Advertisement

ಬ್ರಿಟನ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಶೇ.200ರಷ್ಟು ಏರಿಕೆ

09:53 PM Sep 24, 2022 | Team Udayavani |

ಲಂಡನ್‌/ನವದೆಹಲಿ: ಯುನೈಟೆಡ್‌ ಕಿಂಗ್‌ಡಂನಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂಗಳ ಮೇಲೆ ಹಲ್ಲೆ ಹೆಚ್ಚಾಗಿದೆ.

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣಗಳು ಶೇ. 200 ಏರಿಕೆ ಕಂಡಿದೆ ಎಂದು ಅಲ್ಲಿನ ಸರ್ಕಾರಿ ವರದಿಗಳೇ ತಿಳಿಸಿವೆ.

ಬ್ರಿಟನ್‌ನ ಗೃಹ ಇಲಾಖೆಯ ವರದಿ ಪ್ರಕಾರ 2017-18ರಲ್ಲಿ ಹಿಂದೂಗಳ ಮೇಲೆ ಹಲ್ಲೆ ವಿಚಾರದಲ್ಲಿ ಒಟ್ಟು 58 ಪ್ರಕರಣಗಳು ದಾಖಲಾಗಿದ್ದವು. ಅದು 2020-21ರಲ್ಲಿ 166ಕ್ಕೆ ಏರಿದೆ. 2018-19 ಮತ್ತು 2019-20ರಲ್ಲಿ ತಲಾ 114 ಹಲ್ಲೆ ಪ್ರಕರಣ ದಾಖಲಾಗಿತ್ತು.

ಈಗಿನ ಗಲಭೆಗೆ ಕಾರಣ?
ಆ.28ರಂದು ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತ್ತು. ಪಂದ್ಯ ಕಳೆದು ಕೆಲವು ದಿನಗಳು ಕಳೆದ ಬಳಿಕ ಬ್ರಿಟನ್‌ನಲ್ಲಿ ಇರುವ ಪಾಕಿಸ್ತಾನದ ಮೂಲದ ಕೆಲವರು, ಸಿಟ್ಟಿಗೆದ್ದಿದ್ದು, ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ನಂತರ ಹಿಂದೂಗಳು ಮಸೀದಿಯನ್ನು ಹಾಳುಗೆಡವುತ್ತಿದ್ದಾರೆ, ಮುಸ್ಲಿಂ ಬಾಲಕಿಯನ್ನು ಅಪಹರಣ ಮಾಡಿದ್ದಾರೆ ಎಂದು ಸುದ್ದಿ ಹರಡಿತ್ತು. ಇದರಿಂದಾಗಿ ಹಿಂದೂಗಳ ಮೇಲೆ ಹಲ್ಲೆಗಳು ಆರಂಭವಾಯಿತು. ಇದು ಹಲವು ನಗರಗಳಿಗೆ ಹಬ್ಬಿತು.

ವಿಎಚ್‌ಪಿ ಪ್ರತಿಭಟನೆ:
ಬ್ರಿಟನ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ನವದೆಹಲಿಯಲ್ಲಿ ಇರುವ ಬ್ರಿಟನ್‌ ರಾಯಭಾರ ಕಚೇರಿ ಎದುರು ಸೇರಿ ಪ್ರತಿಭಟನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next