Advertisement
ದ್ವಿತೀಯ ಹಂತದ ಸಮರ್ಥ ನಾಯಕತ್ವದ ಕೊರತೆ ನೀಗಿಸಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಡಾ| ಸುಧಾಕರ್ ಮತ್ತು ಬೈರತಿ ಬಸವರಾಜ್ ತಂಡ ಕಟ್ಟಿಕೊಂಡಿ ದ್ದಾರೆ ಎಂದು ತಿಳಿದುಬಂದಿದೆ.ಪಕ್ಷದಲ್ಲಿ ನಾಯಕತ್ವದ ಕೊರತೆ ನೀಗಿಸಲು ಏಕಾಂಗಿಯಾಗಿ ಪೈಪೋಟಿ ನಡೆಸುವುದರಿಂದ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರದಲ್ಲಿ ಇವ ರಿದ್ದಾರೆ ಎನ್ನಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿದರೆ, ಪಕ್ಷ ಯಾರನ್ನಾದರೂ ಗುರುತಿಸಿ ಜವಾಬ್ದಾರಿ ನೀಡುತ್ತದೆ ಎಂಬ ವಿಶ್ವಾಸ ದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹೊಸ ಆಲೋಚನೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಯವರದ್ದು ಎಂದು ಹೇಳಲಾಗುತ್ತಿದೆ. ಈ ಕುರಿತು ಒಂದು ತಿಂಗಳ ಹಿಂದೆ ಈ ಐವರು ಸಚಿವರು ಚರ್ಚಿಸಿದ್ದು, ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಹೆಜ್ಜೆಯಾಗಿ ಈ ಸಚಿವರು ಪರಸ್ಪರ ಜತೆಗೂಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದಾರೆ.
Related Articles
ಮುಂದಿನ ದಿನಗಳಲ್ಲಿ ಪಕ್ಷ ಒಂದೇ ಜಾತಿಯ ನಾಯಕತ್ವಕ್ಕೆ ಸೀಮಿತ ಆಗಬಾರದು ಎನ್ನುವ ಕಾರಣದಿಂದ ಬೇರೆ ಬೇರೆ ಸಮುದಾಯದವರಾಗಿರುವ ಈ ನಾಯಕರು ತಂಡ ಕಟ್ಟಿಕೊಂಡಿದ್ದಾರೆ. ಈಗ ಎದ್ದಿರುವ ನಾಯಕತ್ವ ಗೊಂದಲದ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುವುದರಿಂದ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದಿನ ದಿನಗಳಲ್ಲಿ ಎರಡನೇ ಹಂತದ ನಾಯಕತ್ವದ ಮೇಲೆ ಕಣ್ಣಿಟ್ಟು ಈ ಪಂಚ ಸಚಿವರ ಪಡೆ ಅಖಾಡಕ್ಕಿಳಿದಿದೆ ಎಂದು ಹೇಳಲಾಗುತ್ತಿದೆ.
Advertisement
– ಶಂಕರ ಪಾಗೋಜಿ