Advertisement

‘ಕ.ರ.ವೇ.ಯಿಂದ ಯುವ ಸಮುದಾಯಕ್ಕೆ ನಾಯಕತ್ವ  ಗುಣ’

02:53 PM Oct 09, 2017 | |

ಉಳ್ಳಾಲ: ರಾಜ್ಯ, ರಾಷ್ಟ್ರ ರಹಿತವಾಗಿ ಕನ್ನಡದ ಜನರ ಏಳಿಗೆಗಾಗಿ ಹೋರಾಡುತ್ತಾ ಬಂದಿರುವ ಕರ್ನಾಟಕ
ರಕ್ಷಣಾ ವೇದಿಕೆ ಯುವಸಮುದಾಯಕ್ಕೆ ನಾಯಕತ್ವದ ಗುಣವನ್ನು ಕಲಿಸುತ್ತಾ ಬಂದಿದೆ ಎಂದು ಕರವೇ ಚಿಕ್ಕಮಗಳೂರು ಹಾಗೂ ದ.ಕ. ಉಸ್ತುವಾರಿ ಜಿಲ್ಲಾಧ್ಯಕ್ಷ ಜಗದೀಶ್‌ ಅರಸ್‌ ತೇಗೂರು ಹೇಳಿದ್ದಾರೆ.

Advertisement

ಅವರು ಉಳ್ಳಾಲ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಳ್ಳಾಲದಲ್ಲಿ ಈ ನಡುವೆ ಕನ್ನಡವೇ ಜಾತಿ, ಧರ್ಮ ಎನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಉಳ್ಳಾಲದಲ್ಲಿ ಬೆಳೆಸುವ ಕಾರ್ಯ ಯುವ ಸಮುದಾಯದಿಂದ ಆಗಬೇಕಿದೆ. ಈ ಮೂಲಕ ಶಾಂತಿಯುತ ಉಳ್ಳಾಲದ ಜತೆಗೆ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ ಎಂದರು. ಕ.ರ.ವೇ. ದ.ಕ. ಜಿಲ್ಲಾಧ್ಯಕ್ಷ ಅನಿಲ್‌ ದಾಸ್‌ ಮಾತನಾಡಿ, ಕೆಲವರ ಸ್ವಾರ್ಥಕ್ಕಾಗಿ ಇಡೀ ಉಳ್ಳಾಲದ ನಾಗರಿಕರನ್ನು ಭಯಪಡಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನು ಹೋಗಲಾಡಿಸುವ ಪ್ರಯತ್ನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಡೆಯಲಿದೆ ಎಂದರು.

ಕ.ರ.ವೇ. ಘಟಕವನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್‌ ಕುಂಞಿಮೋನು ನೆರವೇರಿಸಿದರು. ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸದಸ್ಯ ಫಾರೂಕ್‌ ಉಳ್ಳಾಲ್‌, ಸದಸ್ಯೆ ರಝೀಯಾ ಇಬ್ರಾಹಿಂ, ಕರವೇ ಜಿಲ್ಲಾ ವಕ್ತಾರ ಮೊಹಶಿರ್‌ ಅಹ್ಮದ್‌ ಸಾಮಣಿಗೆ, ಜಿಲ್ಲಾ ಕಾನೂನು ಸಲಹೆಗಾರ ಮಯೂರ್‌ ಕೀರ್ತಿ, ಜಿಲ್ಲಾ ಗೌರವಾಧ್ಯಕ್ಷ
ಖಾದರ್‌ ತಲಪಾಡಿ, ದ.ಕ. ಜಿಲ್ಲಾ ಮಹಿಳಾಧ್ಯಕ್ಷೆ ಲತಾ ಸಾಲ್ಯಾನ್‌, ದ.ಕ. ಜಿಲ್ಲಾ ಉಪಾಧ್ಯಕ್ಷರಾದ ಮೊಹಿದ್ದೀನ್‌
ನಝೀರ್‌, ಅರುಣ್‌ ಕುಮರ್‌, ಜಿಲ್ಲಾ ರಿಕ್ಷಾ ಘಟಕಾಧ್ಯಕ್ಷ ಜೆರಾಲ್ಡ್‌ ಕುಟ್ಹಿ ನಾ, ದ.ಕ. ಕೋಶಾಧಿಕಾರಿ ರಿಯಾಝ್
ಹರೇಕಳ, ಕೈರಂಗಳ ಘಟಕಾಧ್ಯಕ್ಷ ಅಬೂ ಸ್ವಾಲಿಹ್‌, ದ.ಕ. ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ನದೀಮ್‌ ಅಹ್ಮದ್‌ಬಾವಾ,
ದ.ಕ. ಜಿಲ್ಲಾ ಕಾರ್ಯದರ್ಶಿ ಜಯರಾಜ್‌ ಜಪ್ಪಿನ ಮೊಗರು, ಉಳ್ಳಾಲ ಘಟಕ ಪ್ರ. ಕಾರ್ಯದರ್ಶಿ ಇಫ್ತಿಕಾರ್‌ ಉಳ್ಳಾಲ,
ಉಪಾಧ್ಯಕ್ಷ ಹಮೀದ್‌ ಉಳ್ಳಾಲ್‌ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಅಧ್ಯಕ್ಷ ಅಬ್ದುಲ್‌ ಜಲೀಲ್‌ ಮುಡಿಪು ಪ್ರಸ್ತಾವನೆಗೈದರು. ಮಂಗಳೂರು ತಾಲೂಕು ಅಧ್ಯಕ್ಷ ಮಧು
ಸೂದನ್‌ ಗೌಡ ಸ್ವಾಗತಿಸಿದರು. ವಿದ್ಯಾರ್ಥಿ ಘಟಕಾಧ್ಯಕ್ಷ ಮುಫೀದ್‌ ನಿರೂಪಿಸಿದರು. ಉಳ್ಳಾಲ ಘಟಕಾಧ್ಯಕ್ಷ ಫೈರೋಝ್ ಡಿ.ಎಂ. ವಂದಿಸಿದರು.

Advertisement

ಸಮ್ಮಾನ
36 ವರ್ಷಗಳಿಂದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಕನ್ನಡ ಅಧ್ಯಾಪಕ ಗುಡಾಜೆ ರಾಮಚಂದ್ರ ಭಟ್‌ ಮತ್ತು ಉಳ್ಳಾಲ ವಲಯದಲ್ಲಿ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ 5 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಇಸ್ಮಾಯಿಲ್‌ ಶಾಫಿ  ಬಬ್ಬುಕಟ್ಟೆ, ಅರುಣ್‌ ಡಿ’ಸೋಜಾ ಸೇರಿದಂತೆ 15 ಮಂದಿ ಕ.ರ.ವೇ.ಗೆ ಸೇರ್ಪಡೆಗೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next