ಹೈದರಾಬಾದ್ : ದೇಶದಲ್ಲಿ ಕೋವಿಡ್ ಸೋಂಕಿನ ಲಸಿಕೆಗಳ ಕೊರತೆ ಇದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವುದರ ನಡುವೆ ಜಿಎಂಆರ್ ಹೈದರಾಬಾದ್ ಏರ್ ಕಾರ್ಗೋ (ಜಿಎಚ್‌ಎಸಿ) ಗೆ 56.6 ಟನ್, ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗಳು ಬಂದು ತಲುಪಿವೆ.
ಇದು ಈವರೆಗೆ ದೇಶಕ್ಕೆ ಬಂದ ಅತ್ಯಂತ ದೊಡ್ಡ ಲಸಿಕೆಯ ಆಮದಾಗಿದೆ. ಮೂರು ಮಿಲಿಯನ್ ಡೋಸ್ ಸ್ಪಟ್ನಿಕ್ ವಿ ಡೋಸ್ ಗಳು ಬಂದು ತಲುಪಿವೆ. ಲಸಿಕೆಯು ರಷ್ಯಾದಿಂದ ವಿಶೇಷವಾಗಿ ಚಾರ್ಟರ್ಡ್ ಸರಕು ಸಾಗಣೆ ಆರ್.ಯು -9450 ನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣವನ್ನು ಮಧ‍್ಯಾಹ್ನ 03.43 ಹೊತ್ತಿಗೆ ಬಂದು ತಲುಪಿದೆ.
ಇದನ್ನೂ ಓದಿ : ರೈತರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ, ಲಸಿಕೆ ನೀಡಿ: ಹಸಿರು ಸೇನೆ ಆಗ್ರಹ
ಇಂದು(ಮಂಗಳವಾರ, ಜೂನ್ 1) ಮಧ್ಯಾಹ್ನ 3:43 ರ ಹೊತ್ತಿಗೆ ರಷ್ಯಾದಿಂದ ಬಂದಿಳಿದ ಬೃಹತ್ ಪ್ರಮಾಣದ ಸ್ಪಟ್ನಿಕ್ ಲಸಿಕೆಗಳನ್ನು ಕೇವಲ 90 ನಿಮಿಷಗಳಲ್ಲಿ ಪೂರೈಸುವಲ್ಲಿಗೆ ಕಳಹಿಸಿಕೊಡಲಾಗಿದೆ ಎಂದು ಜಿ ಎಚ್ ಎ ಸಿ ತಿಳಿಸಿದೆ.
Related Articles
ಇನ್ನು, ಸ್ಪುಟ್ನಿಕ್ ವಿ ಲಸಿಕೆಗೆ ವಿಶೇಷ ನಿರ್ವಹಣೆ ಮತ್ತು ಸಂಗ್ರಹಣೆಯ ಅಗತ್ಯವಿರುತ್ತದೆ, ಇದನ್ನು -20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಬೇಕಾಗುತ್ತದೆ. ಜಿಎಚ್ಎಸಿ ಕಸ್ಟಮರ್ ಸಪ್ಲೈ ಚೈನ್ ತಂಡದ ತಜ್ಞರು, ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಧಾನಿ ಅಧ್ಯಕ್ಷತೆಯ ಸಭೆಗೆ ಗೈರು ಹಾಜರಾಗಿದ್ದೇಕೆ? ಬಂಗಾಳ ಮಾಜಿ ಸಿಎಸ್ ಗೆ ಶೋಕಾಸ್ ನೋಟಿಸ್