ಬೆಂಗಳೂರು: ಗರುಡವೇಗದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲಕ್ಕರಾಜು ಸತೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಸತೀಶ್ ಅವರು ಲಾಜಿಸ್ಟಿಕ್ ಉದ್ಯಮದಲ್ಲಿ 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ವಿಜ್ ಫ್ರೈಟ್, ಅಜಿಲಿಟಿ ಲಾಜಿಸ್ಟಿಕ್ಸ್ ಮತ್ತು ಡಚರ್ ಇಂಡಿಯಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಇದಲ್ಲದೇ ಲಕ್ಕರಾಜು ಅವರು ಗರುಡವೇಗಕ್ಕೆ ಅತ್ಯಂತ ಕೌಶಲ್ಯಪೂರ್ಣ ಸೇವೆಯನ್ನು ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ನೂತನ ಸಿಇಒ ಲಕ್ಕರಾಜು ಅವರು ಮಾತನಾಡಿ, ಗರುಡವೇಗದಲ್ಲಿ ಈ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಂಸ್ಥೆಯನ್ನು ಬೆಳವಣಿಗೆಯ ಪಥದಲ್ಲಿ ಮುನ್ನಡೆಸಲು ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶ-ವಿದೇಶಗಳಲ್ಲಿ ಶಾಖೆ:
ಗರುಡವೇಗ ಭಾರತದಾದ್ಯಂತ 185ಕ್ಕೂ ಅಧಿಕ ಸ್ಥಳಗಳಲ್ಲಿ 400ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಯುಎಸ್ಎ, ಯುಕೆ, ಯುಎಇ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ವಿಶ್ವಾಸಾರ್ಹ ಮತ್ತು ಕ್ಷಿಪ್ರ ಪರಿಣಾಮಕಾರಿ ಅಂತರರಾಷ್ಟ್ರೀಯ ಶಿಪ್ಪಿಂಗ್ ಸೇವೆ ಒದಗಿಸುತ್ತಿದೆ. ಜನಪ್ರಿಯ ಗರುಡವೇಗ ವಿಶ್ವದಾದ್ಯಂತ 24×7 ಸೇವೆಯನ್ನು ಒದಗಿಸಲು ಬದ್ಧವಾಗಿದೆ.
ನೌಕರರ ಕೊಡುಗೆ:
ಗರುಡವೇಗದ ನೌಕರರ ಸೌಹಾರ್ದತೆ ಸಾಂಘಿಕ ಕಾರ್ಯಕ್ಕೆ ಸಾಕ್ಷಿ ಎಂದು ಹೇಳಬಹುದು. ಏಕೆಂದರೆ ಭಾರತದಾದ್ಯಂತ ಉದ್ಯೋಗಿಗಳು ಅನೇಕ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ಅವರ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲಾಗಿದೆ. ಈ ಕ್ರಮದಲ್ಲಿ, ಗರುಡವೇಗವನ್ನು ಮತ್ತಷ್ಟು ಜನಪ್ರಿಯಗೊಳಿಸಲು ನೌಕರರು ಹೆಚ್ಚಿನ ಉತ್ಸಾಹ ಹೊಂದಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.