Advertisement

ಸಮಾಜದ ಸುವ್ಯವಸ್ಥೆಗೆ ಕಾನೂನು ಅಗತ್ಯ

09:02 PM Nov 13, 2020 | Suhan S |

ಸುರಪುರ: ಸಮಾಜದಲ್ಲಿ ಶಾಂತಿ-ಸುವ್ಯಸ್ಥೆ ಕಾಪಾಡುವಲ್ಲಿ ಕಾನೂನು ಪೂರಕವಾಗಿ ಕೆಲಸ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಮತ್ತು ಸುವ್ಯವಸ್ಥೆ ರಕ್ಷಣೆಗೆ ಕಾನುನು ಅತ್ಯಂತ ಅಗತ್ಯ ಎಂದು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶರಾದ ತಯ್ಯಬಾ ಸುಲ್ತಾನ ಹೇಳಿದರು.

Advertisement

ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕಾನೂನು ಸೇವೆಗಳ ಪ್ರಾಧಿ ಕಾರ ಮತ್ತು ವಕೀಲರ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ವ್ಯವಸ್ಥೆ ಇಲ್ಲದಿರುವ ನಾಡಿನಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಕಾನೂನು ಪಾಲನೆಯಿಂದಲೇ ದೇಶದಲ್ಲಿ ಜನ ನೆಮ್ಮದಿಯಿಂದ ಜೀವನ ಮಾಡುವಂತಾಗಿದೆ ಎಂದರು.

ಸಿವಿಲ್‌ ನ್ಯಾಯಾಧೀಶ ಚಿದಾನಂದ ಬಡಿಗೇರ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರದಿಂದ ನ್ಯಾಯಾಲಯದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು. ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಅಮರನಾಥ ಬಿ.ಎನ್‌. ಮಾತನಾಡಿ,ಪ್ರತಿಯೊಬ್ಬರೂ ಕಾನೂನು ಸೇವೆಗಳ ಸೌಲಭ್ಯ ಪಡೆಯಬೇಕು ಎಂದರು.

ವಕೀಲರಾದ ಸವಿತಾ ಪಾಟೀಲ ಉಪನ್ಯಾಸ ನೀಡಿದರು. ವಕೀಲರ ಸಂಘದಅಧ್ಯಕ್ಷ ಮಹಮದ್‌ಹುಸೇನ ಅಧ್ಯಕ್ಷತೆವಹಿಸಿದ್ದರು. ಈ ವೇಳೆ ನಂದನಗೌಡ ಪಾಟೀಲ, ವಕೀಲರಾದ ಆನಂದರೆಡ್ಡಿಬಿಜಾಸ್ಪೂರ, ಆದಪ್ಪ ಹೊಸ್ಮನಿ, ಚನ್ನಪ್ಪಹೂಗಾರ, ಮಧುಸೂದನ ಮೂಂದಡಾ, ಎಂ.ಎಂ. ಖಾಜಿ, ಶರಣಗೌಡ ಪಾಟೀಲ, ವಿನಾಯಕ, ವೆಂಕೋಬ ದೇಸಾಯಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next