Advertisement

ಖ್ಯಾತ ವೇಗಿ ಲಸಿತ್‌ ಮಾಲಿಂಗ ಕ್ರಿಕೆಟ್‌ಗೆ ವಿದಾಯ

09:21 PM Sep 14, 2021 | Team Udayavani |

ಕೊಲಂಬೊ: ಶ್ರೀಲಂಕಾದ ವಿಶಿಷ್ಟ ಶೈಲಿಯ ಯಾರ್ಕರ್‌ ತಜ್ಞ, ಲಗೋರಿ ಬೌಲರ್‌ ಎಂದೇ ಗುರುತಿಸಲ್ಪಟ್ಟ, ವರ್ಣಮಯ ಕೇಶವಿನ್ಯಾಸದ ಲಸಿತ ಮಾಲಿಂಗ ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟಿಗೂ ವಿದಾಯ ಘೋಷಿಸಿದರು.

Advertisement

ನನ್ನ ಕೊನೆಯ ನಿಲ್ದಾಣವಾಗಿದ್ದ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಇದರೊಂದಿಗೆ ಎಲ್ಲ ಮಾದರಿಯ ಕ್ರಿಕೆಟಿಗೂ ವಿದಾಯ ಹೇಳುತ್ತಿದ್ದೇನೆ. ನನ್ನ ಈ ಸುದೀರ್ಘ‌ ಪ್ರಯಾಣದ ವೇಳೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನನ್ನ ಅನುಭವವನ್ನು ಕಿರಿಯ ಕ್ರಿಕೆಟಿಗರೊಂದಿಗೆ ಹಂಚಿಕೊಳ್ಳ ಬಯಸುವೆ. ನನ್ನ ಕ್ರಿಕೆಟ್‌ ಪ್ರೀತಿ ಹೀಗೆ ನಿರಂತರವಾಗಿ ಮುಂದುವರಿಯಲಿದೆ ಎಂದು ಮಾಲಿಂಗ ಹೇಳಿದರು.

 ಟಿ20 ವಿಶ್ವಕಪ್‌ ವಿಜೇತ ನಾಯಕ: ಲಸಿತ ಮಾಲಿಂಗ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟಿಗೆ ಈ ವರ್ಷದ ಜನವರಿಯಲ್ಲೇ ಗುಡ್‌ಬೈ ಹೇಳಿದ್ದರು. ಟಿ20ಯಲ್ಲಿ ಮುಂದುವರಿದಿದ್ದರು. ಕಳೆದ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಆಡಿ ವಿದಾಯ ಹೇಳುವುದು ಅವರ ಯೋಜನೆಯಾಗಿತ್ತು. ಆದರೆ ಕೋವಿಡ್‌ ಕಾರಣದಿಂದ ಅದು ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಅವರ ಬಯಕೆ ಈಡೇರಲಿಲ್ಲ. 2014ರ ಟಿ20 ವಿಶ್ವಕಪ್‌ ವಿಜೇತ ಶ್ರೀಲಂಕಾ ತಂಡದ ನಾಯಕನಾಗಿದ್ದುದು ಮಾಲಿಂಗ ಪಾಲಿನ ಹೆಗ್ಗಳಿಕೆ. 84 ಟಿ20 ಪಂದ್ಯಗಳಿಂದ 107 ವಿಕೆಟ್‌, 122 ಐಪಿಎಲ್‌ ಪಂದ್ಯಗಳಿಂದ 170 ವಿಕೆಟ್‌ ಉರುಳಿಸಿದ್ದು ಮಾಲಿಂಗ ಸಾಧನೆ.

Advertisement

Udayavani is now on Telegram. Click here to join our channel and stay updated with the latest news.

Next