Advertisement
ಬೆಂಗಳೂರು ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಸದರು, ಶಾಸಕರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ವಿಧಾನಸಭೆ ಟಿಕೆಟ್ ಹಂಚಿಕೆ ವಿಚಾರ ದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಯಾರೂ ಟಿಕೆಟ್ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತಿಲ್ಲ ಮತ್ತು ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಸಭೆಗೆ ಸಂಬಂಧಿಸಿ ದಂತೆ ಮೊದಲೇ ತಾವು ಸಂಗ್ರಹಿಸಿದ್ದ ಮಾಹಿತಿಯೊಂದಿಗೆ ಆಗಮಿಸಿದ್ದ ಅಮಿತ್ ಶಾ, ಇತರರ ಮಾತು ಕೇಳುವುದಕ್ಕಿಂತ ತಾವೇ ಹೆಚ್ಚಾಗಿ ಮಾತನಾಡಿದರು. ಪ್ರತಿಯೊಬ್ಬರ ಮಾಹಿತಿಯೂ ಶಾ ಬಳಿ ಇದ್ದುದರಿಂದ ಬಹುತೇಕರು ಮೌನವಾಗಿ ಅಮಿತ್ ಶಾ ನಿರ್ದೇಶನಗಳನ್ನು ಪಾಲಿಸಿದರು.
ಅಭ್ಯರ್ಥಿ ಘೋಷಣೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಸಂಸದರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೂ ಅಷ್ಟೇ ಕಠಿಣವಾಗಿ ಪ್ರತಿಕ್ರಿಯಿಸಿದ ಶಾ, ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗುವುದು ಎಂದು ಅನಂತ ಕುಮಾರ್ ಹೇಳಿದರೆ ಅದು ಭರವಸೆ ಅಷ್ಟೇ ಹೊರತು ಖಚಿತ ಅಲ್ಲ ಎಂದು ಹೇಳುವ ಮೂಲಕ ಶೋಭಾ ಕರಂದ್ಲಾಜೆ ಅವರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಗೆ ತಣ್ಣೀರೆರಚಿದರು. ಸಂಸದರಿಗೆ ನಿರಾಸೆ ಕಾದಿದೆ ಎಂಬ ಮುನ್ಸೂಚನೆಯನ್ನೂ ನೀಡಿದರು.
ಜತೆಗೆ ಪರಿವರ್ತನಾ ಯಾತ್ರೆಯಲ್ಲಿ ಬಹಿರಂಗವಾಗಿ ಅಭ್ಯರ್ಥಿ ಘೋಷಣೆ ಮಾಡುತ್ತಿರುವ ಯಡಿಯೂರಪ್ಪ ಅವರಿಗೂ ಹೇಳಬೇಕಾದ ಸಂದೇಶವನ್ನು ರವಾನಿಸಿದರು. 15ರೊಳಗೆ ವರದಿ ನೀಡಲು ಸೂಚನೆ
ಬೆಂಗಳೂರು: ಸಂಸದರು ಮತ್ತು ಶಾಸಕರು ತಮಗೆ ವಹಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ರಾಜ್ಯಾಧ್ಯಕ್ಷ ಬಿ.
ಎಸ್.ಯಡಿಯೂರಪ್ಪ, ನೆಪಗಳನ್ನು ಹೇಳದೆ ಜ. 15ರೊಳಗೆ ಉಸ್ತುವಾರಿ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಚರ್ಚಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನ ವಿಳಂಬ ವಾದ ಹಿನ್ನೆಲೆಯಲ್ಲಿ ಸಂಸದರು, ಶಾಸಕರೊಂದಿಗೆ ಅನೌಪ ಚಾರಿಕ ಸಭೆ ನಡೆಸಿದ ಜಾವಡೇಕರ್ ಮತ್ತು ಯಡಿಯೂರಪ್ಪ, ಈ ಹಿಂದೆ ಅಮಿತ್ ಶಾ ಅವರು ಸಂಸದರು, ಶಾಸಕರಿಗೆ ವಹಿ ಸಿದ್ದ ಕ್ಷೇತ್ರ ಉಸ್ತುವಾರಿ ಕುರಿತು ಮಾಹಿತಿ ಪಡೆದರು. ಈ ವೇಳೆ ಒಮ್ಮೆಯೂ ಉಸ್ತುವಾರಿ ಹೊಂದಿದ್ದ ಕ್ಷೇತ್ರದತ್ತ ತಲೆ ಹಾಕದ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಅವರಿಂದ ವಿವರಣೆ ಪಡೆದರು. ಈ ವೇಳೆ ಸಂಸದರು ಮತ್ತು ಶಾಸಕರು ಪರಿವರ್ತನಾ ಯಾತ್ರೆ, ಮದುವೆ, ಅನಾರೋಗ್ಯದ ನೆಪ ಹೇಳಿದ್ದು, ಇದರಿಂದ ಅಸಮಾಧಾನಗೊಂಡ ಇಬ್ಬರೂ, ಜನವರಿ 15 ರೊಳಗೆ ಜವಾಬ್ದಾರಿ ಪಡೆದಿರುವ ಕ್ಷೇತ್ರಗಳಿಗೆ ತೆರಳಿ ಮತದಾರರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಬೇಕು ಮತ್ತು
ಈ ಕುರಿತು ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
Related Articles
Advertisement
12 ಅಂಶಗಳನ್ನು ಬರೆಸಿದ ಅಮಿತ್ ಶಾಸಭೆಯಲ್ಲಿ ವಿಸ್ತಾರಕರು ನೀಡಿದ ಸ್ಥಳೀಯ ವಾಸ್ತವಿಕ ಚಿತ್ರಣ ಆಧರಿಸಿ ಬೂತ್ ಸಶಕ್ತೀಕರಣ, ಸಂಘಟನೆ ಮತ್ತಿತರ ವಿಚಾರಗಳ ಕುರಿತು 12 ಅಂಶಗಳನ್ನು ಅಮಿತ್ ಶಾ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದನ್ನು ಸಭೆಯಲ್ಲಿ ಕುಳಿತಿದ್ದ ಶಾಸಕರು, ಸಂಸದರಿಂದ ಬರೆಸಿದರು. ಅದರಲ್ಲೂ ದುರ್ಬಲ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಅನು ಕೂಲವಾಗುವಂತಹ ಅಂಶಗಳಿಗೆ ಹೆಚ್ಚು ಒತ್ತು ನೀಡಿದರು. ಜತೆಗೆ ವಿಸ್ತಾರಕರು ನೀಡುವ ವರದಿ ಆಧರಿಸಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯ ಚಟುವಟಿಕೆ ರೂಪಿಸಬೇಕು ಎಂದಿರುವುದಾಗಿ ತಿಳಿದು ಬಂದಿದೆ.