ನವದೆಹಲಿ: ಮುಂಬರುವ ಬಿಹಾರ ಲೋಕಸಭಾ ಚುನಾವಣೆಗಾಗಿ ರಾಷ್ಟ್ರೀಯ ಜನತಾ ದಳ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಲಾಲೂ ಪ್ರಸಾದ್ ಇಬ್ಬರು ಪುತ್ರಿಯರಿಗೂ ಟಿಕೆಟ್ ನೀಡಲಾಗಿದೆ. ಇದಕ್ಕೆ ಭಾರತೀಯ ಜನತಾ ಪಕ್ಷ ಕಟುವಾಗಿ ಟೀಕಿಸಿದೆ.
ಇದನ್ನೂ ಓದಿ:Arvind Kejriwal: ಜಾಮೀನಿಗಾಗಿ ಮತ್ತೆ ಸುಪ್ರೀಂಕೋರ್ಟ್ ಕದತಟ್ಟಿದ ಕೇಜ್ರಿವಾಲ್
ಆರ್ ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಲಾಲೂ ಪುತ್ರಿಯರಾದ ರೋಹಿಣಿ ಆಚಾರ್ಯ ಮತ್ತು ಮಿಸಾ ಭಾರತಿಗೆ ಟಿಕೆಟ್ ನೀಡಲಾಗಿದೆ. ರೋಹಿಣಿ ಆರ್ ಜೆಡಿ ಭದ್ರಕೋಟೆಯಾದ ಸರಣ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಇಲ್ಲಿ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಢಿ ಪ್ರತಿಸ್ಪರ್ಧಿಯಾಗಿದ್ದಾರೆ. ಮೇವು ಹಗರಣದಲ್ಲಿ ಲಾಲೂಪ್ರಸಾದ್ ಯಾದವ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ನಂತರ ಸ್ಪರ್ಧೆಯಿಂದ ಅನರ್ಹಗೊಂಡ ನಂತರ ಲಾಲೂಪ್ರಸಾದ್ ಸರಣ್ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಇದಕ್ಕೂ ಮೊದಲು ಲಾಲೂ ಪ್ರಸಾದ್ ಈ ಕ್ಷೇತ್ರದಿಂದ ಕೆಲವು ಬಾರಿ ಗೆದ್ದಿದ್ದರು.
ಕುಟುಂಬಕ್ಕಾಗಿಯೇ ಬದುಕುವ ಲಾಲೂಪ್ರಸಾದ್ ಯಾದವ್: ಬಿಜೆಪಿ
ಆರ್ ಜೆಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ನಂತರ ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಕಟುವಾಗಿ ಟೀಕಿಸಿದ್ದು, ಭ್ರಷ್ಟ ಲಾಲೂಪ್ರಸಾದ್ ಯಾದವ್ , ಕೇವಲ ತನ್ನ ಕುಟುಂಬಕ್ಕಾಗಿ ಮಾತ್ರ ಬದುಕುತ್ತಿದ್ದಾರೆ ವಿನಃ, ಜನಸೇವೆಗೆ ಅಲ್ಲ ಎಂದು ಆರೋಪಿಸಿದ್ದಾರೆ.
ಲಾಲೂಪ್ರಸಾದ್ ಯಾದವ್ ದೀರ್ಘಕಾಲದಿಂದ ಕೋಮು ದ್ವೇಷ ಹರಡಲು ಪ್ರಯತ್ನಿಸುತ್ತಿದ್ದು, ಇದು ಅವರ ಚಾಳಿಯಾಗಿದೆ. ಯಾದವ್ ಭ್ರಷ್ಟ ಎಂಬುದು ಬಿಹಾರದ ಜನರು ತಿಳಿದುಕೊಂಡಿದ್ದಾರೆ ಎಂದು ಚೌಧರಿ ಹೇಳಿದರು.