Advertisement

ವಜ್ಜಲ್‌-ಪಾಟೀಲ್‌ಗೆಮತದಾರರಿಂದ ಪಾಠ

04:43 PM Jan 22, 2018 | Team Udayavani |

ಲಿಂಗಸುಗೂರು: ಜೆಡಿಎಸ್‌ ಪಕ್ಷದಿಂದ ಶಾಸಕರಾಗಿ ಈಗ ಬಿಜೆಪಿ ಸೇರಿರುವ ಮಾನಪ್ಪ ವಜ್ಜಲ್‌, ಡಾ| ಶಿವರಾಜ್‌
ಪಾಟೀಲ್‌ರಿಗೆ ಮತದಾರರೇ ತಕ್ಕಪಾಠ ಕಲಿಸುತ್ತಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

Advertisement

ಜೆಡಿಎಸ್‌ ತಾಲೂಕು ಘಟಕದಿಂದ ಪಟ್ಟಣದ ಶಾದಿಮಹಲ್‌ನಲ್ಲಿ ರವಿವಾರ ನಡೆದ ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ನಾಡಿಗೆ ಅನೇಕ ನಾಯಕರನ್ನು ನೀಡಿದ ಪಕ್ಷ ಜೆಡಿಎಸ್‌. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಆದರೆ ಪಕ್ಷದಿಂದ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡದೆ ಪಕ್ಷ ತೊರೆದ ಡಾ| ಶಿವರಾಜ ಪಾಟೀಲ್‌ ಹಾಗೂ ಮಾನಪ್ಪ ವಜ್ಜಲರು ತಾಯಿಗೆ ಮಾಡಿದ ದ್ರೋಹವಾಗಿದೆ. ಜೆಡಿಎಸ್‌ ಪಕ್ಷ ದೀನ, ದಲಿತ, ಬಡವರ ಪಕ್ಷವಾಗಿದೆ. ದುಡ್ಡಿನ ಅಹಂಕಾರದಿಂದ ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷಿಸಿ ಜನರ ದಿಕ್ಕು ತಪ್ಪಿಸುವ ದ್ರೋಹಿಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌ ಮಾತನಾಡಿ ಪ್ರಜಾಪ್ರಭುತ್ವದ ಚಿಂತನೆ, ರಾಜಕೀಯ ವಿಶ್ಲೇಷಣೆ, ಸಂವಿಧಾನದ ಸಿದ್ಧಾಂತ, ಉದ್ದೇಶ, ಗುರಿಗಳು ಮತ್ತು ಅದರ ಅನುಕೂಲಗಳ ಮಂಥನವಾಗಬೇಕಿದೆ. ಮತದಾನದ ಹಕ್ಕು ಪವಿತ್ರ ಪ್ರಭುದ್ಧತೆಯ ಸಂಕೇತವಾಗಿದೆ. ರಾಜ್ಯದಲ್ಲಿ ಕೇವಲ 20 ತಿಂಗಳು ಅಧಿಕಾರ ನಡೆಸಿದ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಯಾವ ಮುಖ್ಯಮಂತ್ರಿಯಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಂಬುನಾಥ ಯಾದವ, ಜಿಲ್ಲಾ ವಕ್ತಾರ ಅಕºರ್‌ ಹುಸೇನ್‌, ಜಿಪಂ ಸದಸ್ಯರಾದ
ಸಂಗಣ್ಣ ದೇಸಾಯಿ, ಬಸನಗೌಡ ಕಂಬಳಿ, ತಾಪಂ ಸದಸ್ಯ ಭೀಮಣ್ಣ ಹುನಕುಂಟಿ, ಮುಖಂಡರಾದ ನಂದೇಶ ನಾಯಕ, ಇಮಿಯಾಜ್‌, ಖಾಜಾಹುಸೇನ, ಅಮೀರಬೇಗ್‌, ಹುಸೇನ್‌ ಪಾಷಾ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next