ಮುುಂಬಯಿ, ಜ. 28: ಬೊರಿವಲಿ ಪಶ್ಚಿಮ ಧರ್ಮ ನಗರದ ಶ್ರೀ ಸಾಯಿನಾಥ್ ವೆಲ್ಫೆರ್ ಸೊಸೈಟಿ ಪರಿಸರದ ನಿವಾಸಿಗಳು ಮೂಲ ಸೌಕರ್ಯಗಳಾದ ರಸ್ತೆ ಮತ್ತು ಒಳಚರಂಡಿ ಇನ್ನಿತರ ಸವಲತ್ತುಗಳಿಂದ ವಂಚಿತರಾಗಿದ್ದು, ಈ ಉದ್ದೇಶದಿಂದ ತುಳು ಸಂಘ ಬೊರಿವಲಿ ಇದರ ಕಾರ್ಯಕಾರಿ ಸಮಿತಿಯ ಸದಸ್ಯರು ಜ. 21ರಂದು ಉತ್ತರ ಮುಂಬಯಿ ಸಂಸದ ಗೋಪಾಲ್ ಶೆಟ್ಟಿ ಅವರ ಗಮನಕ್ಕೆ ತಂದಾಗ ತತ್‌ಕ್ಷಣ ಅವರು ಸ್ಥಳೀಯ ವಿಧಾನಸಭಾ ಸದಸ್ಯ ಸುನಿಲ್ ರಾಣೆಯವರ ಜತೆ ಚರ್ಚಿಸಿದರು.
ಸಂಸದರ ಮಾತಿಗೆ ತತ್ ಕ್ಷಣ ಕಾರ್ಯ ಪ್ರವತ್ತರಾದ ಬೊರಿವಲಿ ಶಾಸಕರಾದ ಸುನಿಲ್ ರಾಣೆಯವರು ಸಾವಂತ್ ಕಂಪೌಂಡ್ ಪರಿಸರಕ್ಕೆ$ಭೇಟಿ ನೀಡಿ ಅಲ್ಲಿನ ಜನರ ತೊಂದರೆಗಳನ್ನು ಪರಿಶೀಲಿಸಿ ತನ್ನ ವಿಧಾನಸಭಾ ಅನುದಾನದಿಂದ ತತ್‌ಕ್ಷಣವೇ ರಸ್ತೆ ಮತ್ತು ಒಳಚರಂಡಿ ಯೋಜನೆಗೆ ಅನುಮೋದನೆಗೆ ಒಪ್ಪಿಗೆ ನೀಡಿದರು.
ಇದನ್ನೂ ಓದಿ:ಕರಾವಳಿ ಪ್ರದೇಶಕ್ಕೆ ಶೀಘ್ರ ಪ್ರತ್ಯೇಕ ಮರಳು ನೀತಿ : ಮುರುಗೇಶ್ ನಿರಾಣಿ
ಅನಂತರ ಇತ್ತೀಚೆಗೆ ಈ ಬಗ್ಗೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸುನಿಲ್ ರಾಣೆ ವಹಿಸಿದ್ದರು. ಮಾಜಿ ನಗರ ಸೇವಕ ಶಿವಾನಂದ ಶೆಟ್ಟಿ ಮತ್ತು ರೇಷ್ಮಾ ನಿವಾಲ್ ಬಿಜೆಪಿ ಮಹಿಳಾ ಮೋರ್ಚಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ತುಳು ಸಂಘದ ಗೌರವ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಗೌರವ ಕೋಶಾಧಿಕಾರಿ ಹರೀಶ್ ಮೈಂದನ್, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ಕಾರ್ಯದರ್ಶಿ ತಿಲೋತ್ತಮಾ ವೈದ್ಯೆ ಹಾಗೂ ಮಹಿಳಾ ವಿಭಾಗದ ಇನ್ನಿತರ ಸದಸ್ಯೆಯರು, ಸಾವಂತ್ವಾಡಿ ಕಂಪೌಂಡ್ ನಿವಾಸಿ, ಪರಿಸರದ ತುಳು, ಕನ್ನಡಿಗರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ