Advertisement
ನಿಮಗೆ ಗೊತ್ತಾ ಈ ಮಲ್ಲಿಗೆಯ ನಡುವಲ್ಲಿ ದೇವರು ಮಲಗುತ್ತಾರೆ. ಆ ಸಮಯದಲ್ಲಿ ಮಲ್ಲಿಗೆಯ ಬೆಲೆ ಗಗನಕ್ಕೇರುತ್ತದೆ. ಜತೆಗೆ ಆ ಸಮಯದಲ್ಲಿ ದೇವಸ್ಥಾನದ ಒಳಗೆ ಹೋದರೆ ಮಲ್ಲಿಗೆಯ ಪರಿಮಳ ಒಂದು ರೀತಿಯ ಅಮೋಘ ಅನುಭವ ನೀಡುತ್ತದೆ ಎಂದು.
Related Articles
Advertisement
ಕರಾವಳಿಯ ಅನೇಕ ಕಡೆಗಳಿಂದ ಈ ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷಗಟ್ಟಲೆಯಲ್ಲಿ ಮಲ್ಲಿಗೆ ಸಲ್ಲಿಕೆಯಾಗುತ್ತದೆ. ಕಳೆದ ವರುಷ ನೋಡುವುದಾದರೆ ಸುಮಾರು ನಾಲ್ಕು ಲಕ್ಷ ಅಟ್ಟೆ ಮಲ್ಲಿಗೆ ಉಡುಪಿ, ಮಂಗಳೂರು ಭಾಗದಿಂದ ದೇವಿಗೆ ಸಮರ್ಪಿತವಾಗಿದೆ.
ಹರಕೆಯ ರೂಪದಲ್ಲಿ ಭಕ್ತರು ತಮ್ಮ ಇಚ್ಛೆಯಂತೆ ಒಂದು ಚೆಂಡು ಅಥವಾ ಒಂದು ಅಟ್ಟೆ ಮಲ್ಲಿಗೆಯನ್ನು ದೇವಿಗೆ ಸಮರ್ಪಿಸುತ್ತಾರೆ. ದುರ್ಗಾಪರಮೇಶ್ವರಿಗೆ ಶಯನದ ಅನಂತರ ಮರುದಿನ ಮುಂಜಾನೆ ಪೂಜೆ ನಡೆದು ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.
ಈ ಶಯನದ ಸಂದರ್ಭದಲ್ಲಿ ಎರಡು ದಿನಗಳ ಕಾಲ ದೇವಸ್ಥಾನ ಸಂಪೂರ್ಣ ಮಲ್ಲಿಗೆಯ ಸುವಾಸನೆಯಿಂದ ಕೂಡಿರುತ್ತದೆ. ಇಂತಹ ಸುಂದರ ಕ್ಷಣವನ್ನು ನೋಡಲು ಅನುಭವಿಸುವ ಒಂದು ರೀತಿ ಹಿತವಾಗಿರುತ್ತದೆ.
ಈ ವರುಷ ಮಾರ್ಚ್ 24ರಿಂದ 31ರ ವರೆಗೆ ಬಪ್ಪನಾಡಿನ ಜಾತ್ರಾ ಮಹೋತ್ಸವ ನಡೆದಿದ್ದು, ಮಾ. 30ರಂದು ಮಧ್ಯಾಹ್ನ ಹಗಲು ರಥೋತ್ಸವದ ಅನಂತರ ಸಂಜೆ ದೇವಿಗೆ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಿಸಲಾಗಿತ್ತು. ಇಂತಹ ಅಪರೂಪದ ಸುಂದರ ಕ್ಷಣವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು.
-ಕಾರ್ತಿಕ್ ಮೂಲ್ಕಿ
ಎಸ್‌ಡಿಎಂ ಕಾಲೇಜು ಉಜಿರೆ