Advertisement

ಸುಸ್ಥಿರ ಇಂಧನ ಬಳಕೆ ಜಾಗೃತಿ ಅಭಿಯಾನಕ್ಕೆ ಚಾಲನೆ

12:58 AM May 26, 2019 | Lakshmi GovindaRaj |

ಬೆಂಗಳೂರು: ಸುಸ್ಥಿರ ಇಂಧನ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುಶೀಲ್‌ ರೆಡ್ಡಿ ಎಂಬವರು ಹಮ್ಮಿಕೊಂಡಿರುವ “ದಿ ಸನ್‌ ಪೆಡಲ್‌ ರೈಡ್‌-ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌’ ಎಂಬ ಅಭಿಯಾನಕ್ಕೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರು ಶನಿವಾರ ಚಾಲನೆ ನೀಡಿದರು.

Advertisement

ದೇವರಾಜು ಅರಸು ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಬಿ.ಬಸವರಾಜು ಅವರು, ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಉಗುಳುವ ಹೊಗೆ ನೇರವಾಗಿ ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ನಾನಾ ಕಾಯಿಲೆಗಳು ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಂತಹ ಪರಿಸರ ಸ್ನೇಹಿ ವಾಹನಗಳನ್ನು ಬಳಸಬೇಕಾದ ಅನಿವಾರ್ಯತೆಯಿದೆ. ಈ ಮೂಲಕ ಹೊಗೆ ಮುಕ್ತ ಬೆಂಗಳೂರು ನಿರ್ಮಿಸಬೇಕು ಎಂದು ಹೇಳಿದರು.

ವಿದ್ಯುತ್‌ ಚಾಲಿತ ಆಟೋ ರಿಕ್ಷಾ(ಟುಕ್‌ ಟುಕ್‌)ವಾಹನದ ಮೂಲಕ ದೇಶಾದ್ಯಂತ 60 ದಿನಗಳಲ್ಲಿ ಆರು ಸಾವಿರ ಕಿ.ಮೀಟರ್‌ ಕ್ರಮಿಸಲಿರುವ ಸುಶೀಲ್‌ ರೆಡ್ಡಿ ಮತ್ತು ತಂಡ ಹೆದ್ದಾರಿಯುದ್ದಕ್ಕೂ ಸುಸ್ಥಿರ ಇಂಧನ, ಚಲನಶೀಲತೆ ಮತ್ತು ಶುದ್ಧ ಗಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ. ಈ ರಿಕ್ಷಾವನ್ನು ವೋಲ್ಟಾ ಆಟೋಮೋಟಿವ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌(ನಿಎಐಪಿಎಲ್‌) ಸಂಸ್ಥೆ ಸಿದ್ಧಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next