Advertisement

ಲೂಸ್‌ ಮಾದನ ವಿಭಿನ್ನ ಡೈಲಾಗ್ಸ್‌; ಲಂಬೋದರ ಚಿತ್ರದ ಟ್ರೈಲರ್‌ ನಿಮಗಾಗಿ

06:58 AM Jan 05, 2019 | |

ಬೆಂಗಳೂರು: ಲೂಸ್‌ ಮಾದ ಖ್ಯಾತಿಯ ಯೋಗಿ ಅಭಿನಯದ ಲಂಬೋದರ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಭರ್ಜರಿ ಡೈಲಾಗ್‌ಗಳಿಂದ ಕೂಡಿದೆ.ಟೀಸರ್‌ ಮೂಲಕ ವಿಭಿನ್ನ ಡೈಲಾಗ್‌ಗಳ ಮೂಲಕ ಗಮನ ಸೆಳೆದಿದ್ದ ಚಿತ್ರದ  ಟ್ರೈಲರ್‌ಗೂ 2 ದಿನಗಳೊಳಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Advertisement

ಲೂಸ್‌ ಮಾದ ಯೋಗಿ ಲಂಬೋದರನಾಗಿ ಪಡ್ಡೆ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಂಕ್ಷಾ ಅವರು ಯೋಗಿಗೆ ಜೋಡಿಯಾಗಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್‌ ಭೂಮಿಕಾ ಶೆಟ್ಟಿ, ಧರ್ಮಣ್ಣ, ಸಿದ್ದು ಮೂಲಿಮನಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ ಕೃಷ್ಣರಾಜ್‌ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಾರ್ತಿಕ್ ಶರ್ಮ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರು  ಛಾಯಾಗ್ರಹಣ, ಯೋಗರಾಜಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯವನ್ನು ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next