Advertisement

“ಸ್ಟಡಿ ಇನ್‌ ಇಂಡಿಯಾ” ಪೋರ್ಟಲ್‌ಗೆ ಚಾಲನೆ

09:25 PM Aug 03, 2023 | Team Udayavani |

ನವದೆಹಲಿ: “ಸ್ಟಡಿ ಇನ್‌ ಇಂಡಿಯಾ’ ಪೋರ್ಟಲ್‌ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಚಾಲನೆ ನೀಡಿದರು. ಸ್ಟಡಿ ಇನ್‌ ಇಂಡಿಯಾ(ಎಸ್‌ಐಐ) ಪೋರ್ಟಲ್‌, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯಲು ಮಾರ್ಗವನ್ನು ಸಡಿಲಗೊಳಿಸಲಿದೆ.

Advertisement

“ಭಾರತವನ್ನು ಜಾಗತಿಕ ಶಿಕ್ಷಣ ಹಬ್‌ ಆಗಿ ಮಾಡುವ ಗುರಿಯನ್ನು ಈ ಪೋರ್ಟಲ್‌ ಹೊಂದಿದೆ. ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ವಿದೇಶಿ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಇದರಿಂದ ವೀಸಾ ಸೇರಿದಂತೆ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ್ರಕ್ರಿಯೆ ಸಡಿಲಗೊಳ್ಳಲಿದೆ. ಇದು ಭಾರತದಲ್ಲಿ ಅವರ ಸಂಪೂರ್ಣ ಶಿಕ್ಷಣ ಅವಧಿಯನ್ನು ಸುಗುಮಗೊಳಿಸಲಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next