Advertisement

ಏಕಕಾಲದಲ್ಲಿ ಚುನಾವಣೆ ನಡೆಸಲು ಕಾನೂನು ಆಯೋಗ ಶಿಫಾರಸು

06:00 AM Aug 31, 2018 | Team Udayavani |

ನವದೆಹಲಿ: ಲೋಕಸಭೆ, ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂಬ ಚರ್ಚೆಯ ನಡುವೆ  ಕಾನೂನು ಆಯೋಗವು ಗುರುವಾರ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ  ಏಕಕಾಲಿಕ ಚುನಾವಣೆ ಬೆಂಬಲಿಸಿ ವರದಿ ನೀಡಿದೆ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದು ಉತ್ತಮ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲ, ಎಲ್ಲ ಕಾಲದಲ್ಲೂ ಚುನಾವಣಾ ಮೋಡ್‌ನ‌ಲ್ಲಿರುವುದನ್ನೂ ಇದು ತಪ್ಪಿಸುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಏಕಕಾಲದ ಚುನಾವಣೆ ಬಗ್ಗೆ  ಚರ್ಚೆ ನಡೆಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ವರದಿಯನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ವರದಿಯನ್ನು ಕಾನೂನು ಸಚಿವಾಲಯಕ್ಕೆ  ಸಲ್ಲಿಸಲಾಗಿದ್ದು, ಏಕಕಾಲಿಕ ಚುನಾವಣೆ ನಡೆಸಲು ಅಗತ್ಯವಿರುವ ಸಂವಿಧಾನ ಮತ್ತು ಚುನಾವಣಾ ಕಾಯ್ದೆ ತಿದ್ದುಪಡಿಗೂ ಪ್ರಸ್ತಾಪ ಮಾಡಲಾಗಿದೆ.

Advertisement

2024ರಿಂದ ಏಕಕಾಲದ ಚುನಾವಣೆಯನ್ನು ನಡೆಸ ಬಹುದಾಗಿದೆ. 2021ರಲ್ಲಿ ನಡೆಯುವ ಕೆಲವು ರಾಜ್ಯಗಳ ಚುನಾವಣೆ ನಡೆಯಲಿದ್ದು, ಆ ರಾಜ್ಯಗಳ ಅವಧಿ ಕೇವಲ 30 ತಿಂಗಳುಗಳವರೆಗೆ ಇರಲಿದೆ. ಅಂದರೆ 2024ರಲ್ಲಿ ನಡೆಯಲಿರುವ ಏಕಕಾಲದ ಚುನಾವಣೆಯ ಜೊತೆಗೇ ಈ ರಾಜ್ಯಗಳಲ್ಲೂ ಚುನಾವಣೆ ನಡೆಸಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next