Advertisement

ಲೇಟೆಸ್ಟ್‌ ಡಿಸ್ಕವರಿ

06:00 AM Nov 05, 2018 | |

ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ ಕೂಡ ಒಂದು. ಇದರ ನಿರ್ವಹಣೆ ನೋಡಿಕೊಳ್ಳುತ್ತಿರುವ ಇಂಗ್ಲೆಂಡ್‌ ಮೂಲದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿ, ಈಗ ಭಾರತದ ಆಟೋಮೊಬೈಲ್‌ ಕ್ಷೇತ್ರವನ್ನು ಇನ್ನಷ್ಟು ಆವರಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಉತ್ಪಾದನೆಗಳನ್ನು ವಿನೂತನಗೊಳಿಸುವ ಕಾಯಕಕ್ಕೆ ಮುಂದಾಗಿದೆ. ಆಧುನಿಕ ತಂತ್ರಜಾnನಗಳನ್ನು ಕಾಲ ಕಾಲಕ್ಕೆ ಅಪ್‌ಡೇಟ್‌ ಮಾಡದಿದ್ದರೆ ಅಳಿವು ಉಳಿವಿನ ಪ್ರಶ್ನೆ ಎನ್ನುವುದನ್ನು ಮನಗಂಡಿರುವ ಕಂಪನಿ, ಹೊಸತನದ ವಿನ್ಯಾಸ, ಸೌಲಭ್ಯ ಪೂರೈಕೆಯತ್ತ ಗಮನ ಹರಿಸಿದೆ.

Advertisement

ಈಗಾಗಲೇ ತಂತ್ರಜಾnನ ಅಳವಡಿಕೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿರುವ ಜಾಗ್ವಾರ್‌, 2015ರಲ್ಲಿ ಪರಿಚಯಿಸಿದ್ದ ಜನಪ್ರಿಯ ಡಿಸ್ಕವರಿ ನ್ಪೋರ್ಟ್ಸ್ ಎಸ್‌ಯು ಸೆಗೆ¾ಂಟ್‌ ಮಾದರಿಯ ಕಾರನ್ನು 2017ರಲ್ಲಿ ಬದಲಾವಣೆ ಮಾಡಲಾಗಿತ್ತು. ಈಗ ಮತ್ತೆ ಒಂದಿಷ್ಟು ಬದಲಾವಣೆಯೊಂದಿಗೆ ಅದನ್ನು ಪರಿಚಯಿಸುತ್ತಿದೆ. ಐಷಾರಾಮಿ ಪ್ರಯಾಣಕ್ಕೆ ಮೆಚ್ಚುಗೆ ಪಡೆದುಕೊಂಡಿದ್ದ ಡಿಸ್ಕವರಿ ನ್ಪೋರ್ಟ್ಸ್ನ ಹೊಸ ವೇರಿಯಂಟ್‌, ಇನ್ನಷ್ಟು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಲ್ಲಿದೆ.

ಈಗೇನು ಅಂಥ ಮಹತ್ವದ ಬದಲಾವಣೆ?
ವಿಶ್ವ ಮಾರುಕಟ್ಟೆಯಲ್ಲಿ ಡಿಸ್ಕವರಿ ನ್ಪೋರ್ಟ್ಸ್ಗೆ ಇರುವ ಬೇಡಿಕೆಗೆ ಧಕ್ಕೆಯಾಗದಂತೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬರುತ್ತಿರುವ ಕಂಪನಿ, ಈಗ ಎಂಜಿನ್‌ ಸಾಮರ್ಥ್ಯದತ್ತ ಹೆಚ್ಚಿನ ಗಮನಹರಿಸಿದಂತಿದೆ. ನೂತನ ಡಿಸ್ಕವರಿ ನ್ಪೋರ್ಟ್ಸ್ ಕಾರಿಗೆ ಈಗ 2.0 ಲೀಟರ್‌, 4 ಸಿಲಿಂಡರ್‌, ಡೀಸೆಲ್‌ ಎಂಜಿನ್‌ ಅಳವಡಿಸಲಾಗಿದೆ. ಇದು 148.3 ಬಿಎಚ್‌ಪಿ ಮತ್ತು 382ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಅಲ್ಲದೆ, 9 ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅಳವಡಿಸಲಾಗಿದ್ದು, ಯಾವುದೇ ರೀತಿಯ ಆಫ್ರೋಡ್‌ನ‌ಲ್ಲೂ ಇದು ಸಲೀಸಾಗಿ ಮುನ್ನುಗ್ಗಬಲ್ಲದು. ಗೇರ್‌ ಪ್ಯಾಡಲ್‌ ಶಿಫ್ಟಿಂಗ್‌ ವ್ಯವಸ್ಥೆಯ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಎಂಥದೇ ಭಾರವನ್ನೂ ಈ ಕಾರು ಎಳೆದೊಯ್ಯಬಲ್ಲದು.

ಡ್ರೆ„ವಿಂಗ್‌ ಆಪ್ಶನ್‌ಗಳು
ಡಿಸ್ಕವರಿ, ನ್ಪೋರ್ಟ್ಸ್ ಪರ್ಫಾಮನ್ಸ್‌ನಲ್ಲಿ ಎಂದೆಂದೂ ಅಲ್ಟಿಮೇಟ್‌. ಈಗ ಮತ್ತಷ್ಟು ಸಾಮರ್ಥ್ಯ ಹೆಚ್ಚಿಸಿದ್ದರಿಂದ ವೇಗದ ಡ್ರೆ„ವ್‌ಗೂ, ಮಂದ ವೇಗದ ಡ್ರೆ„ವ್‌ಗೂ ಭಿನ್ನವೆನಿಸುವಂತಿದೆ. ವೇಗದ ಡ್ರೆ„ವ್‌ನಲ್ಲಿ ಸ್ಮಾರ್ಟ್‌ನೆಸ್‌ ಜಾಸ್ತಿಯಾಗಿದೆ. ಈ ಹಿಂದಿನ ವೇರಿಯಂಟ್‌ಗಳಲ್ಲಿ ಇರುವಂತೆ ನಾಲ್ಕು ಟೆರೇನ್‌ ಆಪ್ಶನ್‌ಗಳನ್ನು ಹೊಂದಿದೆ. ಹಿಮ, ಹುಲ್ಲು, ಮಣ್ಣು ಹಾಗೂ ಮರಳಿನಲ್ಲಿ ಓಡಿಸುವಾಗ ಸುಲಭವಾಗುವಂತೆ ಆಧುನಿಕ ತಂತ್ರಜಾnನದ ಆಪ್ಶನ್‌ಗಳನ್ನು ನೀಡಲಾಗಿದೆ. ಇದು ಚಾಲಕ ಸ್ನೇಹಿಯಾಗಿಸಲಾಗಿದೆ. ಇದಲ್ಲದೇ, ಗ್ರೌಂಡ್‌ ಕ್ಲಿಯರೆನ್ಸ್‌ 200ಮಿ.ಮೀ ಇದ್ದು ಹಾಗೂ 19 ಇಂಚು ಅಗಲದ ಚಕ್ರಗಳು ಹೊಂದಿರುವುದರಿಂದ ಈ ಎಲ್ಲಾ ಮೋಡ್‌ಗಳಲ್ಲಿ ಡ್ರೆ„ವ್‌ ಸುಲಭವೆನಿಸುತ್ತದೆ.

ಹೇಗಿದೆ ಕಾರಿನ ವಿನ್ಯಾಸ?
ಹಳೆಯ ವೇರಿಯಂಟ್‌ನ ಮುಂಭಾಗಕ್ಕೆ ಹೋಲಿಕೆ ಮಾಡಿ ನೋಡಿದಾಗ ಅಂಥದ್ದೇನೂ ವ್ಯತ್ಯಾಸ ಕಾಣುವುದಿಲ್ಲ. ಅದೇ ವಿನ್ಯಾಸವನ್ನೇ ಉಳಿಸಿಕೊಳ್ಳಲಾಗಿದೆ. ಜೇನುಗೂಡು ಹೋಲಿಕೆಯ ಗ್ರಿಲ್‌ ಮೇಲೆ, ಕಂಪನಿ ಸಿಗ್ನೇಚರ್‌ ಅಳವಡಿಸಲಾಗಿದ್ದು, ಸ್ವಲ್ಪ ಮಟ್ಟಿಗೆ ತನ್ನದೇ ತನ್ನದೇ ಕಂಪನಿಯ ಇನ್ನೊಂದು ಜನಪ್ರಿಯ ಮಾಡೆಲ್‌ ಇವೋಕ್‌ನ ಸಾಮ್ಯತೆ ಹೊಂದಿದೆ. ಹಿಂಭಾಗದ ಒಟ್ಟಾರೆ ವಿನ್ಯಾಸ ಹಾಗೂ ಹೆಡ್‌ಲ್ಯಾಂಪ್‌ ವಿನ್ಯಾಸವನ್ನೂ ಬದಲಾಯಿಸಲಾಗಿದೆ. ಉಳಿದಂತೆ, ಕಾರಿನ ಒಳಭಾಗದಲ್ಲಿ ಡ್ಯಾಶ್‌ಬೋಡ್‌ ಹೆಚ್ಚು ಆಕರ್ಷಣೀಯವಾಗಿದೆ. ಆರಾಮದಾಯಕ ಲೆದರ್‌ ಕವರ್‌ ಸೀಟ್‌ಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಎಂಟು ಮಾದರಿಯ ಆಪ್ಶನ್‌ಗಳನ್ನು ಕಲ್ಪಿಸಲಾಗಿದೆ.   ಮುಂಭಾಗ ಮತ್ತು ಹಿಂಭಾಗದಲ್ಲಿ ಕುಳಿತುಕೊಳ್ಳುವವರಿಗೆ ಪ್ರತ್ಯೇಕವಾಗಿ ಅಡೆjಸ್ಟ್‌ ಮಾಡಿಕೊಳ್ಳಬಹುದಾದ ಹವಾನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Advertisement

 ಎಕ್ಸ್‌ ಶೋ ರೂಂ ಬೆಲೆ: 44.68 ಲಕ್ಷ ರೂ.ನಿಂದ ಆರಂಭ
 ಮೈಲೇಜ್‌: ಪ್ರತಿ ಲೀಟರ್‌ ಡೀಸೆಲ್‌ಗೆ 12ರಿಂದ 14 ಕಿ.ಮೀ.

 ಹೈಲೈಟ್ಸ್‌
 – 70 ಲೀಟರ್‌ ಇಂಧನ ಶೇಖರಣಾ ಟ್ಯಾಂಕ್‌ ಅಳವಡಿಕೆ
 – ಒಟ್ಟು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ
 – ಮೂರು ಬಣ್ಣಗಳಲ್ಲಿ ಲಭ್ಯ
 – ಬಿಎಂಡಬ್ಲ್ಯು ಎಕ್ಸ್‌ 1, ಆಡಿ ಕ್ಯೂ3 ಮತ್ತು ಕ್ಯೂ7, ಬೆಂಜ್‌ ಜಿಎಲ್‌ಎ ಕಾರುಗಳು ಪ್ರತಿಸ್ಪರ್ಧಿ 

– ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next