Advertisement

ಅರಾಟೆ ತೋಪಿನ ಕೆರೆ: ದುರಸ್ತಿಗೆ ಮೀನ ಮೇಷ

11:08 AM May 11, 2022 | Team Udayavani |

ಮುಳ್ಳಿಕಟ್ಟೆ: ಹೊಸಾಡು ಗ್ರಾಮದ ಅರಾಟೆ ತೋಪಿನ ಕೆರೆಯ ಪಶ್ಚಿಮ ಭಾಗದ ದಂಡೆಯ ಒಂದು ಪಾರ್ಶ್ವದಲ್ಲಿ ಸುಮಾರು 15 ಮೀ. ನಷ್ಟು ಉದ್ದಕ್ಕೆ ಕಳೆದ ಮಳೆಗಾಲದಲ್ಲಿ ಕುಸಿದಿದೆ. ಆದರೆ ಕೆರೆ ದಂಡೆಯ ದುರಸ್ತಿ ಕಾರ್ಯ ಇನ್ನೂ ಕೂಡ ಆರಂಭವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅರಾಟೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ 1.74 ಎಕರೆ ವಿಸ್ತಾರ ಹೊಂದಿರುವ ತೋಪಿನ ಕೆರೆಯನ್ನು 2014 ರಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಳಪೆ ಕಾಮಗಾರಿಯಿಂದ ಎರಡೆರಡು ಬಾರಿ ಕೆರೆಯ ದಂಡೆ ಕುಸಿದು ಬಿದ್ದಿದೆ.

ಸುದಿನ ವರದಿ

ಅರಾಟೆ ಕೆರೆಯ ಕುಸಿದಿರುವ ಬಗ್ಗೆ, ದುರಸ್ತಿಪಡಸಬೇಕು ಎನ್ನುವ ಕುರಿತಂತೆ ‘ಉದಯವಾಣಿ ಸುದಿನ’ವು ಈ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು.

ದುರಸ್ತಿ ಮಾಡಿ

Advertisement

ಕಳೆದ ಮಳೆಗಾಲದಲ್ಲಿ ತೋಪಿನ ಕೆರೆ ದಂಡೆಯ ಒಂದು ಭಾಗ ಕುಸಿದು ಬಿದ್ದಿದೆ. ಈಗ ಮತ್ತೂಂದು ಮಳೆಗಾಲ ಹತ್ತಿರದಲ್ಲಿದೆ. ಆದರೆ ಕಳೆದ ಬಾರಿ ಕುಸಿದ ಕೆರೆಯ ದಂಡೆ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಈ ಬಾರಿಯ ಮಳೆಗಾಲದಲ್ಲಿ ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಎಚ್ಚೆತ್ತುಕೊಂಡು, ದುರಸ್ತಿಗೆ ಮುಂದಾಗಬೇಕು ಎನ್ನುವುದಾಗಿ ಸ್ಥಳೀಯರಾದ ನಾಗರಾಜ ಮೊಗವೀರ ಅರಾಟೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next