ಬೆಳಗಾವಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಉಪಮುಖ್ಯಮಂತ್ರಿ, ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರ ಆಸ್ತಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ 14.41 ಕೋಟಿ ರೂ. ಏರಿಕೆ ಆಗಿದೆ. ಸವದಿ ಅವರ ಒಟ್ಟು ಆಸ್ತಿ 29.55 ಕೋಟಿ ರೂ. ವರೆಗೆ ಇದೆ.
2018ರ ವಿಧಾನಸಭೆ ಚುಣಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು 15.14 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಒಟ್ಟು 4.10 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, 2.30 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜತೆಗೆ ಒಟ್ಟು ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಗಳ ಮೌಲ್ಯ 29.55 ಕೋಟಿ ರೂ. ಇರುವುದಾಗಿ ಈಗ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಚರಾಸ್ತಿ ಒಟ್ಟು 6.66 ಕೋಟಿ ಮೌಲ್ಯ, ಸ್ಥಿರಾಸ್ತಿ ಒಟ್ಟು 2.17 ಕೋಟಿ ಮೌಲ್ಯದ್ದು ಇದೆ. ವಿವಿಧೆಡೆ 1.97 ಕೋಟಿ ಸಾಲ ಪಡೆದಿದ್ದಾರೆ. 31.50 ಲಕ್ಷ ರೂ. ಮೌಲ್ಯದ 70 ತೊಲಿ ಬಂಗಾರ ಹಾಗೂ 4 ಲಕ್ಷ ರೂ. ಮೌಲ್ಯದ 5 ಕೆ.ಜಿ ಬೆಳ್ಳಿ ಹೊಂದಿದ್ದಾರೆ.
ಸವದಿ ಹೆಸರಿನಲ್ಲಿ 85.50 ಲಕ್ಷ ರೂ. ಮೌಲ್ಯದ ಓಲ್ವೋ ಕಾರು, 31 ಲಕ್ಷ ರೂ. ಮೌಲ್ಯದ ಮಹೀಂದ್ರಾ ಅಲ್ತೂರಸ್ ಕಾರು ಹಾಗೂ ಟ್ರ್ಯಾಕ್ಟರ್ ಇದೆ. ಸವದಿ ಅವರ ಅವರ ಕೈಯಲ್ಲಿ 7 ಲಕ್ಷ ರೂ. ಹಾಗೂ ಪತ್ನಿ ಕೈಯಲ್ಲಿ 2 ಲಕ್ಷ ರೂ. ಹಣವಿದೆ. ವಿವಿಧ ಬ್ಯಾಂಕು, ಸಹಕಾರ ಸಂಘಗಳಲ್ಲಿ 6.66 ಕೋಟಿ ರೂ. ಸೇರಿದಂತೆ ಒಟ್ಟು ಚರಾಸ್ತಿ ಹೊಂದಿದ್ದಾರೆ.
2018ರಲ್ಲಿ 27.17 ಲಕ್ಷ ಆದಾಯ ಹೊಂದಿದ್ದ ಲಕ್ಷ್ಮಣ ಸವದಿ ಅವರು 2021ರಲ್ಲಿ 1.02 ಕೋಟಿ ಆದಾಯ ಗಳಿಸಿದ್ದಾರೆ. ಆದರೆ 2022ರಲ್ಲಿ ಮತ್ತೆ ಅವರ ಆದಾಯ ಇಳಿಮುಖವಾಗಿತ್ತು.