Advertisement
ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಸನ್ ಸೆ„ನ್ ಬಡಾವಣೆಗೆ ಭೇಟಿ ನೀಡಿ, ಮತಯಾಚನೆ ನಡೆಸಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಅವರು ಕಾಪು ಪುರಸಭೆ ಮತ್ತು ಪ್ರಾಧಿಕಾರ ರಚನೆಯ ಸಂದರ್ಭ ಜನರು ಎದುರಿಸ ಬಹುದಾದ ಸಮಸ್ಯೆಗಳ ಪಟ್ಟಿ ಮಾಡಿಕೊಂಡು, ಅವುಗಳ ನಿವಾರಣೆಗೆ ಅಗತ್ಯವಿರುವ ಎಲ್ಲಾ ಕಾಯ್ದೆ-ಕಾನೂನುಗಳ ಬಗ್ಗೆ ಅರಿತುಕೊಂಡು, ಬೈಲಾ ತಿದ್ಧಪಡಿಗೆ ಬಗ್ಗೆ ನಾವು ಸಿದ್ಧತೆ ನಡೆಸಿದ್ದೆವು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಅದನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾಗಿರುವುದೇ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ಕಾಪು, ಮಲ್ಲಾರು, ಉಳಿಯಾರಗೋಳಿ ಗ್ರಾಮ ಪಂಚಾಯತ್ ವ್ಯವಸ್ಥೆ ಇರುವಾಗ ವಿವಿಧ ಲೇಔಟ್‌ಗಳಲ್ಲಿ ಜಾಗ ಖರೀದಿಸಿದ ಜನರು ಕಾಪು ಪುರಸಭೆಯಾದ ನಂತರ ಪ್ರಾಧಿಕಾರದ ಮೂಲಕ ಖಾತಾ ಮಾಡಿಸಿಕೊಳ್ಳಲು ಬಹಳಷ್ಟು ಹೆಣಗಾಡುವಂತಾಗಿದೆ. ಬಿಜೆಪಿಯವರು ಈ ಬಗ್ಗೆ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿ, ತಾವು ಅಧಿಕಾರಕ್ಕೆ ಬಂದಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆ ಮೂಲಕ ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋಲುವಂತೆ ಮಾಡಿದ್ದರು. ನಾನು ಚುನಾವಣೆಯಲ್ಲಿ ಸೋತ ಮೇಲೂ ಕಾಪುವಿನ ಜನತೆಯನ್ನು ಕಾಡುತ್ತಿದ್ದ ಪ್ರಾಧಿಕಾರದ ಖಾತಾ ಬೆ„ಲಾದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಮಾಸ್ಟರ್ ಪ್ಲಾನ್ ರೂಪಿಸಿ ಬದಲಾವಣೆ ತರಲು ಪ್ರಾಧಿಕಾರಕ್ಕೆ ತಿಳಿಸಿದ್ದು ನನಗೆ ಅಧಿಕಾರವಿಲ್ಲದ ಕಾರಣ ಅಧಿಕಾರಿಗಳು ನನ್ನ ಮಾತನ್ನು ಪುರಸ್ಕರಿಸಿಲ್ಲ. ಈ ಬಾರಿ ಪುರಸಭೆ ವ್ಯಾಪ್ತಿಯ ಜನತೆ ನನ್ನನ್ನು ಮತ್ತೂಮ್ಮೆ ಶಾಸಕನನ್ನಾಗಿ ಆಯ್ಕೆ ಮಾಡಿದರೆ ಒಂದು ತಿಂಗಳೊಳಗೆ ಈ ಸಮಸ್ಯೆಗೆ ಪರಿಹಾರ ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೇಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಪಕ್ಷ ಮುಖಂಡರಾದ ಅಮೀರ್ ಕಾಪು, ಮಹಮ್ಮದ್ ಸಾಧಿಕ್, ದೀಪ್ತಿ, ನಯೀಮ್, ಬಾಶು ಸಾಹೇಬ್, ಶುಭಾ, ಅನಿಲ್ ಶೆಟ್ಟಿ, ಬಡಾವಣೆ ನಿವಾಸಿ ರವಿ ಆಚಾರ್ಯ ಉಪಸ್ಥಿತರಿದ್ದರು.
Related Articles
2013ರಿಂದ 2018ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ನಡೆಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತದಾರರ ಬಳಿ ಓಟು ಕೇಳುತ್ತಿದೆ ಎಂದು ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ.
Advertisement
ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಮತಯಾಚನೆ ನಡೆಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸ್ವಂತಿಕೆ ಅನ್ನೋದು ಇಲ್ಲ. ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಮಾಡಿದ ಶೇ. 75 ರಷ್ಟು ಕಾಮಗಾರಿಗಳನ್ನು ತಮ್ಮ ಕಾಲದ ಅಭಿವೃದ್ಧಿ ಕೆಲಸಗಳು ಎಂದು ಮತದಾರರ ಮುಂದೆ ಸುಳ್ಳು ಹೇಳಿ ಓಟು ಕೇಳುವ ಗಿಮಿಕ್ ಮಾಡುತ್ತಿದ್ದಾರೆ. ಈ ಬಾರಿಯ ಬಿಜೆಪಿ ಪ್ರಣಾಳಿಕೆಯು ಕಳೆದ ಬಾರಿಯ ನನ್ನ ಪ್ರಣಾಳಿಕೆ ಕಾಪಿ ಆಗಿದೆ. ಬಿಜೆಪಿಗೆ ಕಾಂಗ್ರೆಸ್‌ನ ಅವದಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾಂಗ್ರೆಸ್ ಪ್ರಣಾಳಿಕೆಯೇ ದಾರಿದೀಪವೇ ಎಂಬ ಪ್ರಶ್ನೆಯನ್ನು ಮತದಾರರು ನಮ್ಮಲ್ಲಿ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ, ಮೆಲ್ವಿನ್ ಡಿಸೋಜ, ಹಸನಬ್ಬ ಶೇಖ್, ಜೆಸಿಂತಾ, ಲ್ಯಾನ್ಸಿ ಕಾರ್ಡೊಜಾ ಮೊದಲಾದವರು ಉಪಸ್ಥಿತರಿದ್ದರು.