವ ಯುವ ಸೌರಭದಂತಹ ಕಾರ್ಯಕ್ರಮ ಗಳಿಗೆ ಬೆರಳಣಿಕೆಯ ಸಂಖ್ಯೆಯಲ್ಲಿ ಭಾಗವಹಿಸು ತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಿವಮ್ಮ ಮಾತನಾಡಿ, ಗ್ರಾಮೀಣ ಸೊಗಡು ಹೊಂದಿರುವ ಜಾನಪದ ಕಲೆಯನ್ನು ಯುವಕರು ಪ್ರೋತ್ಸಾಹಿಸಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

Advertisement

ಯುವ ಸೌರಭ: ಕಾರ್ಯಕ್ರಮದಲ್ಲಿ ಸ್ಯಾಕ್ಸೋ ಫೋನ್‌ ವಾದನವನ್ನು ಚಾಮರಾಜನಗರದ ಮಹದೇವಸ್ವಾಮಿ ಮತ್ತು ತಂಡದವರು, ಶಾಸ್ತ್ರೀಯ ಸಂಗೀತ ಚಾಮರಾಜನಗರ ಮಾದವಿ, ಸುಗಮ ಸಂಗೀತ ಯಳಂದೂರಿನ ಎಸ್‌.ಜೈಗುರು ಮತ್ತು ತಂಡದವರು, ಜನಪದಗೀತೆಗಳು ಚಾಮರಾಜ ನಗರದ ಜೆ.ಬಿ.ಮಹೇಶ ಮತ್ತು ತಂಡದವರು,

ಶಿವಂ ಮೃದಂಗ ನೃತ್ಯ ರೂಪಕ ಚಾಮರಾಜನಗರ ಅಕ್ಷತಾ ಎಸ್‌.ಜೈನ್‌ ಮತ್ತು ತಂಡದವರು, ಚಾಮ ರಾಜನಗರ ಗೊರವನ ಕುಣಿತ ಶಂಕರ ಮತ್ತು ತಂಡದವರು, ಶ್ರೀ ಮಂಟೇಸ್ವಾಮಿ ಮಹಾಕಾವ್ಯ ಕೊಳ್ಳೇಗಾಲ ಕೈಲಾಸ್‌ಮೂರ್ತಿ ಮತ್ತು ತಂಡದ ವರು ಹಾಗೂ ಗಿಳಿಯ ಪಂಜರದೊಳಿಲ್ಲ ನಾಟಕವನ್ನು ಚಾಮರಾಜನಗರ ಶಾಂತಲಾ ಕಲಾವಿದರು ನಡೆಸಿಕೊಟ್ಟರು.

ಜಿಪಂ ಸದಸ್ಯರಾದ ಜಯಂತಿ, ನಾಗರಾಜು, ನಗರಸಭಾ ಸದಸ್ಯೆ ಶಿರಿಸ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚೆನ್ನಪ್ಪ, ಟಿಎಪಿಎಂಎಸ್‌ ನಿರ್ದೇಶಕ ಚೆಲುವರಾಜು, ಮುಳ್ಳೂರು ಗ್ರಾಪಂ ಸದಸ್ಯ ಸೋಮಣ್ಣ ಉಪ್ಪಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next