ಹುಬ್ಬಳ್ಳಿ: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟಿ ವಿಭಾಗದಲ್ಲಿ ಭೂಕುಸಿತ ತೆರವು ಕಾರ್ಯಾಚರಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಅ. 10ರವರೆಗೆ ಪ್ಯಾಸೆಂಜರ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳು ರದ್ದು/ಭಾಗಶಃ ರದ್ದಾಗಲಿವೆ. ಜನ ಸಾಧಾರಣ ವಿಶೇಷ ರೈಲು ಯಶವಂತಪುರ ಮತ್ತು ಸಕಲೇಶಪುರ ನಡುವೆ ಸಂಚರಿಸಲಿದೆ.
ಸಂಚಾರ ರದ್ದು: ಕೆಎಸ್‌ಆರ್ ಬೆಂಗಳೂರು- ಕನ್ನೂರ/ಕಾರವಾರ ಎಕ್ಸ್‌ಪ್ರೆಸ್ (16511/16513) ರೈಲು ಸೆ. 29, ಅ. 3, 4, 5, 6ರಂದು ಹಾಗೂ ಕೆಎಸ್‌ಆರ್ ಬೆಂಗಳೂರು- ಕನ್ನೂರ/ಕಾರವಾರ ಎಕ್ಸ್‌ಪ್ರೆಸ್ (16517/16523) ರೈಲು ಸೆ. 30, ಅ. 1, 2, 7, 8, 9ರಂದು ಬೆಂಗಳೂರಿ ನಿಂದ ರದ್ದಾಗಲಿದೆ.
ಕನ್ನೂರ/ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16512/16514) ರೈಲು ಸೆ. 30, ಅ. 1, 2, 3, 7, 8, 9, 10ರಂದು ಹಾಗೂ ಕನ್ನೂರ/ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16518/16524) ರೈಲು ಅ. 4, 5, 6 ರಂದು ಕನ್ನೂರ/ ಕಾರವಾರದಿಂದ ರದ್ದಾಗಲಿದೆ.
ಭಾಗಶಃ ರದ್ದು: ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (16575) ರೈಲು ಸೆ. 30,ಅ. 2, 4, 7, 9ರಂದು ಭಾಗಶಃ ಸಕಲೇಶಪುರ-ಮಂಗಳೂರು ಜಂಕ್ಷನ್ ನಡುವೆ ಹಾಗೂ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ (16515) ರೈಲು ಅ. 1, 3, 5, 8, 10ರಂದು ಸಕಲೇಶಪುರ-ಕಾರವಾರ ನಡುವೆ ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರಸ್ (16576) ರೈಲು ಅ. 1, 3, 5, 8,10ರಂದು ಮಂಗಳೂರು ಜ.- ಸಕಲೇಶಪುರ ನಡುವೆ ಹಾಗೂ ಕಾರವಾರ ಯಶವಂತಪುರ ಎಕ್ಸ್‌ಪ್ರೆಸ್ (16516) ರೈಲು ಅ. 2, 4, 6, 9ರಂದು ಕಾರವಾರ-ಸಕಲೇಶಪುರ ನಡುವೆ ಭಾಗಶಃ ರದ್ದಾಗಲಿದೆ.
ಜನ ಸಾಧಾರಣ ವಿಶೇಷ ರೈಲು: ಯಶವಂತಪುರ-ಸಕಲೇಶಪುರ ಜನ ಸಾಧಾರಣ ವಿಶೇಷ ರೈಲು (06515) ಅ. 6ರಂದು ರೈಲು ಸಂಖ್ಯೆ 16515ರ ನಿಗದಿತ ಸಮಯದಂತೆ ಸಕಲೇಶಪುರ ವರೆಗೆ ಸಂಚರಿಸಲಿದೆ. ಅದೇ ರೀತಿ ಸಕಲೇಶಪುರ-ಯಶವಂತಪುರ ಜನ ಸಾಧಾರಣ ವಿಶೇಷ ರೈಲು (06576) ಸೆ. 30 ಮತ್ತು ಅ.7ರಂದು ರೈಲು ಸಂಖ್ಯೆ 16576ರ ನಿಗದಿತ ಸಮಯದಂತೆ ಯಶವಂತಪುರ ವರೆಗೆ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.