Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮನೆಯೊಂದು 100 ಬಾಗಿಲು ಆಗಿದೆ. ವಕ್ಫ್ ವಿರುದ್ಧ ಹೋರಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮಾತನ್ನೂ ಕೇಳುವುದಿಲ್ಲ, ವರಷ್ಠರ ಮಾತನ್ನೂ ಕೇಳುವುದಿಲ್ಲ. ಬಾಣಂತಿಯರ ಸಾವಿನ ವಿರುದ್ಧ ಹೋರಾಡುತ್ತೇನೆ ಎನ್ನುತ್ತಿರುವ ಅಶೋಕ್ ಅವರೂ ವಿಜಯೇಂದ್ರರ ಮಾತು ಕೇಳುವುದಿಲ್ಲ. ಛಲವಾದಿ ನಾರಾಯಣಸ್ವಾಮಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ವಿಜಯೇಂದ್ರ ಮಾತಿಗೆ ಅವರ ಪಕ್ಷದಲ್ಲೇ ಬೆಲೆ ಇಲ್ಲ. ಇನ್ನು ನಾವೇಕೆ ಬೆಲೆ ಕೊಡಬೇಕು ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಮಹಾರಾಷ್ಟ್ರದಿಂದ ಸುಪಾರಿ ಕೊಲೆಗಾರರನ್ನು ಕರೆಸಿದ್ದಾರೆ. ಚಂದು ಪಾಟೀಲ್ ಸೇರಿ ಹಲವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಕ್ರುದ್ಧರಾದ ಪ್ರಿಯಾಂಕ್, ರೀ ಯಾರ್ರೀ ಚಂದು ಪಾಟೀಲ್? ಸುಪಾರಿ ಕೊಡುವಂಥಾ ಯಾವ ಪೆದ್ದು ಕೆಲಸ ಮಾಡಿದ್ದಾರೆ? ನಮಗೇನು ಬೇರೆ ಕೆಲಸವೇ ಇಲ್ಲವೇ? ವಿಜಯೇಂದ್ರ ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಿದರೆ ಒಳ್ಳೆಯದು. ನಾಲಗೆ ಮೇಲೆ ಹಿಡಿತ ಇರಲಿ ಎಂದರು. ʼಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಮರಣ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಎಲ್ಲಿಯೂ ಇಲ್ಲ. ಅವರ ರಾಜಕೀಯ ಬೆಳವಣಿಗೆ ಸಹಿಸಲಾರದೆ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದಂತೆ ಪ್ರಕರಣದಲ್ಲಿ ಅವರ ಪಾತ್ರವಿಲ್ಲ. ಅವರು ರಾಜೀನಾಮೆ ಕೊಡುವ ಆವಶ್ಯಕತೆ ಇಲ್ಲ. –ಎಚ್.ಕೆ. ಪಾಟೀಲ್, ಕಾನೂನು ಸಚಿವ