Advertisement
ಪತ್ರಕರ್ತರ ಜತೆ ಮಾತನಾಡಿದ ಅವರು, ಎರಡೂ ಜಿಲ್ಲೆಯವರು ಅಭಿಪ್ರಾಯ ತಿಳಿಸಿದ್ದಾರೆ. ಅಂತಿಮವಾಗಿ ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಕಾರ್ಯಕರ್ತರಿಗೆ ಗೆಲುವು ಮುಖ್ಯವೇ ಹೊರತು ಅಭ್ಯರ್ಥಿ ಯಾರು ಎಂಬುದಲ್ಲ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಜವಾಬ್ದಾರಿ ನೀಡುವ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ. ಈ ವಿಷಯ ರಾಜ್ಯಮಟ್ಟದಲ್ಲಿ ತೀರ್ಮಾನವಾಗಲಿದೆ. ಅವರು ನೀಡುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ. ಅರುಣ್ ಪುತ್ತಿಲರಿಗೆ ಜವಾಬ್ದಾರಿ ನೀಡಬೇಕು ಎಂದು ನಾವು ವರಿಷ್ಠರಿಗೆ ಮನವಿ ಮಾಡಿದ್ದೇವೆ ಎಂದು ಸತೀಶ್ ಹೇಳಿದರು. ಆರೋಪ ಮುಕ್ತರಾಗಿ ಬರುವ ವಿಶ್ವಾಸ ಇದೆ
ಪುತ್ತಿಲ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಕುಂಪಲ, ಅರುಣ್ ಪುತ್ತಿಲ ಅವರು ಪುತ್ತೂರು ಭಾಗದ ಪ್ರಬಲ ಜನ ನಾಯಕ. ಆರೋಪಕ್ಕೆ ಧೃತಿಗೆಡದೆ ಅವರು ಕಾನೂನು ಮಾರ್ಗದಲ್ಲಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಜಾಮೀನು ಸಿಕ್ಕಿದೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ನಾನೇನೂ ಮಾತನಾಡುವುದಿಲ್ಲ. ಅವರು ಆರೋಪ ಮುಕ್ತರಾಗಿ ಬರುವ ವಿಶ್ವಾಸ ಇದೆ ಎಂದರು.