Advertisement

ರಾಕೆಟ್‌ ಟ್ರ್ಯಾಕಿಂಗ್‌ ಆ್ಯಂಟೆನಾ ಆವಿಷ್ಕಾರ

03:00 AM Jul 13, 2017 | Karthik A |

ನವದೆಹಲಿ: ರಾಕೆಟ್‌ಗಳ ಉಡ್ಡಯನದ ವೇಳೆ ಅದು ಗಮ್ಯವನ್ನು ಸರಿದಾರಿಯಲ್ಲಿ ಕ್ರಮಿಸುತ್ತಿದೆಯೇ ಎಂದು ಪರಿಶೀಲಿಸಲು ಹಡಗಿನಲ್ಲಿ ಬಳಸಬಹುದಾದ ಟ್ರ್ಯಾಕಿಂಗ್‌ ಆ್ಯಂಟೆನಾ ಒಂದನ್ನು ಇಸ್ರೋ ನೂತನವಾಗಿ ಆವಿಷ್ಕರಿಸಿದೆ. ಇಸ್ರೋದ ಉಡ್ಡಯನ ವಿಭಾಗ ‘ಟೆಲಿಮೆಟ್ರಿ ಟ್ರ್ಯಾಕಿಂಗ್‌ ಮತ್ತು ನೆಟ್‌ವರ್ಕ್‌ ‘ಐಸ್‌ಟ್ರ್ಯಾಕ್‌’ ಇದರ ವಿನ್ಯಾಸ ಮತ್ತು ನಿರ್ಮಾಣ ಮಾಡಿದ್ದು, ಹಡಗಿನಲ್ಲಿ ಸ್ಥಾಪಿಸಬಹುದಾದ ಮಾದರಿಯನ್ನು ಪರಿಚಯಿಸಿದೆ. 4.6 ಮೀ. ವಿಸ್ತಾರದ ಆ್ಯಂಟೆನಾ ಇದಾಗಿದ್ದು, ಮೋಷನ್‌ ಸಿಮ್ಯುಲೇಟರ್‌, ಸಂದೇಶ ವಾಹಕ ವ್ಯವಸ್ಥೆ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next