Advertisement

Laksya Sen: ಕೆನಡಾ ಓಪನ್ ಸೂಪರ್ 500 ಟ್ರೋಫಿ ಗೆದ್ದ ಭಾರತದ ಲಕ್ಷ್ಯ ಸೇನ್

01:02 PM Jul 10, 2023 | Team Udayavani |

ಕಾಲ್ಗರಿ: ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ ಆಟಗಾರ ಭಾರತದ ಲಕ್ಷ್ಯ ಸೇನ್ ಅವರು ಇದೀಗ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕಪ್ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಚೀನಾದ ಲಿ ಶಿ ಫೆಂಗ್ ಅವರನ್ನು ಸೋಲಿಸಿದ ಲಕ್ಷ್ಯ ಸೇನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

Advertisement

ಆಲ್ ಇಂಗ್ಲಂಡ್ ಚಾಂಪಿಯನ್ ಲಿ ಶಿ ಫೆಂಗ್ ಅವರನ್ನು 21-18, 22-20 ನೇರ ಗೇಮ್ ಗಳಿಂದ ಲಕ್ಷ್ಯ ಸೇನ್ ಮಣಿಸಿದರು. ಸೆಮಿ ಫೈನಲ್ ಪಂದ್ಯದಲ್ಲೂ ಲಕ್ಷ್ಯ ಸೇನ್ ಅವರು ಜಪಾನಿನ ಕೆಂಟ ನಿಶಿಮೊಟೊ ಅವರನ್ನು 21-17, 21-14 ನೇರ ಗೇಮ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.

ಫೈನಲ್ ಪಂದ್ಯದಲ್ಲಿ ಎರಡನೇ ಗೇಮ್ ನಲ್ಲಿ ಸೇನ್ ಆರಂಭದಲ್ಲಿ ನಾಲ್ಕು ಅಂಕಗಳ ಹಿನ್ನಡೆಯಲ್ಲಿದ್ದರು. ಬಳಿಕ ಚೇತರಸಿಕೊಂಡು ಚಾಂಪಿಯನ್ ಆಗಿ ಮೂಡಿಬಂದರು.

ಈ ಜಯದೊಂದಿಗೆ ಲಕ್ಷ್ಯ ಸೇನ್ ಅವರು ಬಿಡಬ್ಲ್ಯೂಎಫ್ ರ್ಯಾಂಕಿಂಗ್ ನಲ್ಲಿ 19ರಿಂದ 12 ನೇ ಸ್ಥಾನಕ್ಕೆ ನೆಗೆದರು. ಮುಂದೆ ಅವರು ಯುಎಸ್ ಓಪನ್ ನಲ್ಲಿ ಆಡಲಿದ್ದಾರೆ.

Advertisement

ಕಳೆದ ವರ್ಷದ ಆರೋಗ್ಯ ಸಮಸ್ಯೆಯ ಕಾರಣದಿಂದ ಆಡಿರದ ಲಕ್ಷ್ಯ ಸೇನ್ ರ್ಯಾಂಕಿಂಗ್ ನಲ್ಲಿ 25ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆದರೆ ಇದೀಗ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ನಲ್ಲಿ ಕಡೆಯದಾಗಿ ಆಡಿದ್ದ ಲಕ್ಷ್ಯ ಸೇನ್ ಅಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next