ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿಂಗಪ್ಪ ಹೆಗಡೆ ಅವರ ತೋಟದಲ್ಲಿ ಶುಕ್ರವಾರ ರಾತ್ರಿ 1 ಗಂಟೆಗೆ ಚಿರತೆಯೊಂದು ತೋಟದ ಕಬ್ಬು ಬೆಳೆದ ಪ್ರದೇಶದಲ್ಲಿ ಸಾಕಿದ ನಾಯಿಯೊಂದು ತಿಂದು ಹಾಕಿರುವ ಘಟನೆ ನಡೆದಿದೆ.
ಜಿಲ್ಲಾ ಅರಣ್ಯಾಧಿಕಾರಿಗಳು ತೋಟದ ಮಾಲಿಕರ ಮೆನಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ವಿಕ್ಷೀಸಿದಾಗ ದೊಡ್ಡದಾದ ಚಿರತೆ ಆಗಮಿಸಿರುವ ಘಟನೆ ಕಂಡು ಬಂದಿದ್ದು, ಚಿರತೆ ನಾಯಿಯನ್ನು ತಿನ್ನುತ್ತಿರುವ ದೃಶ್ಯ ಸ್ಪಷ್ಟಗೊಂಡಿದೆ.
ವಿಜಯಪೂರ, ಬೀಳಗಿ, ಬಾಗಲಕೋಟ ಮತ್ತು ಗೋಕಾಕ ತಾಲೂಕಿನ ಅರಣಾಧಿಕಾರಿಗಳು ಚಿರತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 4 ತಂಡಗಳ ಮೂಲಕ ಶನಿವಾರ ನಡೆಯಲಿರುವ ಕಾರ್ಯಾಚರಣೆಯಲ್ಲಿ ಪರಿಣಿತ ತಜ್ಷರು, ಅರವಳಿಕೆ ತಜ್ಞರು ಸಹಿತ ನಾಲ್ಕು ಸ್ಥಳಗಳಲ್ಲಿ ಬೋನ್ ಇರಿಸಲಾಗಿದೆ. ಕಳೆದ ಮೂರು ವರ್ಷದ ಹಿಂದೆ ವಿಜಯಪೂರ ಮತ್ತು ಬೀಳಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜಮಖಂಡಿ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿರುವ ಉದಾಹರಣೆಯಿಲ್ಲ ಕುಂಬಾರಹಳ್ಳ ಗ್ರಾಮದ ತೋಟದ ಜನತೆ ಭಯ ಭೀತರಾಗಿದ್ದು, ಗ್ರಾಮಸ್ಥರು ಮನೆಯಲ್ಲಿ ಇರಬೇಕು. ಚಿರತೆಯ ಟ್ರ್ಯಾಪಿಂಗ್ ನಡೆದಯುತ್ತಿದ್ದು ಚಿರತೆಯನ್ನು ಶೀಘ್ರದಲ್ಲಿ ಸೆರೆಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ :ಪ್ರಯಾಣಿಕ ವಾಹನ ತೆರಿಗೆ ಪಾವತಿಗೆ ವಿನಾಯಿತಿ : ಡಿಸಿಎಂ ಸವದಿ
ಜನರಲ್ಲಿ ಶಾಸಕರ ಮನವಿ…..
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಚಿರತೆ ಕಂಡು ಬಂದಿದೆ. ಚಿರತೆಗಾಗಿ ಅರಣ್ಯ ಇಲಾಖೆಯು ಜಾಲ ಬಿಸಿದ್ದು, ಚಿರತೆ ಆಗಮಿಸಿರುವ ಪ್ರದೇಶದಲ್ಲಿ ಯಾರು ಸಂಚರಿಸಬಾರದು. ಗೋಕಾಕ, ಬೀಳಗಿ ಮತ್ತು ಬಾಗಲಕೋಟದಿಂದ ಚಿರತೆ ಹಿಡಿಯುವ ತಜ್ಷರು ಆಗಮಿಸಿದ್ದಾರೆ. ಜನರು ಭಯಭೀರಾಗದೇ ಮನೆಯಲ್ಲಿ ಇರಬೇಕು.
-ಆನಂದ ನ್ಯಾಮಗೌಡ ಶಾಸಕರು ಜಮಖಂಡಿ.