Advertisement
ಸರಕಾರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡಿದ್ದು ಇಲಾಖಾ ಆದೇಶ ಇನ್ನಷ್ಟೇ ಜಾರಿಯಾಗಬೇಕಿದೆ. ಇದರಿಂದ ತುಂಡುಭೂಮಿ ಹೊಂದಿದ್ದು ಭೂ ಪರಿವರ್ತನೆ ಮಾಡಲು ಪ್ರಾಧಿಕಾರದಿಂದಲೇ ಅನುಮತಿ ಬೇಕೆಂಬ ನಿಯಮ ಬದಲಾಗಲಿದೆ. ಇದು ಗ್ರಾ.ಪಂ., ಪ.ಪಂ. ಜನರಿಗೆ ಅನ್ವಯವಾಗುತ್ತದೆ. ಆದರೆ ನಗರ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇನ್ನೂ ಹಾಗೆಯೇ ಇದೆ.
Related Articles
Advertisement
ಸಚಿವರಿಂದ ಪತ್ರ ಹೋಗಿದ್ದು, ಸಭೆಯಲ್ಲಿ ನಿರ್ಣಯ ಆಗಿದ್ದರೂ ಇಲಾಖೆಯಿಂದ ಇನ್ನೂ ಸರಕಾರಿ ಆದೇಶ ಬಂದಿಲ್ಲ. ಇದಕ್ಕಾಗಿ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಮೇ 12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಪಟ್ಟಣ ಪಂಚಾಯತ್, ಪುರಸಭೆ ವ್ಯಾಪ್ತಿ ಸೇರಿದಂತೆ ಪ್ರತ್ಯೇಕ ನಗರ ಯೋಜನೆ ಪ್ರಾಧಿಕಾರಗಳಿಲ್ಲದ ಕಡೆ ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ನಿಂದ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಇದೂ ಬಾಕಿ
ಯೋಜನಾ ಪ್ರಾಧಿಕಾರದಿಂದ ಸರಕಾರಕ್ಕೆ ಕಳುಹಿಸಿದ ಮಹಾಯೋಜನೆ ಇನ್ನೂ ಅನುಮೋದನೆ ಆಗದೇ ಭೂ ವಿಂಗಡಣೆ ಕೂಡ ಮಾಡುವಂತಿಲ್ಲ. ನಗರ ಯೋಜನ ಪ್ರಾಧಿಕಾರ ಆರಂಭವಾದ ಬಳಿಕದಿಂದ ಇರುವ ಈ ಸಮಸ್ಯೆಗೆ ಕಳೆದ 13 ವರ್ಷಗಳಿಂದ ಪರಿಹಾರ ದೊರೆತಿಲ್ಲ. ಮಾಸ್ಟರ್ ಪ್ಲಾನ್ ಮಂಜೂರಾಗದ ಎಲ್ಲ ನಗರ ಯೋಜನ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ಸಾರ್ವಜನಿಕರಿಗೆ ಆಗುವ ಅನನುಕೂಲತೆಯನ್ನು ತಡೆಯಲು ಆದ್ಯತೆ ಮೇಲೆ ಸ್ಥಳೀಯ ಯೋಜನ ಪ್ರದೇಶಗಳು ಮಹಾಯೋಜನೆ ತಯಾರಿಸಿ ಯೋಜನ ಪ್ರಾಧಿಕಾರ ರಚನೆಯಾದ ವರ್ಷಗಳೊಳಗೆ ಸರಕಾರದ ಅನುಮೋದನೆಗೆ ಸಲ್ಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿಯಮ ಇದೆ. ಆದರೆ ಪಾಲನೆ ಆಗುತ್ತಿಲ್ಲ.
ಆದೇಶವಾಗಿಲ್ಲ
ನಗರ ಯೋಜನಾ ಪ್ರದೇಶದ ಹೊರ ಗ್ರಾಮದವರಿಗೆ ಅನುಕೂಲವಾಗುವ ತೀರ್ಮಾನ ಸರಕಾರದಿಂದ ಆಗಿದ್ದು ಯೋಜನಾ ಪ್ರಾಧಿಕಾರಗಳು ಇರುವಲ್ಲಿ ಮಹಾಯೋಜನೆ ಅನುಮೋದನೆಯಾಗದೇ, ಅನುಮತಿಗೂ ಶಾಶ್ವತ ವ್ಯವಸ್ಥೆಯಾಗದೇ ಸಮಸ್ಯೆ ಮುಂದುವರಿದಿದೆ. -ವಿಜಯ್ ಎಸ್. ಪೂಜಾರಿ, ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ