Advertisement

ಲಷ್ಕರ್ ಉಗ್ರರ ಜೊತೆ ಕೈಜೋಡಿಸಿದ್ದ ಯುಪಿಯ ಶರ್ಮಾ ಪೊಲೀಸ್ ಬಲೆಗೆ!

03:40 PM Jul 10, 2017 | Team Udayavani |

ಜಮ್ಮು- ಕಾಶ್ಮೀರ: ಕಣಿವೆ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೊಯ್ಬಾಕ್ಕೆ ನೆರವು ನೀಡುತ್ತಿದ್ದ ಉತ್ತರಪ್ರದೇಶ ಮುಜಾಫರ್ ನಗರದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಜಮ್ಮು – ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಉತ್ತರಪ್ರದೇಶದ ಸಂದೀಪ್ ಕುಮಾರ್ ಶರ್ಮಾ 2012ರಲ್ಲಿ ಕೆಲಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ.  ತದನಂತರ ಬದಲಿ ಕೆಲಸಕ್ಕಾಗಿ ಪಂಜಾಬ್ ಪ್ರಾಂತ್ಯಕ್ಕೂ ಪ್ರಯಾಣ ಬೆಳೆಸಿದ್ದನಂತೆ. ಆದರೆ ಆ ಬಳಿಕ ಎಟಿಎಂ ದರೋಡೆ ಮಾಡುವ ಸಂಚಿನೊಂದಿಗೆ ಜನವರಿಯಲ್ಲಿ ಕಾಶ್ಮೀರಕ್ಕೆ ವಾಪಸ್ ಆಗಿದ್ದ ಎಂದು ವರದಿ ಹೇಳಿದೆ.

ಪಂಜಾಬ್ ಪ್ರಾಂತ್ಯದಲ್ಲಿ ಶರ್ಮಾಗೆ ಸ್ಥಳೀಯ ಮಾಹಿತಿದಾರರ ಮೂಲಕ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ನಂಟು ಬೆಳೆದಿತ್ತು.  ಶರ್ಮಾ ಲಷ್ಕರ್ ನ ನಟೋರಿಯಸ್ ಉಗ್ರ ಬಶೀರ್ ಲಷ್ಕರಿಯ ಆಪ್ತನಾಗಿದ್ದ ಎಂದು ವರದಿ ವಿವರಿಸಿದೆ.

ಶರ್ಮಾ ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆ ಕೈಜೋಡಿ ಬ್ಯಾಂಕ್ ದರೋಡೆ, ಭಾರತೀಯ ಯೋಧರ ಮೇಲೆ, ಜಮ್ಮು ಕಾಶ್ಮೀರ ಪೊಲೀಸರ ಮೇಲೆ ದಾಳಿ ನಡೆಸುವ ಸಂಚಿನಲ್ಲಿ ನೆರವು ನೀಡುತ್ತಿದ್ದ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next