Advertisement

2 ದಿನದಲ್ಲಿ ಸಾರಿಗೆ ನೌಕರರ ಬಾಕಿ ಸಂಬಳ : ಲಕ್ಷ್ಮಣ ಸವದಿ

12:01 AM Feb 03, 2021 | Team Udayavani |

ಬೆಂಗಳೂರು: ಇನ್ನೆರಡು ದಿನಗಳಲ್ಲಿ ಸಾರಿಗೆ ನೌಕರರ ಬಾಕಿ ಸಂಬಳ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನಾಲ್ಕೈದು ಸಭೆಗಳನ್ನು ನಡೆಸಿದೆ. ಸಾರಿಗೆ ನೌಕರರು ಹತ್ತು ಬೇಡಿಕೆಗಳನ್ನು ಇಟ್ಟಿದ್ದು, ಒಂಬತ್ತಕ್ಕೆ ಒಪ್ಪಿಗೆ ಕೊಟ್ಟಿದ್ದೇವೆ. ಈಗಾಗಲೇ ಮೂರು ಬೇಡಿಕೆಗಳನ್ನ ಈಡೇರಿಸಿದ್ದೇವೆ. ತರಬೇತಿ ಅವಧಿ ಎರಡು ವರ್ಷದ ಬದಲಿಗೆ ಒಂದು ವರ್ಷಕ್ಕೆ ಇಳಿಸಲಾಗಿದೆ. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲು ಸಮಿತಿ ವರದಿ ಕೊಟ್ಟಿದೆ. ತಡೆ ಹಿಡಿದಿದ್ದ ಭತ್ತೆಯನ್ನು ಕೊಡಲು ಒಪ್ಪಿಗೆ ನೀಡಲಾಗಿದೆ. 15 ದಿನಗಳಲ್ಲಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಬಸ್‌ ಪ್ರಯಾಣ ದರ ಹೆಚ್ಚಳ ಬಗ್ಗೆ ಸರಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್‌ನಿಂದಲೂ ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ!

ಯಾರೂ ನೌಕರರನ್ನು ತಪ್ಪು ದಾರಿಗೆ ಎಳೆಯಬಾರದು. ಅಂತಹ ಕೆಲಸ ನಡೆದರೆ ನೌಕರರು ಗಮನ ಕೊಡಬಾರದು. ನೌಕರರಿಗೆ ನಮ್ಮ ಮೇಲೆ ನಂಬಿಕೆ ಇದೆ. ಅವರ ಮೇಲೆ ನಮಗೆ ಭರವಸೆ ಇದೆ. ಹೀಗಿರುವಾಗ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕುವ ಕೆಲಸ ಮಾಡಬಾರದು. ನಾವೆಲ್ಲಾ ಒಂದು ಕುಟಂಬದಂತೆ ಇದ್ದೇವೆ. ಅಪರಾಧ ಮಾಡಿರುವವರು ಅಮಾನತ್‌ ಆಗಿ¨ªಾರೆ. ಅವರನ್ನು ವಾಪಸ್‌ ತೆಗೆದುಕೊಳ್ಳುವಂತೆ ನೌಕರರು ನಮ್ಮ ಮುಂದೆ ಬೇಡಿಕೆ ಇಟ್ಟಿಲ್ಲ. ಹಾಗಾಗಿ ಅದರ ಬಗ್ಗೆ ಈಗ ಚರ್ಚೆ ಅನಗತ್ಯ. ಈಗ ಹಣಕಾಸು ಇಲಾಖೆಯಿಂದ ಹಣ ಬಂದಿಲ್ಲ. ಹೀಗಾಗಿ ಡಿಸೆಂಬರ್‌ ತಿಂಗಳ ಅರ್ಧ ಸಂಬಳ ಮಾತ್ರ ಕೊಟ್ಟಿದ್ದೇವೆ. ಇನ್ನು ಎರಡೂ¾ರು ದಿನಗಳಲ್ಲಿ ಹಣಕಾಸು ಇಲಾಖೆಯಿಂದ ಹಣ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next