Advertisement

ಚಟ ತ್ಯಜಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸಿ

10:14 AM Nov 15, 2017 | Team Udayavani |

ಕಲಬುರಗಿ: ಪಾಲಕರು ಕಷ್ಟಪಟ್ಟು ಹಾಗೂ ತ್ಯಾಗ ಮಾಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿದರೆ ಮುಂದಿನ ಪೀಳಿಗೆ ಬದಲಾವಣೆಗೆ ಕಾರಣರಾಗುವುದರೊಂದಿಗೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಈಶಾನ್ಯ ವಲಯದ ಪೊಲೀಸ್‌ ಮಹಾನಿರೀಕ್ಷಕ ಅಲೋಕಕುಮಾರ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳುವ ಸಿರಿ ಕಾರ್ಯಕ್ರಮದ ನೇರ ಫೋನ್‌-ಇನ್‌ ಮಾತನಾಡಿದ
ಅವರು, ಬಡತನದ ಸಂಕಷ್ಟ ಎದುರಿಸುವ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡದೇ ಕಷ್ಟಪಡಬೇಕು. ವಿವಿಧ ಚಟಗಳಿಗೆ ಬಲಿಯಾಗಿರುವ ಪಾಲಕರು ತಮ್ಮ ಚಟಗಳನ್ನು ತ್ಯಾಗ ಮಾಡಿ ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

ಬದುಕು ಕಟ್ಟಿಕೊಳ್ಳುವುದು ಅಷ್ಟೊಂದು ಸುಲಭವಾಗಿಲ್ಲ. ಯುವಕರು ಒಳ್ಳೆಯ ದಾರಿಯಲ್ಲಿ ನಡೆದು ಸುಂದರ ಬದುಕು
ಕಟ್ಟಿಕೊಳ್ಳಲು ಹೋರಾಟ ಮಾಡಲು ಹಾಗೂ ಮಾನಸಿಕವಾಗಿ ಗಟ್ಟಿಯಾಗಬೇಕು. ಮೊಬೈಲ್‌ ಮತ್ತು ಟಿ.ವಿ. ಸಂಸ್ಕಾರದಿಂದ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಮಕ್ಕಳು ಇವುಗಳಿಂದ ದೂರವಿರಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಬಾಲ್ಯವಿವಾಹಗಳನ್ನು ತಪ್ಪಿಸಬೇಕು ಎಂದರು.

ಹಬ್ಬ-ಹರಿದಿನಗಳನ್ನು ಆಚರಿಸುವಾಗ ತಮ್ಮ ತಮ್ಮ ಧರ್ಮದ ದಬ್ಟಾಳಿಕೆ ಮಾಡುವುದು ಸಮಾಜದ ಬೆಳವಣಿಗೆಗೆ
ಮಾರಕವಾಗಿದೆ. ಜಾತಿ, ಧರ್ಮದ ವಿಷಬೀಜ ಮಕ್ಕಳಲ್ಲಿ ಬೆಳೆಯದಂತೆ ಪಾಲಕರು ಹಾಗೂ ಶಿಕ್ಷಕರು ಮುಂಜಾಗೃತೆ
ವಹಿಸಬೇಕು. ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡು ಜಾತಿ, ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಬೇಕು. ಮನುಷ್ಯನಿಗೆ ಮನುಷ್ಯ ಪ್ರೀತಿ ಮಾಡಲು ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದರು.

ಬಾಲ್ಯಾವಸ್ಥೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಓದಿನ ಜೊತೆಗೆ ಆಟ-ಪಾಠಗಳು ಮುಖ್ಯವಾಗಿವೆ ಎಂದರಲ್ಲದೇ, ತಮ್ಮ ಬಾಲ್ಯಾವಸ್ಥೆಯನ್ನು ಮೆಲಕು ಹಾಕಿಕೊಂಡ ಅಲೋಕಕುಮಾರ ತಮ್ಮ ತಂದೆ-ತಾಯಿ ಶಿಕ್ಷಕರಿದ್ದು, ಸ್ವಾತಂತ್ರ್ಯ ಸಂಗ್ರಾಮದ ಆ ದಿನಗಳಲ್ಲಿ ನನಗೆ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸುಭಾಶ್ಚಂದ್ರ ಬೋಸ್‌ರ ಬಗ್ಗೆ ತಿಳಿಸುತ್ತಿದ್ದರು. ಇದರಿಂದ ಸ್ಫೂರ್ತಿ ದೊರೆತು ಸಮಾಜ ಸೇವೆ ಮಾಡಬೇಕೆಂಬ ಆಲೋಚನೆ ಬಂದು ಐ.ಪಿ.ಎಸ್‌. ಹುದ್ದೆಗೆ ಸೇರ್ಪಡೆಯಾಗಲು ಅನುಕೂಲವಾಯಿತು ಎಂದರು.

Advertisement

ಗುಲಬರ್ಗಾ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕಿ ಅಂಜನಾ ಯಾತನೂರ ನೇರ ಫೋನ್‌ ಇನ್‌ ಕಾರ್ಯಕ್ರಮ ನಡೆಸಿಕೊಟ್ಟರು. ಜೇವರ್ಗಿ, ಕೋತನಹಿಪ್ಪರಗಾ, ಖಣದಾಳ, ಚೌಡಾಪುರ, ಬೀರಾಳ(ಬಿ) ಊಡಗಿ, ತಾಜ್‌ ಸುಲ್ತಾನಪುರ, ಊದನೂರ, ಪ್ರೌಢ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ತೊಡಿ ಕೊಂಡರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಹಾಜರಿದ್ದರು

ಎಲ್ಲರ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಿ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರ ಇಚ್ಛೆಯ ಕ್ಷೇತ್ರದಲ್ಲಿ
ಬೆಳೆಯಲು ಅನುಕೂಲವಾಗುವ ಹಾಗೆಯೇ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲ ಶಾಲಾ ಮಕ್ಕಳು ಕಡ್ಡಾಯವಾಗಿ
ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಶಾಲೆಯಲ್ಲಿರುವ ಎಲ್ಲ ಮಕ್ಕಳು ಶೌಚಾಲಯ ನಿರ್ಮಿಸಿಕೊಂಡಲ್ಲಿ ಅಂತಹ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು.

ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಪಂ ಸಿಇಒ.

Advertisement

Udayavani is now on Telegram. Click here to join our channel and stay updated with the latest news.

Next