ಕೆಲವೊಮ್ಮೆ ಮುಂಗಾಲನ್ನು ಮುಂದೆ ಚಾಚಿ ಮೊಳಕಾಲಿನ ಮೇಲೆ ಕುಳಿತುಕೊಳ್ಳುವುದು. ಇದು ಕೊಕ್ಕರೆ ಅಥವಾ ಬೆಳ್ಳಹಕ್ಕಿ ಹೀಗೆ ಕುಳಿತುಕೊಳ್ಳುವುದಿಲ್ಲ. ಕುತ್ತಿಗೆಯಲ್ಲಿ ಚೀಲ ಇರುವುದೇ ಗುಂಪಿನ ದೊಡ್ಡಕೊಕ್ಕರೆ ಮಾತ್ರ. ಹೀಗೆ ಕಾಲು ಮುಂದೆಚಾಚಿ, ಮೊಣಕಾಲಿನ ಮೇಲೆ ಕುಳಿತುಕೊಳ್ಳುತ್ತದೆ. ಸೈಕೊನಿಡ್ಲೆಕುಟುಂಬಕ್ಕೆ ಈ ಹಕ್ಕಿ ಸೇರಿದೆ.
Advertisement
ಬಿಹಾರದಲ್ಲಿ ಕೆಲವೊಮ್ಮೆ ಚುಂಚಿನಿಂದ ಬಾಲದವರೆಗೆ 87 ರಿಂದ 93 ಸೆಂ.ಮೀ. ಉದ್ದ ಇರುವ ಹಕ್ಕಗಳೂ ಸಹ ಕಂಡಿವೆ. ಬೋಳು ತಲೆ ನೆತ್ತಿಯಲ್ಲಿ ಕೆದರಿದಂತಿರುವ ಕೂದಲಿದೆ. ಚುಂಚು ಬುಡದಲ್ಲಿ ದಪ್ಪ ಇದೆ. ಆದರೆ ಇದರ ಮೇಲುcಂಚು ಮತ್ತು ಕೆಳಚುಂಚಿನ ನಡುವೆ ಮುಚ್ಚಿ ಕೊಂಡಿರುವಾಗ ಗ್ಯಾಪ್ ಇರುವುದಿಲ್ಲ. ಇದು 4 ರಿಂದ 5,71ಕೇಜಿ ಇಲ್ಲವೇ ದೊಡ್ಡ ಹಕ್ಕಿ 8.ಕ ಕೇಜಿ ಬಾರ ಇರುವುದು. 25.8 ಸೆಂಮೀ ನಿಂದ 30,8 ಸೆಂ ಮೀ. ದೊಡ್ಡ ಚುಂಚಿರುವುದು. ಇದನ್ನು ತುಂಬಾ ಹೋಲುವ ಇನ್ನೊಂದು ದೊಡ್ಡಕೊಕ್ಕರೆಇದೆ. ಆಕಾರದಲ್ಲಿ ಇದನ್ನು ತುಂಬಾ ಹೋಲುವುದು. ಆದರೆ ಅದರ ಕುತ್ತಿಗೆ ಬುಡದಲ್ಲಿ ಮುಂಭಾಗದದಲ್ಲಿ ಚೀಲ ಇರುವುದು. ಇದರಿಂದಾಗಿ ಇದನ್ನು ಅದಕ್ಕಿಂತ ಬೇರೆ ಎಂದು ಸುಲಭವಾಗಿ ಗುರುತಿಸ ಬಹುದಾಗಿದೆ. ಕುತ್ತಿಗೆ ಸ್ವಲ ³ಕೆದರಿದಂತಹ ರೋಮಗಳಿಂದ ಕೂಡಿದೆ. ಹೊಳೆವ ಕಪ್ಪು ಬಣ್ಣರೆಕ್ಕೆ ಬೆನ್ನುಗಳಲ್ಲಿ ಪ್ರಧಾನವಾಗಿ ಎದ್ದು ಕಾಣುವುದು. ಹೊಟ್ಟೆ ಭಾಗ ಬಿಳಿ ಇದೆ. ಹೊಳೆವ ಕಪ್ಪುಕಣ್ಣುಇದೆ. ಕಪ್ಪು ಬೇಳೆಯ ಸುತ್ತ ಬಿಳಿ ಬಣ್ಣದ ವರ್ತುಲ ಇದೆ. ಪುಕ್ಕದ ಕೆಳಭಾಗ ಬಿಳಿ ಬಣ್ಣ ಇದೆ. ಮರಿ ಮಾಡುವ ಸಮಯದಲ್ಲಿ ಮುಖ ಕೆಂಪು ಬಣ್ಣ ಕೂಡಿರುತ್ತದೆ. ಕುತ್ತಿಗೆಯಲ್ಲಿ ಕಿತ್ತಳೆ ಬಣ್ಣಎದ್ದು ಕಾಣುವುದು.
ಮಧ್ಯದ ಗರಿಯ ಪಾರ್ಶ್ವದಲ್ಲಿ ಬಿಳಿ ಪಟ್ಟಿಯಿಂದ ಕೂಡಿರುತ್ತದೆ. ಈ ಗುಂಪಿನ ಇತರ ಕೊಕ್ಕರೆಗಳಂತೆ ಇದು ಸಹ ಕುತ್ತಿಗೆಯನ್ನು ಸ್ವಲ್ಪ ಕುಗ್ಗಿಸಿಕೊಂಡು ಎರಡೂ ಕಾಲನ್ನು ಹಿಂದೆಚಾಚಿ ಹಾರುವುದು. ಇದರ ರೆಕ್ಕೆಯ ಉದ್ದ 57.5 ಸೆಂ.ಮೀ ನಿಂದ 66 ಸೆಂ.ಮೀ ಅಷ್ಟು ದೊಡ್ಡದು. ಹಾಗಾಗಿ ಬಹುದೂರ ವಲಸೆ ಹೋಗುವ ಮತ್ತು ಹಾರುವ ಸಾಮರ್ಥ್ಯ ಇದಕ್ಕಿದೆ. ಗಂಡು, ಹೆಣ್ಣು ಸುಮಾರು ಒಂದೇ ರೀತಿ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಗಂಡು ಹೆಣ್ಣಿಗಿಂತ ಹೆಚು ಗಾತ್ರ ಮತ್ತು ದೊಡ್ಡದಾಗಿರುತ್ತದೆ. ಗಂಡು ಹೆಚ್ಚು ಭಾರ ಇರುವುದು. ಗಂಡಿನ ಚುಂಚು ದೊಡ್ಡ ಮತ್ತು ಹೆಚ್ಚು ಗಾತ್ರ ಇರುತ್ತದೆ. ಇದರಗಾತ್ರ ಮತ್ತು ಭಾರ ವ್ಯತ್ಯಾಸ ಹಾರುಕೆವಿಯಲ್ಲಿ ಅಥವಾ ರೆಕ್ಕೆ ಬಡುಯಿವುದರಲ್ಲಿ ವ್ಯತ್ಯಾಸ ಉಂಟು ಮಾಡುವುದೋ? ಎಂಬುದು ಸಂಶೋಧನೆಗೆ ಅರ್ಹ ವಿಷಯವಾಗಿದೆ. ದೊಡ್ಡ, ದೊಡ್ಡ ನದೀ ತೀರ, ಗಿಡ ಮತ್ತು ನಡುಗಡ್ಡೆಗಳಿಂದ ಕೂಡಿದ ಪ್ರದೇಶ, ಮೇಂಗ್ರೋ ಗಿಡಗಳು ಬೆಳೆದ ಗಜನೀ, ಕೆಸರು ಮಣ್ಣುತುಂಬಿದ ನದಿಗಳ ಮುಖಜ ಪ್ರದೇಶ, ಮೀನುಗಳು ವಿಫುಲವಾಗಿರುವ ನದಿ ಸಮುದ್ರಕ್ಕೆ ಸೇರುವ ಸ್ಥಳ ಇದಕ್ಕೆ ಪ್ರಿಯ.
Related Articles
Advertisement
ಅಪರೂಪಕ್ಕೆ ಏಡಿ, ಇತರ ಸಮುದ್ರ ಜೀವಿಗಳನ್ನು ತಿನ್ನುವುದಿದೆ. ಸಾಮಾನ್ಯವಾಗಿಇದು ಮೌನವಾಗಿರುವುದು. ತನ್ನಗೂಡು ಮತ್ತು ಮೊಟ್ಟೆ ಮರಿಗಳನ್ನು ಕಾಪಾಡುವಾಗ ಒಂದನೊಂದು ಚುಂಚನ್ನು ತಿಕ್ಕಿಕೊಳುತ್ತದೆ. ಹೆಣ್ಣು ಹಕ್ಕಿ ಚುಂಚನ್ನು ಎತ್ತಿ ಹಿಡಿಯುವುದು. ಗಂಡು ರೆಕ್ಕೆ ಜೊತೆ ಚುಂಚು ಘಮಿಸುವುದು ಮತ್ತು ಪ್ರಣಯದಾಟ ನಡೆಸುವುದು.
ಫೆಬ್ರವರಿಯಿಂದ ಮೇ ತನಕ ದಕ್ಷಿಣ ಹಾಗೂ ಉತ್ತರ ಭಾರತದ ಪಶ್ಚಿಮ ಭಾಗಗಳಲ್ಲಿ ನವೆಂಬರ ದಿಂದ ಜನವರಿಯಲ್ಲಿ ಎತ್ತರದ ಮರಗಳ ಮೇಲೆ ಕೋಲುಗಳನ್ನು ಸೇರಿಸಿ ಕಾಲನಿ ರೂಪದಲ್ಲಿ 6-7 ಗೂಡುಕಟ್ಟುತ್ತವೆ. 2-4 ಬಿಳಿಬಣ್ಣದ ಮೊಟ್ಟೆ ಇಡುವುದು. ಇದರಗೂಡು ಒಂದು ಮೀಟರ್‌ನಷ್ಟು ವ್ಯಾಸಇರುತ್ತದೆ. 28- 30 ದಿನ ಕಾವು ಕೊಟ್ಟು ಮರಿಮಾಡುತ್ತವೆ. ನೇಪಾಳ, ಶ್ರೀಲಂಕಾಗಳಲ್ಲಿ ಇದರ ಗೂಡಿನ ಸಂಖ್ಯೆ 35ರಿಂದ 101ರ ತನಕ ದೊರೆತ ದಾಖಲೆಗಳಿವೆ. ವಿಶೇಷ ಎಂದರೆ ಮರಗಳ ಮೇಲೆ ಸುಮಾರು 35 ರಿಂದ 45 ಅಡಿ ಎತ್ತರದಲ್ಲಿ ಗೂಡಿನ ಕಾಲನಿ ನಿರ್ಮಿಸುತ್ತವೆ. 30 ನಿಮಿಷಕ್ಕೊಮ್ಮೆ ಮರಿಗಳಿಗೆ ಗುಟುಕು ನೀಡುತ್ತವೆ. ಕಾಲನಿ ಗಾತ್ರ ,ಗೂಡಿನಗಾತ್ರ, ಮರಿಗಳ ವಯಸ್ಸನ್ನು ಆಧರಿಸಿ ಆಹಾರ ನೀಡುವಲ್ಲಿ ವ್ಯತ್ಯಾಸ ಇರುತ್ತದೆ. ಇದರ ಮರಿಗಳ ಆರೈಕೆ , ಮರಿಗಳ ಬೆಳವಣಿಗೆಗೆ ಅನುಗುಣವಾಗಿ ಯಾವ ರೀತಿಆಹಾರ ನೀಡುವುದು? ಇದುಆರೋಗ್ಯದ ಮೇಲೆ ಯಾವರೀತಿ ಪರಿಣಾಮ ಉಂಟುಮಾಡುವವು ಎಂಬ ಕುರಿತು ಅಧ್ಯಯನ ನಡೆಯಬೇಕಿದೆ. ವಲಸೆ ಹಕ್ಕಿಯಾದರೂ ಇದನ್ನು ಬೇಟೆಯಾಡದೆ ಇದರ ಇರು ನೆಲೆಯಲ್ಲಿ ಗೂಡು ನಿರ್ಮಿಸಲು ತೊಂದರೆ ಕೊಡದೆ ಕಾಪಾಡಿದರೆ ಇದರ ಸಂತತಿ ಉಳಿದೀತು. ಗುರುರಾಜ್ ದಾವಣಗೆರೆ