Advertisement
ವಾರ್ಷಿಕ 2.6 ಕೋಟಿ ಮಕ್ಕಳಿಗೆ ಜನ್ಮ ನೀಡುವ ಭಾರತದ ಗರ್ಭಿಣಿಯರಿಗೆ ಕೇಂದ್ರ ಆಯುಷ್ ಸಚಿವಾಲಯ ನೀಡಿರುವ ಸಲಹೆಗಳಿವು. ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಆಯುಷ್ ಸಚಿವ ಶ್ರೀಪಾದನಾಯಕ್ ಅವರು ಬಿಡುಗಡೆ ಮಾಡಿದ “ಮದರ್ ಆಂಡ್ ಚೈಲ್ಡ್ ಕೇರ್’ ಎಂಬ ಕಿರುಪುಸ್ತಕದಲ್ಲಿ ಈ ಸಲಹೆಗಳಿವೆ. ಆದರೆ ಈ ಸಲಹೆಗಳನ್ನು ಅವೈಜ್ಞಾನಿಕ ಎಂದಿರುವ ತಜ್ಞವೈದ್ಯರು, “ಪ್ರೋಟೀನ್ ಕೊರತೆ, ರಕ್ತಹೀನತೆ ಮತ್ತು ಅಪೌಷ್ಠಿಕತೆ ಸಮಸ್ಯೆಗಳುಗರ್ಭಿಣಿಯನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾಗಿದ್ದು, ಪ್ರೋಟೀನ್ ಮತ್ತು ಕಬ್ಬಿಣದ ಅಂಶಗಳಿಂದ ಶ್ರೀಮಂತವಾಗಿರುವ ಮಾಂಸ ಈ ಸಮಸ್ಯೆಗಳ ಪರಿಹಾರಕ್ಕೆ ಅತ್ಯುತ್ತಮ ಆಹಾರವಾಗಿದೆ. ಇನ್ನು ಗರ್ಭದಲ್ಲಿರುವ ಮಗು ಆಮ್ನಿಯಾಟಿಕ್ ದ್ರವ ಹಾಗೂ ಗರ್ಭಕೋಶದ ಸ್ನಾಯುಗಳಿಂದ ಸುತ್ತುವರಿದು, ಸುರಕ್ಷಿತವಾಗಿರುತ್ತದೆ, ಆತಂಕ ಬೇಡ ಎಂದು ಹೇಳಿದ್ದಾರೆ.