Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಲಂಕಾ ವೇಗಿ ಇಸುರು ಉದಾನ

01:06 PM Jul 31, 2021 | Team Udayavani |

ಕೊಲಂಬೊ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ವೇಗದ ಬೌಲರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 33 ವರ್ಷದ ಎಡಗೈ ವೇಗಿಯ ನಿವೃತ್ತಿ ಘೋಷಣೆ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಉಂಟು ಮಾಡಿದೆ.

Advertisement

ಇದುವರೆಗೆ 21 ಏಕದಿನ ಪಂದ್ಯಗಳು ಮತ್ತು 34 ಟಿ20 ಪಂದ್ಯಗಳಲ್ಲಿ ಇಸುರು ಉದಾನ ಲಂಕಾ ತಂಡದ ಪರವಾಗಿ ಆಡಿದ್ದರು. ಸ್ವಿಂಗ್ ಮತ್ತು ಸ್ಲೋವರ್ ಎಸೆತಗಳಿಗೆ ಹೆಸರಾಗಿದ್ದ ಉದಾನ 45 ವಿಕೆಟ್ ಕಬಳಿಸಿದ್ದರು.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ದ.ಆಫ್ರಿಕಾ ವಿರುದ್ಧ 4-3 ಅಂತರದಿಂದ ಗೆದ್ದ ಭಾರತ ವನಿತೆಯರ ತಂಡ

ಭಾರತ ತಂಡದ ವಿರುದ್ಧ ಇತ್ತೀಚೆಗೆ ಅಂತ್ಯವಾದ ಸರಣಿಯಲ್ಲೂ ಉದಾನ ಆಡಿದ್ದರು. ಮೂರು ಪಂದ್ಯವಾಡಿದ್ದ ಉದಾನ ವಿಕೆಟ್ ಪಡೆಯಲು ವಿಫಲರಾಗಿದ್ದರು. ಗಾಯಗೊಂಡ ಕಾರಣ ಸರಣಿಯ ಅಂತ್ಯದಲ್ಲಿ ಆಡಲಾಗಿರಲಿಲ್ಲ.

Advertisement

ಅಂಡರ್ 19 ಮಟ್ಟದಲ್ಲಿ ತೋರಿದ ಪ್ರದರ್ಶನದ ಕಾರಣ ಉದಾನ 2009ರ ಟಿ20 ವಿಶ್ವಕಪ್ ಗೆ ಲಂಕಾ ತಂಡಕ್ಕೆ ಆಯ್ಕೆಯಾಗಿದ್ದರು. ನಂತರ ಗಾಯದ ಸಮಸ್ಯೆ, ಅಸ್ಥಿರ ಪ್ರದರ್ಶನಗಳಿಂದಾಗಿ ಉದಾನಗೆ ಹೆಚ್ಚು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಬ್ಯಾಟಿಂಗ್ ನಲ್ಲೂ ತನ್ನ ಪ್ರದರ್ಶನ ಉತ್ತಮಗೊಳಿಸಿದ್ದ ಉದಾನ 2018ರಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದರು.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದ ಇಸುರು ಉದಾನ 10 ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next