ಮುಂಬಯಿ: ಸಂಘ ಅಂತ ಆಗಬೇಕಾ ದರೆ ಮೊದಲು ಏನು ಎಂದು ತಿಳಿಯಬೇಕು. ತಿಳಿಯದೆ ಸಂಘ ಆಗುವುದೇ ಇಲ್ಲ. ಧ್ಯೇಯೋದ್ದೇಶ ಮರೆತು ಮುನ್ನಡೆದಾಗ ಆ ಸಂಘಕ್ಕೆ ಸಂಘದ ಮಾನ್ಯತೆ ಇರುವುದಿಲ್ಲ. ಈ ಗೋರೆಗಾಂವ್ ಕರ್ನಾಟಕ ಸಂಘವು ದೂರದೃಷ್ಟಿತ್ವ ಹೊಂದಿ ತಿಳುವಳಿಕೆಯೊಂದಿಗೆ ಮುನ್ನಡೆಯುತ್ತಿದೆ. ಕನ್ನಡ ಬೇಕೇಬೇಕು ಕಡಾªಯವಾಗಬೇಕು ಎನ್ನುವ ಕರ್ನಾಟಕದ ಮಹಾಶಯರು, ರಾಜಕಾರಣಿಗಳೇ ಮಾತನಾಡುವ ಕನ್ನಡದಲ್ಲಿ ಶೇ. 70 ರಷ್ಟು ಇಂಗ್ಲೀಷ್ ಶಬ್ದಗಳು ಬಳಸುತ್ತಿರುವುದು ದುರದೃಷ್ಟಕರ. ಕನ್ನಡಿಗರಾಗಿ ಕನ್ನಡದವರು ಆಗದಿರುವುದೇ ಕನ್ನಡಾಂಭೆಯ ದೊಡª ಸೋಲು. ಮುಂಬಯಿಗರಲ್ಲಿ ಕನ್ನಡದ ಅಪ್ಪಟಪ್ರೇಮವಿದೆ. ಆದರೆ ಮುಂಬಯಿವಾಸಿಗರ ಕನ್ನಡಿಗರಲ್ಲಿ ಶೇ. 90 ರಷ್ಟು ಕನ್ನಡ ಶಬ್ದಗಳೇ ಬಳಕೆ ಆಗುತ್ತಿರುವುದು ಕಂಡಾಗ ಅಚ್ಚರಿ ಉಂಟಾಗುತ್ತದೆ. ನಿಮ್ಮಲ್ಲಿ ಕನ್ನಡದ ಬಗೆಗಿನ ಜ್ಞಾನ, ಮಾನ್ಯತೆಯನ್ನು ಇಲ್ಲಿ ತಿಳಿದು ಕಲಿಯಬೇಕಾಗಿದೆ. ಚೈತನ್ಯ ಕ್ಷಿಣಿಸಿದಾಗ ಮುಪ್ಪು ಅರಸುವುದು ಸಹಜ. ಆದರೆ ಈ ಸಂಸ್ಥೆಯೂ ಅಷ್ಟೇ. ಅರ್ವತ್ತಕ್ಕೇರಿದರೂ ಇನ್ನೂ ಮುಪ್ಪು ಬಾರದಂತಿದೆ. ಕನ್ನಡದ ಕಳಕಳಿ ಜೀವಂತವಾಗಿಸಿದೆ ಎಂದು ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ ನುಡಿದರು.
ಮಾ. 18 ರಂದು ಪೂರ್ವಾಹ್ನ ಮಲಾಡ್ ಪಶ್ಚಿಮ ಬಜಾಜ್ ಸಭಾಗೃಹದಲ್ಲಿ ನಡೆದ ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವಕ್ಕೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಇವರು, ಸಂಸ್ಥೆಯ ಅಮೃತಮಹೋತ್ಸವ ಅಂದರೆ ಇನ್ನೂ ಜೀವಂತವಾಗಿದ್ದೇವೆ ಎಂದರ್ಥ. ಇದಕ್ಕೆ ಈ ಸಂಸ್ಥೆ ಮಾದರಿಯಾಗಿದೆ. ನೀವೂ ಕೂಡಾ ಮಕ್ಕಳಿಗೆ ಯಕ್ಷಗಾನ ಕಲಿಸಿರಿ. ಕಾರಣ ಯಕ್ಷಗಾನದಲ್ಲಿ ಶುದ್ಧ ಕನ್ನಡವಿದೆ. ಪ್ರಸಂಗ ಸಾಹಿತ್ಯದಿಂದ ಶುದ್ಧ ಕನ್ನಡದ ಉಳಿವು ಸಾಧ್ಯ ಮತ್ತು ಇದರಿಂದ ಭಾರತೀಯ ಸಂಸ್ಕೃ ತಿಯೂ ಜೀವಂತವಾಗುವುದು ಎಂದು ನುಡಿದರು.
ಹರಿನಾರಾಯಣ ಆಸ್ರಣ್ಣ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಅರ್ವತ್ತು ದೀಪಗಳನ್ನು ಪ್ರಜ್ವಲಿಸಿ ವಿಧ್ಯುಕ್ತವಾಗಿ ವಜ್ರಮಹೋತ್ಸವಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಸಮಾಜ ಸೇವಕ ನ್ಯಾಯವಾದಿ ಜಗದೀಶ್ ಶೆಟ್ಟಿ ಹಾಗೂ ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ತುಳು ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಕಮೋಟೆ ಅಧ್ಯಕ್ಷ ಬೋಳ ರವಿ ಪೂಜಾರಿ, ಕಳತ್ತೂರು ರಾಘವೇಂದ್ರ ಭಟ್ ಅವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಮೇಶ್ ಕೆ. ಶೆಟ್ಟಿ ಪಯ್ನಾರು ಸ್ವಾಗತಿಸಿ, ಶ್ರೀನಿವಾಸ ಜೋಕಟ್ಟೆ ಸಂಪಾದಕತ್ವದ ಸಂಘದ ವಾರ್ಷಿಕ ಸಂಚಿಕೆ ಮುಂಬೆಳಕು ಹಾಗೂ ಸಂಘದ ಸದಸ್ಯರ ಪ್ರಬಂಧ ಸಂಕಲನ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ನಾರಾಯಣ ಆರ್. ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಾ ಎಂ. ಸುವರ್ಣ ಮತ್ತು ಬಳಗ ಪ್ರಾರ್ಥನೆಗೈದರು. ಸೀಮಾ ಕುಲ್ಕರ್ಣಿ ಮತ್ತು ಸಮೂಹ ಸ್ವಾಗತಗೀತೆಗೈದರು. ಮಹಿಳಾ ವೃಂದವು ಉದ್ಘಾಟನಾ ಗೀತೆಯನ್ನಾಡಿದರು. ಉಷಾ ಎಸ್. ಶೆಟ್ಟಿ, ಪದ್ಮಜಾ ಪಿ. ಮಣ್ಣೂರ, ವಾಣಿ ಶೆಟ್ಟಿ ಪಡುಬಿದ್ರಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್. ಎಂ. ಶೆಟ್ಟಿ, ಶಕುಂತಳಾ ಆರ್. ಪ್ರಭು, ದೇವಲ್ಕುಂದ ಭಾಸ್ಕರ್ ಶೆಟ್ಟಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ್ ಡಿ. ಪೂಜಾರಿ, ವಿದ್ಯಾ ದೇಶ್‌ಪಾಂಡೆ ಅತಿಥಿಗಳನ್ನು ಗೌರವಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಮೀನಾ ಬಿ. ಕಾಳಾವರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಗರದ ವಿವಿಧ ಸಂಘ-ಸಂಸ್ಥೆಗಳ ಕಲಾವಿದರು ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಉಪ ವಿಭಾಗಗಳ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಸಂಘದ ಮಹಿಳಾ ಸದಸ್ಯೆಯರಿಂದ ದೇವಲ್ಕುಂದ ಭಾಸ್ಕರ್ ಶೆಟ್ಟಿ ನಿರ್ದೇಶನದಲ್ಲಿ “ಶಶಿಪ್ರಭ ಪರಿಣಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.
ಸುಮಿತ್ರಾ ಬಿ. ಗುಜರನ್, ಜೆ. ಕೆ. ಹೆಗ್ಡೆ, ಟಿ. ವಿ. ದಂಗಲ್ ಮತ್ತಿತರರು ಕಲಾವಿದರನ್ನು ಗೌರವಿಸಿದರು. ಸುಗುಣಾ ಎಸ್. ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.
ಗೋರೆಗಾಂವ್ ಕರ್ನಾಟಕ ಸಂಘ ಅಂದರೆ ಶಿಸ್ತುಬದ್ಧತೆಗೆ ಒಂದು ಹೆಸರಾದ ಸಂಸ್ಥೆ. ಕರ್ನಾಟಕದ ಜನತೆಗೆ ಮತ್ತು ಭಷ್ಯತ್ತಿನ ಪೀಳಿಗೆಗೆ ಇದೊಂದು ಮಾದರಿ ಸಂಸ್ಥೆ. ಈ ಸಂಸ್ಥೆ ನೂರಾRಲ ಬಾಳುತ್ತಾ ಕನ್ನಡಾಂಭೆಯ ಸೇವೆಗೆ ಶಕ್ತಿ ತುಂಬಲಿ.
-ಬೋಳ ರವಿ ಪೂಜಾರಿ, ಅಧ್ಯಕ್ಷರು, ತುಳು ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಕಮೋಟೆ
ಕನ್ನಡದ ಸೇವಾ ತೇರನ್ನೆಳೆಯುವ ಈ ಸಂಸ್ಥೆ ಮುಂಬಯಿಯಲ್ಲಿ ಅತ್ಯಂತ ಕೀಯಾಶೀಲ ಸಂಸ್ಥೆ ಎಂದೆಣಿಸಿದೆ. ಆದುದರಿಂದಲೇ ಅರ್ವತ್ತರ ಸೇವಾ ಮುನ್ನಡೆಯಲ್ಲೂ ಸ್ವಂತಿಕೆಯ ವರ್ಚಸ್ಸನ್ನು ಹೊಂದಿರುವುದು ಸ್ತುತ್ಯರ್ಹ.
-ಉಮಾಕೃಷ್ಣ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ,
ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗ
ಮುಂಬಯಿಯಂತಹ ಮಹಾನಗರದಲ್ಲಿ ತುಳು-ಕನ್ನಡಿಗರಿಗೆ ಆಶ್ರಯ ನೀಡಿದ ಮಹಾನ್ ಸಂಸ್ಥೆ ಇದಾಗಿದೆ. ಇದೊಂದು ಕನ್ನಡದ ಸಾಂಸ್ಕೃತಿಕ, ಸಾಹಿತ್ಯಕ ವೇದಿಕೆಯಾಗಿ ಹಲವಾರು ವಿದ್ವಾಂಸರನ್ನು ರೂಪಿಸಿದೆ. ನಗರದಲ್ಲಿನ ಎಲ್ಲಾ ಸಂಸ್ಥೆಗಳಿಕ್ಕಿಂತಲೂ ಮಹಿಳಾ ಪ್ರಧಾನವಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿ ಎಲ್ಲಾ ಸಂಸ್ಥೆಗಳಿಗೂ ಮೇಲ್ಪಂಕ್ತಿಯಾಗಿರುವ ಈ ಸಂಘದ ಕಾರ್ಯ ಪ್ರವೃತ್ತಿ ವಿಶಿಷ್ಟವಾಗಿದೆ. ಇಲ್ಲಿನ ಭಾವನಾತ್ಮಕ ಸೇವಾ ಚಿಂತನೆ ಅನುಕರಣೀಯವಾಗಿದೆ.
-ನ್ಯಾಯವಾದಿ ಜಗದೀಶ್ ಶೆಟ್ಟಿ, ಸಮಾಜ ಸೇವಕ
ಚಿತ್ರ- ವರದಿ : ರೋನ್ಸ್ ಬಂಟ್ವಾಳ್