Advertisement

ಸಂಕುಚಿತ ಮನೋಭಾವ ಬಿಟ್ಟು ವಿಶ್ವ ಮಾನವರಾಗಿ

09:55 PM Dec 29, 2019 | Lakshmi GovindaRaj |

ಗೌರಿಬಿದನೂರು: ಸಂಕುಚಿತ ಮನೊಭಾವನೆ ಬಿಟ್ಟು ವಿಶ್ವಮಾನವರಾಗಿ ಪ್ರೀತಿ, ಪ್ರೇಮ, ವಾತ್ಸಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಕೃಷಿ ಸಚಿವ ಹಾಗೂ ಶಾಸಕ ಎನ್‌.ಹೆಚ್‌.ಶಿವಶಂಕರರೆಡ್ಡಿ ಸಲಹೆ ನೀಡಿದರು. ಗೌರಿಬಿದನೂರಿನ ಡಾ.ಹೆಚ್‌.ಎನ್‌.ಕಲಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಆದರ್ಶ ಪುರುಷರ ಆದರ್ಶಗಳನ್ನು ಅನುಕರಣೆ ಮಾಡಿ ಪಾಲಿಸಬೇಕು. ಆಗ ಆ ಜನ್ಮ ದಿನಾಚರಣೆಗಳಿಗೆ ಅರ್ಥಬರುತ್ತದೆ. ಕುವೆಂಪು ಅವರು ಓರ್ವ ರಾಷ್ಟ್ರ ಕವಿ, ಆದರ್ಶ ಕವಿ, ನಿಸರ್ಗ ಕವಿ, ಸಾಹಿತಿ, ಸಮಾಜದ ಬಗ್ಗೆ ಕಾಳಜಿ ಉಳ್ಳ ಕವಿಯಾಗಿದ್ದರು. ಇವರು ಬರೆದ ರಾಮಾಯಣದರ್ಶನಂ ಕೃತಿಯಲ್ಲಿ ಭಿನ್ನವಾದ ಕೋನಗಳಿಂದ ವಿಶ್ಲೇಷಿಸಿದ್ದಾರೆ ಎಂದರು.

ಮುಖ್ಯಭಾಷಣಕಾರರಾಗಿ ಮಾತನಾಡಿದ ಆರ್‌.ಜಿ.ಜನಾರ್ದನ ಮೂರ್ತಿ ಮಾತನಾಡಿ, ಕುವೆಂಪು ಮಹಾನ್‌ ಮಾನವತಾವಾದಿ. ಮೇರು ವ್ಯಕ್ತಿತ್ವದ ಕವಿ ಎಂದು ಬಣ್ಣಸಿ ಅವರ ಜೀವನ ಚರಿತ್ರೆಯನ್ನು ತಿಳಿಸಿದರು. ತಾಲೂಕಿನಿಂದ ಕೆಎಎಸ್‌ ಅಧಿಕಾರಿಗಳಾಗಿ ಆಯ್ಕೆಯಾದ ಮೂವರನ್ನು ಸನ್ಮಾನಿಸಿದರು. ಕುವೆಂಪು ವಿಷಯದ ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ತಹಶಿಲ್ದಾರ್‌ ಹನುಮಂತರಾಯಪ್ಪ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಂದ್ರನಾಥ್‌,ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಪ್ರಭಾನಾರಾಯಣ ಗೌಡ, ಪ್ರಕಾಶರೆಡ್ಡಿ, ಹನುಮಂತರೆಡ್ಡಿ ನಗರಸಭಾ ಸದಸ್ಯರಾದ ಶ್ರೀಕಾಂತ್‌, ಅಮರ್‌, ಗಾಯತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಕೃಷಿ ಅಧಿಕಾರಿ ಮಂಜುನಾಥ್‌,ನಾಗರಾಜು, ಮಂಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next