Advertisement

ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಇಬ್ಬರಿಂದ ರೇಪ್‌, ಬ್ಲಾಕ್‌ ಮೇಲ್‌

12:03 PM Sep 10, 2018 | udayavani editorial |

ಚಂಡೀಗಢ : ”ಹರಿಯಾಣ ಪೊಲೀಸ್‌ ಇಲಾಖೆಯಲ್ಲಿನ ಓರ್ವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಆತನ ಗೆಳೆಯ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿ ನನ್ನನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ” ಎಂದು ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ದೂರು ದಾಖಲಿಸಿದ್ದಾರೆ. 

Advertisement

ಪಲವಾಲ್‌ ಪೊಲೀಸ್‌ ಠಾಣೆಯಲ್ಲಿ ರೇಪ್‌ ಕೇಸ್‌ ದಾಖಲಾದುದನ್ನು  ಅನುಸರಿಸಿ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪಲವಾಲ್‌ ಎಸ್‌ಪಿ ವಸೀಂ ಅಕ್ರಂ ತಿಳಿಸಿದ್ದಾರೆ.

ಮಾಧ್ಯಮದ ಕೆಲವೊಂದು ವಿಭಾಗಗಳಲ್ಲಿ ವರದಿಯಾಗಿರುವಂತೆ ಮಹಿಳಾ ಕಾನ್‌ಸ್ಟೆಬಲ್‌ ಮೇಲಿನ ಅತ್ಯಾಚಾರ ಠಾಣೆಯ ಒಳಗೆ ನಡೆದಿಲ್ಲ ಎಂದವರು ಹೇಳಿದ್ದಾರೆ. 

ಮಹಿಳೆ ದಾಖಲಿಸಿರುವ ರೇಪ್‌ ಮತ್ತು ಬ್ಲಾಕ್‌ ಮೇಲ್‌ ದೂರಿನಲ್ಲಿ ಈ ರೀತಿಯ ವಿವರಿಸಿದ್ದಾರೆ: 

“2014ರಲ್ಲಿ ನಾನು ಪಲವಾಲ್‌ನ ಅಲವಾಲಪುರದಲ್ಲಿ ಜೋಗೀಂದರ್‌ ಅಲಿಯಾಸ್‌ ಮಿಂಟು ಎಂಬ ವ್ಯಕ್ತಿಯ ಸಂಪರ್ಕಕ್ಕೆ ಬಂದೆ; ಆತನನ್ನು ನಾನು ಮೊದಲ ಬಾರಿಗೆ ಮಹೇಂದ್ರಗಢದಲ್ಲಿ ಭೇಟಿಯಾಗಿದ್ದೆ; ನಾನು ಫ‌ರೀದಾಬಾದ್‌, ಜಿಂದ್‌ ಮತ್ತು ಪಲವಾಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಸಂದರ್ಭದಲ್ಲಿ ಜೋಗೀಂದರ್‌ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ. 2017ರ ಜೂನ್‌ನಲ್ಲಿ ಜೋಗೀಂದರ್‌ ನನ್ನನ್ನು ಆತನ ಸಹೋದರನಿಗೆ ಪರಿಯಿಸಿದ. ಈತ ಫ‌ರೀದಾಬಾದ್‌ ಪೊಲೀಸ್‌ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದ. ಆತನೂ ನನ್ನ ಮೇಲೆ ಅತ್ಯಾಚಾರ ಎಸಗಿದ…”

Advertisement

“…ಅದಾಗಿ ಈಗ ಜೋಗೀಂದರ್‌ ಹಣಕ್ಕಾಗಿ ನನ್ನನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾನೆ. ನನ್ನ ಆಕ್ಷೇಪಾರ್ಹ ಫೋಟೋಗಳನ್ನು ಆತ ಹೊಂದಿರುವ ಕಾರಣಕ್ಕೆ  ನನ್ನನ್ನು ಬ್ಲಾಕ್‌ ಮೇಲ್‌ ಮಾಡುತ್ತಾ ಹಣ ಮತ್ತು ಸೆಕ್ಸ್‌ ಗೆ ಒತ್ತಾಯಪಡಿಸುತ್ತಿದ್ದಾನೆ. ಆತನ ಬೇಡಿಕೆ ತೀರಿಸದಿದ್ದರೆ ಆತ ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕುತ್ತೇನೆ” ಎಂಬ ಬೆದರಿಕೆ ಒಡ್ಡಿದ್ದಾನೆ’.

ಪೊಲೀಸರು ನಡೆಸಿರುವ ತನಿಖೆಯಲ್ಲಿ ಜೋಗೀಂದರ್‌ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ. ದೂರು ನೀಡಿರುವ ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಕೂಡ ವಿವಾಹಿತಳೇ ಆಗಿದ್ದಾಳೆ ಎಂದು ಪಲವಾಲ್‌ ಎಸ್‌ಪಿ ವಸೀಂ ಅಕ್ರಮ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next