Advertisement

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

04:39 PM Jun 16, 2021 | keerthan |

ವಿಜಯಪುರ: ಜಿಲ್ಲೆಯ ಭೀಮಾ ತೀರದ ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಆಹಾರಕ್ಕಾಗಿ ರೈತರ ಜಾನುವಾರುಗಳನ್ನು ಬಲಿ ಪಡೆಯುವ ಮೂಲಕ ಭೀತಿ ಮೂಡಿಸಿದೆ.

Advertisement

ಜಿಲ್ಲೆಯ ಆಲಮೇಲ ತಾಲೂಕಿನ ಬೊಮ್ಮನಹಳ್ಳಿ, ದೇವರನಾವದಗಿ ಗ್ರಾಮಗಳ ಹೊಲಗಳಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿರುವ ಚಿರತೆ, ಈಗಾಗಲೇ ಎರಡು ಆಕಳುಗಳನ್ನು ಬಲಿ ಪಡೆದಿದೆ. ಮಂಗಳವಾರ ತಡರಾತ್ರಿ ಈ ಪರಿಸರದಲ್ಲಿ ಸಂಚರಿಸಿದ ಚಿರತೆ, ರೈತರು ಜಮೀನುಗಳಲ್ಲಿ ಕಟ್ಟಿ ಹಾಕಿದ್ದ ಎರಡು ಆಕಳುಗಳ ಜೀವ ಪಡೆದಿದೆ.

ಇದನ್ನೂ ಓದಿ:‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಜಾನುವಾರುಗಳನ್ನು ಹತ್ಯೆ ಮಾಡಿರುವ ಚಿರತೆ ಈ ಭಾಗದಲ್ಲಿ ದಟ್ಟವಾಗಿರುವ ಕಬ್ಬಿನ ಗದ್ದೆಗಳಲ್ಲಿ ನೆಲೆಯೂರಿದ್ದು, ರೈತರು, ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಗೆ ತೆರಳಲು ಭಯಪಡುವಂತೆ ಮಾಡಿದೆ.

Advertisement

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾನುವಾರುಗಳ ಮೇಲೆ ನಡೆದಿರುವ ದಾಳಿಯನ್ನು ಚಿರತೆ ದಾಳಿಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಶಾಸಕ ರಮೇಶ ಭೂಸನೂರ, ಅರಣ್ಯ ಅಧಿಕಾರಿಗಳು ತ್ವರಿತವಾಗಿ ಚಿರತೆಯನ್ನು ಸೆರೆ ಹಿಡಿದು ಜನರನ್ನು ಭಯ ಮುಕ್ತಗೊಳಿಸಿ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next