ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಮಂಗಲ ಗ್ರಾಮದಲ್ಲಿ ಕಳೆದ ವಾರ ಸುರೇಶ್ ಮತ್ತು ಉಮೇಶ್ ಅವರ ಹಸು-ಕರುಗಳು ಸೇರಿದಂತೆ ಅನೇಕ ಜಾನುವಾರುಗಳು ಚಿರತೆ ಕೊಂದಿತ್ತು. ಇದರಿಂದಾಗಿ ಗ್ರಾಮಸ್ಥರು ಚಿರತೆ ಸೆರೆಗೆ ಪಟ್ಟು ಹಿಡಿದರು.
ಗ್ರಾಮಸ್ಥರ ಒತ್ತಾಯಕ್ಕೆ ಮಂಗಲ ಹೊರವಲಯದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಸಿದ್ದರು. ಸೋಮವಾರ ರಾತ್ರಿ ಚಿರತೆ ಬೋನಿನಲ್ಲಿ ಬಿದ್ದಿದೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಸೆರೆಯಾದ ಚಿರತೆಯನ್ನು ಕಾಡಿನೊಳಗೆ ಬಿಟ್ಟರು.
ಈ ಭಾಗದಲ್ಲಿ ಜಾನುವಾರುಗಳ ನಂಬಿ ಜೀವನ ನಡೆಸುತ್ತಾರೆ. ಕಾಡು ಪ್ರಾಣಿಗಳ ದಾಳಿಯಿಂದ ಹಸುಗಳು ಮೃತ ಪಟ್ಟರೆ ಇಲಾಖೆ ನೀಡುವ ಪರಿಹಾರದಿಂದ ಇನ್ನೊಂದು ಹಸು ಕೊಳ್ಳಲು ಸಾಧ್ಯವಾಗುವುದಿಲ್ಲ, ಅದ್ದರಿಂದ ಜಾನುವಾರ ರಕ್ಷಣೆ ದೊಡ್ಡ ಸವಾಲಾಗಿದೆ. ಸದ್ಯ ಚಿರತೆ ಸೆರೆಯಾಗಿರುವುದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಗ್ರಾಮಸ್ಥ ಉಮೇಶ್ ತಿಳಿಸಿದರು.
ಇದನ್ನೂ ಓದಿ : ಭವಿಷ್ಯದಲ್ಲಿ ಜೈವಿಕ ತಂತ್ರಜ್ಞಾನದ್ದು ನಿರ್ಣಾಯಕ ಪಾತ್ರ : ಸಚಿವ ಅಶ್ವತ್ಥನಾರಾಯಣ