Advertisement

ಗೋವಾ ಅಧಿಕಾರಿಗಳ ತಡೆದಿದ್ದಕ್ಕೆ ಕಾನೂನು ಹೋರಾಟ: ಪಾಲೇಕರ್‌

07:00 AM Aug 11, 2018 | Team Udayavani |

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರ ತೆಗೆಯಲು ಕಣಕುಂಬಿಗೆ ತೆರಳಿದ್ದ ಗೋವಾ ಅಧಿಕಾರಿಗಳ ತಂಡವನ್ನು ಕರ್ನಾಟಕ ಪೊಲೀಸರು ಐಬಿಗೆ ಕರೆದೊಯ್ದ ಪ್ರಕರಣವನ್ನು ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 

Advertisement

ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್‌ ಈ ಕುರಿತಂತೆ ರಾಜ್ಯದ ಅಡ್ವೋಕೇಟ್‌ ಜನರಲ್‌ ದತ್ತಪ್ರಸಾದ ಲಾವಂಡೆ ಬಳಿ ಚರ್ಚೆ ನಡೆಸಿದ್ದಾರೆ. ಈ ಕುರಿತು ಗೋವಾ ಸರ್ಕಾರವು ಕರ್ನಾಟಕದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಾಲೇಕರ್‌, ಕರ್ನಾಟಕ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಮುಖ್ಯಮಂತ್ರಿ ಪರೀಕ್ಕರ್‌ ಸದ್ಯ ಅಮೆರಿಕಕ್ಕೆ ತೆರಳಿರುವುದರಿಂದ ಅವರೊಂದಿಗೆ ಈ ಕುರಿತಂತೆ ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಣಕುಂಬಿಗೆ ತೆರಳಿದ್ದ 8 ಮಂದಿ ಗೋವಾ ಅಧಿಕಾರಿಗಳನ್ನು ಅಪರಾಧಿಗಳಂತೆ ಕರೆದೊಯ್ದು, ಕರ್ನಾಟಕ ಪೊಲೀಸರೊಂದಿಗೆ ನಿಲ್ಲಿಸಿ ಫೋಟೊ ತೆಗೆಯಲಾಗಿದೆ. ಗೋವಾ ಅಧಿಕಾರಿಗಳನ್ನು ಒಂದು ಬಂಗಲೆಯಲ್ಲಿರಿಸಿ ದೂರವಾಣಿ ಕರೆ ಮಾಡಲು ಕೂಡ ಅವಕಾಶ ನೀಡಿಲ್ಲ ಎಂದರು.

ಕರ್ನಾಟಕ ಪೊಲೀಸರು ಗೋವಾ ಅಧಿಕಾರಿಗಳೊಂದಿಗೆ ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿರುವುದು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮಹದಾಯಿ ವಿಷಯದಲ್ಲಿ ಆಕ್ರಮಣಕಾರಿ ಹೋರಾಟ ನಡೆಸುವ ಸಂದರ್ಭ ಇದೀಗ ಬಂದಾಗಿದೆ.
– ಡಾ.ಪ್ರಮೋದ್‌ ಸಾವಂತ, ಗೋವಾ ವಿಧಾನಸಭೆ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next