Advertisement

Kumbla ಪಂಚಾಯತ್‌ ಫಂಡ್‌ನಿಂದ ಲಕ್ಷಾಂತರ ರೂ. ಲಪಟಾವಣೆ ಆರೋಪ: ತನಿಖೆ

11:54 PM Jul 24, 2024 | Team Udayavani |

ಕುಂಬಳೆ: ಕುಂಬಳೆ ಪಂಚಾಯತ್‌ ಫಂಡ್‌ನಿಂದ ಲಕ್ಷಾಂತರ ರೂ. ಲಪಟಾಯಿಸಿರುವುದಾಗಿ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್‌ ಜೋಯಿಂಟ್‌ ಡೈರೆಕ್ಟರ್‌ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಪಂಚಾಯತ್‌ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. 15 ಲಕ್ಷ ರೂ.ಲಪಟಾಯಿಸಿದ್ದಾಗಿ ಆರೋಪಿಸಲಾಗಿದೆ.

Advertisement

ಕುಂಬಳೆ ಗ್ರಾಮ ಪಂಚಾಯತ್‌ ಫಂಡ್‌ನಿಂದ ಭಾರೀ ಮೊತ್ತವನ್ನು ಲಪಟಾಯಿಸಲಾಗಿದೆ ಎಂದು ಜೋಯಿಂಟ್‌ ಡೈರೆಕ್ಟರ್‌ಗೆ ದೂರು ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಆಡಳಿತ ಸಮಿತಿ ಸಭೆಯನ್ನು ತುರ್ತಾಗಿ ಕರೆಯಬೇಕೆಂದು ಪಂಚಾಯತ್‌ ಸದಸ್ಯರು ಪಂಚಾಯತ್‌ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಈಗ ಕೇಳಿ ಬಂದಿರುವ ಆರೋಪದ ಕುರಿತು ಆಡಳಿತ ಸಮಿತಿ ಶೀಘ್ರ ಚರ್ಚೆ ನಡೆಸಬೇಕೆಂದು ಪಂಚಾಯತ್‌ನ ಬಿಜೆಪಿ ಸದಸ್ಯರಾದ ವಿದ್ಯಾ ಎನ್‌.ಪೈ, ಪ್ರೇಮಾವತಿ, ವಿವೇಕಾನಂದ ಶೆಟ್ಟಿ, ಪಿ.ಪುಷ್ಪಲತಾ, ಎಸ್‌.ಪ್ರೇಮಲತಾ, ಕೆ.ಮೋಹನ ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next