Advertisement

UV Fusion: ಓದುವಾಗ ಮೂಡುವ ಆಲಸ್ಯ

03:23 PM Dec 11, 2023 | Team Udayavani |

ಮಿಠಾಯಿ ಅಂಗಡಿಯ ಮುಂದೆ ಮಗುವೊಂದು ಜೊಲ್ಲು ಸುರಿಸಿಕೊಂಡು ನಿಲ್ಲುವಂತೆ ನಾ ಯಾವಾಗಲೂ ಪುಸ್ತಕದ ಮುಂದೆ ತೂಕಡಿಸುವೆ. ಮಕ್ಕಳು ಕದ್ದು ಬೆಲ್ಲ ತಿನ್ನುವಂತೆ ನಾ ನನ್ನ ಬಿಡುವಿನ ಸಮಯದಲ್ಲೂ, ಸ್ವಲ್ಪ ಸಮಯ ಕದ್ದು ಪರೀಕ್ಷೆಯ ಸಮಯದಲ್ಲಿ ಅಷ್ಟೋ – ಇಷ್ಟೋ ಓದುವೆ. ಮನೆಯಲ್ಲಿ ಓದು ಅಂದಾಗ ಈಗ ನಾ ಓದುವಳಲ್ಲ ಎಂದು ರಾಜಾರೋಷಗಿ ಹೇಳುತ್ತಿದ್ದೆ.

Advertisement

ಕೆಲಸದ ಒತ್ತಡದಲ್ಲಿ ನಿತ್ಯ ಒಂದು ಪುಟ ಓದುವುದಕ್ಕೂ ಬಿಡುವಾಗದೆ ಇರುವುದು ನಿಜ. ಆದರೆ ನಾ ಒಬ್ಬ ವಿದ್ಯಾರ್ಥಿ ನನಗೈಕೆ ಈ ಉದಾಸೀನ, ಅಲಸ್ಯ ಕಾಡುವುದು? ಕಾರ್ಯ ಎಷ್ಟೇ ಇದ್ದರು ಓದಿನ ಸಂಘವನ್ನು ಬಿಡದೆ ಇರುವ ಅದೆಷ್ಟೋ ಜನ ಸಾಹಿತ್ಯ ಓದುವುದನ್ನು ಮುಂದುವರೆಸುವುದು ಹೇಗೆ? ಸಮಯವಿಲ್ಲದಿದ್ದರೂ ಅಕ್ಷರದ ಸಂಗಕ್ಕಾಗಿ ಸಮಯವನ್ನು ಕಾಸಿಯುವುದು ಹೇಗೆ? ಎಂಬ ಪ್ರಶ್ನೆಗಳು ನನ್ನಲ್ಲಿ ಆಗಾಗ ಮೂಡುತ್ತಿದ್ದರು ಉತ್ತರ ಹುಡುಕುವ ಪ್ರಯತ್ನ ಮಾಡಿರಲಿಲ್ಲ.

ಓದಬೇಕು ಬರೆಯಬೇಕೆಂಬ ಆಸೆ ನನ್ನಲ್ಲಿ ಬಹಳಷ್ಟು ಇದ್ದರು ಪುಸ್ತಕದ ಮುಂದೆ ಬಂದು ಕೂತೊಡನೆ ಕುಂಭಕರ್ಣ ನೀ ನನ್ನ ವಂಶಜ ಎಂದು ಪಿಸುಗುಟ್ಟಂತೆ ಅನಿಸುತ್ತಿತ್ತು. ಹೀಗೆ ಓದುವಾಗಲೆಲ್ಲ ನಿದ್ರಿಸುವ ನನಗೆ ಪರೀಕ್ಷಾ ದಿನಗಳು ಹತ್ತಿರ ಬಂದಾಗ ಟೆನ್ಶನ್‌ ನಿಂದ ಹೃದಯಾಘಾತವಾಗುವುದೆನೋ ಅನಿಸುತಿತ್ತು.

ಈ ಅಡ್ಡಿಯನ್ನು ಮೆಟ್ಟಿನಿಂತು ಅಧ್ಯಯನ ಹೇಗೆ ಮುಂದುವರಿಸುವುದು ಎಂದು ಯೋಚಿಸುತ್ತಿರುವಾಗ, ನನ್ನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಕೆಲವು ವಿದ್ಯಾರ್ಥಿಗಳು ಗ್ರಂಥಾಲಯದಿಂದ ತೆಗೆದುಕೊಂಡು ಹೋದ 500-600 ಪುಟಗಳ ಪುಸ್ತಕವನ್ನು ಒಂದು ವಾರದಲ್ಲಿ ಓದಿ ಮುಗಿಸುತ್ತಿರುವುದನ್ನು ಕಂಡು ಆಶ್ಚರ್ಯ ಪಟ್ಟೆ. ಅವರಿಂದ ಟಿಪ್ಸ್‌ ಗಳನ್ನು ಪಡೆದೆ. ಆದರೆ ಅದು ಯಾವುದೇ ರೀತಿಯ ಪ್ರಯೋಜನವನ್ನು ಮಾಡಿರಲಿಲ್ಲ.

ಹೀಗಿರುವಾಗ ಓದಿನ ಕಡೆ ಗಮನ ಹರಿಸಿದ ನನ್ನನ್ನು ಕಂಡ ಪಾಲಕರು ಓದಲು ಬರೆಯಲು ಏನು ಇಲ್ಲ ಎಂದರೆ ಮನೆ ಕೆಲಸದಲ್ಲಿ ಕೈಜೋಡಿಸು ಎಂದು ಹೇಳುತ್ತಿದ್ದರು. ಇದರಿಂದ ಪಾರಾಗಲು ಮತ್ತೆ ಪುಸ್ತಕದ ಆಶ್ರಯ ಪಡೆದೆ, ಕೆಲಸ ಮಾಡಲು ಬಾ ಎಂದಾಗಲೆಲ್ಲ ಪುಸ್ತಕವನ್ನು ಹಿಡಿದು ಕಾಲ ಹರಣ ಮಾಡಲು ಪ್ರಾರಂಭಿಸಿದೆ. ಅದು ಯಾವಾಗ ಓದುಬರಹದ ನಿರಂತರತೆ ಪಡೆದುಕೊಂಡಿತೋ ಗೊತ್ತಿಲ್ಲ, ಅದು ಮುಂದುವರಿಯಿತು.

Advertisement

ಅತೀ ವೇಗವಾದ ಈ ಪ್ರಪಂಚದಲ್ಲಿ ರಿಲ್ಯಾಕ್ಸ್ ಆಗಲು ಓದಿಕ್ಕಿಂತಲೂ ಒಳ್ಳೆಯ ದಾರಿ ಇನ್ನೊಂದಿಲ್ಲ ಎಂದು ತಿಳಿದೆ. ಓದಿನ ಕಡೆ ತನ್ನಿಂದ ತಾನೇ ಆಕರ್ಷಣೆ ಹೆಚ್ಚಾಯ್ತು, ಯಾವಾಗಲೂ ತಿಂಡಿ ತಿನಿಸುಗಳಿಂದ ತುಂಬಿದ ನನ್ನ ಬ್ಯಾಗ್ ಗಳಿಂದು ಪುಸ್ತಕದಿಂದ ಕಂಗೊಳಿಸುತ್ತಿದೆ. ಬಸ್‌ ಟಿಕೆಟ್‌ ಗಳ ಮೇಲೆ ಕವನಗಳು ಇಳಿಯುತ್ತಿವೆ. ನೀವು ಕೂಡ ನಿಮ್ಮ ಬಿಡುವಿನ ಸಮಯದಲ್ಲೂ ಬಿಡುವನ್ನು ಮಾಡಿಕೊಂಡು ಕಥೆಯನ್ನು, ಕವನವನ್ನು, ಕಾದಂಬರಿಯನ್ನು ಓದಿ ನೋಡಿ ಮನಕ್ಕೆ

-ವಾಣಿ ದಾಸ್‌

ಎಂ.ಎಂ., ಮಹಾವಿದ್ಯಾಲಯ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next