ಆನೇಕಲ್: ಬುಡಕಟ್ಟು ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ. ಕಾಡಂಚಿನಲ್ಲಿ ನೆಲೆಸಿರುವ ಮುಗ್ಧ ನಿವಾಸಿಗಳು ನಿಮ್ಮ ಹಕ್ಕನ್ನು ಕೇಳಿ ಪಡೆಯುವ ಜತೆಗೆ ನೀವು ಸಂವಿಧಾನದಡಿ ಸವಲತ್ತು ಪಡೆಯುವ ಮಾಲೀಕರು ಎಂಬುದನ್ನು ಅರಿಯಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಗೋಕುಲ್ ತಿಳಿಸಿದರು.
ತಾಲೂಕಿನ ಬನ್ನೇರುಘಟ್ಟ ದಾಖಲೆ ಹಕ್ಕಿಪಿಕ್ಕಿ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ನಡೆದ ಬುಡಕಟ್ಟು ಜನಾಂಗದವರಿಗಾಗಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯ ಮಡಿಲೊಳಗೆಬದುಕು ಕಟ್ಟಿಕೊಂಡಿದ್ದರೂ ಆಧುನಿಕ ಸಮಾಜದತ್ತಮುಖ ಮಾಡಿ ನಿಮ್ಮಲ್ಲಿನ ಮೂಢ ನಂಬಿಕೆ ಹಾಗೂಆಚರಣೆ ಬದಿಗೊತ್ತಿ ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ಸಮ ಸಮಾಜದ ಹಕ್ಕುಗಳನ್ನು ಕೇಳಿ ಪಡೆಯಬೇಕು ಎಂದರು.
ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಬಿಟ್ಟು ಸರ್ಕಾರ ನೀಡುತ್ತಿರುವ ಹಲವು ಯೋಜನೆ ಪಡೆದುಕೊಳ್ಳಬೇಕು. ಅಮೂಲ್ಯ ನೈಸರ್ಗಿಕ ಸಂಪತ್ತನ್ನುಕಡಿಮೆ ಮೌಲ್ಯಗಳಿಗೆ ನೀಡಿ ಅತ್ಯಲ್ಪ ಆಹಾರಪದಾರ್ಥ ಪಡೆಯುವ ಪದ್ಧತಿ ಕೈ ಬಿಟ್ಟು ಸರ್ಕಾರಮತ್ತು ಕಾನೂನನ್ನು ಗೌರವಿಸಬೇಕೆಂದರು.ಸಹಾಯಕ ಸರ್ಕಾರಿ ಅಭಿಯೋಜಕಚಂದ್ರಶೇಖರ್ ಮಾತನಾಡಿ, ಬದಲಾವಣೆ ಎಂಬುದು ಜಗದ ನಿಯಮವಾಗಿದೆ. ಸ್ವತಂತ್ರ ಬಂದ74 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದ್ದು, ಹೊಸ ಪದ್ಧತಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಇದೆ. ಸರ್ಕಾರದಯೋಜನೆಗಳಲ್ಲಿ ಕೆಲವನ್ನು ಪಡೆದು ಅಲ್ಪತೃಪ್ತಿಯನ್ನು ಕಾಣುವ ಬದಲು ಸಾಕ್ಷರತೆಯಿಂದಸಂಪೂರ್ಣ ಹಕ್ಕು ಪಡೆಯಲು ಸಜ್ಜಾಗಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಮಾರ್ ದೈವಜ್ಞ, ಬನ್ನೇರುಘಟ್ಟಆರಕ್ಷಕ ಉಪ ನಿರೀಕ್ಷಕ ಗೋವಿಂದ, ವಕೀಲ ಶ್ರೀಕಂಠಾಚಾರ್ ಇದ್ದರು.
ಸಮುದಾಯದ ಕಲ್ಯಾಣಕ್ಕೆ ಮುಂದಾಗಿ : ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಿಂದುಳಿದ ಪ್ರದೇಶ ಮತ್ತು ಜನರ ಏಳಿಗೆಗೆ ಹಲವುಯೋಜನೆ ಜಾರಿ ಮಾಡಿದ್ದು, ಸಮುದಾಯದಕಲ್ಯಾಣಕ್ಕಾಗಿ ಮುಂದಾಗಬೇಕು. ಅವಶ್ಯಕತೆಇದ್ದಲ್ಲಿ ಉಚಿತ ಕಾನೂನು ನೆರವು ನೀಡಲು ಬದ್ಧರಾಗಿದ್ದು, 75ನೆಯ ಸ್ವಾತಂತ್ರಸಂಭ್ರಮದಲ್ಲಿ ನೂತನ ಬದಲಾವಣೆಗಳೊಂದಿಗೆ ಪಾಲ್ಗೊಳ್ಳುವ ಸಂಕಲ್ಪ ಮಾಡಬೇಕುಎಂದು ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ್ ಹೇಳಿದರು.