Advertisement
ಪ್ರಕೃತಿಯಲ್ಲಿ ಎಲ್ಲ ಪ್ರಾಣಿ-ಪಕ್ಷಿಗಳು, ಗಿಡ-ಮರಗಳು ಇರಬೇಕು. ಆಹಾರ ಸರಪಳಿಯಲ್ಲಿ ಒಂದಕ್ಕೆ ಒಂದು ಸಂಬಂಧದಂತೆ ಇದ್ದು, ಪ್ರಕೃತಿಯಲ್ಲಿ ಅಸಮತೋಲನ ಉಂಟಾಂಗದಂತೆ ಎಲ್ಲವೂ ಇದ್ದಾಗ ಅದು ಉತ್ತಮ ಪರಿಸರ ಆಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿಪರಿಸರದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ.
Related Articles
Advertisement
ಪಕ್ಷಿಗಳಿಗೆ ತೊಂದರೆ ಇರುವುದಿಲ್ಲ: ಈ ಹಿಂದೆ ಜಮೀನಿಗೆ ಬರುವ ಪಕ್ಷಿಗಳನ್ನು ಹಿಮ್ಮೆಟಿಸಲು ಯಾಂತ್ರಿಕ ವಿಧಾನಗಳಾದ ಬೆದರುಗೊಂಬೆಗಳನ್ನು ಅಳವಡಿಸುವುದು, ಡಬ್ಬಗಳಿಂದ ಶಬ್ದ ಮಾಡುವುದು,ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೂಗುವ ರೀತಿಯಲ್ಲಿ ಸಂಗೀತದ ಹಾರ್ನ್ಗಳನ್ನು ಅಳವಡಿಸಿ ಪಕ್ಷಿಗಳನ್ನು ಹಿಮ್ಮೆಟಿಸುತ್ತಿದ್ದಾರೆ. ಇದರಿಂದ ಪಕ್ಷಿಗಳಿಗೆ ತೊಂದರೆಇರುವುದಿಲ್ಲ. ಆದರೆ, ಹೆಚ್ಚಿನ ರೈತರು ಇಡೀ ತೋಟಕ್ಕೆ ಬಲೆಯನ್ನು ಹರಡಿ ಅಪರೂಪದ ಪಕ್ಷಿಗಳು, ನಿಶಾಚರಿಬಾವಲಿಗಳ ಸಾವಿಗೆ ಕಾರಣರಾಗಿದ್ದಾರೆ.ಅಮೂಲ್ಯ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವಜವಾಬ್ದಾರಿ ಎಲ್ಲರ ಮೇಲಿದೆ.
ಪ್ರಾಣಿ ಪಕ್ಷಿಗಳ ಸಾವಿಗೆಕಾರಣವಾಗುವವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುವ ಅವಕಾಶ ವಿದೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪಕ್ಷಗಳು ಜಮೀನಿಗೆ ಬರದಂತೆ ಬಲೆ ಹಾಕಿ ಪಕ್ಷಿಗಳ ಸಾವಿಗೆ ಯಾರು ಕಾರಣ ರಾಗಿದ್ದಾರೆ ಅವರನ್ನು ಪತ್ತೆ ಹಚ್ಚಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪರಿಸರದ ನಾಶ ಹಾಗೂ ಸಾವಿರಾರು ಪಕ್ಷಿಗಳ ಸಾವಿಗೆ ಕಾರಣವಾದ ರೈತರಕ್ರಮಕ್ಕೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.
ಪ್ರಾಣಿ-ಪಕ್ಷಿ ಸಂಕುಲ ಉಳಿಸಿ :
ತುಮಕೂರು ಜಿಲ್ಲೆಯ ಹಣ್ಣಿನ ತೋಟಗಳಲ್ಲಿ ಅಳವಡಿಸಿರುವ ಬಲೆಯಲ್ಲಿ ಸಿಲುಕಿ ಮೃತಪಟ್ಟಿರುವ ಪಕ್ಷಿಗಳ ಸಂಕುಲವನ್ನು ನೋಡಿದರೆ ಮನಃ ಕಲಕುತ್ತದೆ. ಈ ರೀತಿ ಪಕ್ಷಿಗಳ ಅವನತಿಗೆ ಕಾರಣ ರಾಗಿರುವವರು ಯಾರೇ ಆಗಿರಲಿ ಅಂತಹವರಮೇಲೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳು ಅಗತ್ಯ ಕಾನೂನು ರೀತಿ ಕ್ರಮಕೈಗೊಂಡುಅಮೂಲ್ಯ ವಾಗಿರುವ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಉಳಿಸಬೇಕು ಎನ್ನುವುದು ಉದಯವಾಣಿ ಪತ್ರಿಕೆ ಕಾಳಜಿಯಾಗಿದೆ.
ರೈತರು ಪಕ್ಷಿಗಳು ತಮ್ಮ ಜಮೀನಿಗೆ ಬರದಂತೆ ಬಲೆ ಹಾಕುವುದನ್ನುಸಂಪೂರ್ಣ ನಿಷೇಧಿಸಲು ಜಿಲ್ಲಾಧಿಕಾರಿಗಳು ಕಠಿಣಕ್ರಮ ತೆಗೆದುಕೊಳ್ಳಲುಕೃಷಿ ಸಹಾಯಕರಿಗೆಆದೇಶಿಸಬೇಕು. ಅರಣ್ಯಇಲಾಖೆ ಅಂತಹವರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿಕಾನೂನು ಕ್ರಮ ತೆಗೆದುಕೊಂಡು ವಿನಾಶದ ಅಂಚಿನಲ್ಲಿರುವ ಪಕ್ಷಿಗಳನ್ನು ಸಂರಕ್ಷಿಸಬೇಕು. – ಬಿ.ವಿ.ಗುಂಡಪ್ಪ, ಅಧ್ಯಕ್ಷ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ
ಯಾವುದೇ ಪ್ರಾಣಿ-ಪಕ್ಷಿಗಳ ಜೀವಕ್ಕೆಹಾನಿಯಾಗುವಂತಿಲ್ಲ. ಆ ರೀತಿ ಬಲೆಗಳನ್ನು ಅಳವಡಿಸಿಪ್ರಾಣಿ-ಪಕ್ಷಗಳ ಸಾವಿಗೆಕಾರಣರಾದವರ ಮೇಲೆ ಮುಲಾಜಿಲ್ಲದೇಪ್ರಕರಣ ದಾಖಲಿಸುತ್ತೇವೆ. ಈ ರೀತಿ ಬಲೆಅಳವಡಿಸಿದ್ದ ಮಧುಗಿರಿಯ ಫಾರ್ಮ್ನಲ್ಲಿಪಕ್ಷಿಗಳು ಸಾವನ್ನಪ್ಪಿದ್ದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ.ಅಂತಹ ಯಾವುದೇ ಪ್ರಕರಣ ಇದ್ದರೂ ಅಂತಹವರ ಮೇಲೆ ಕಾನೂನುರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. – ಎಚ್.ಸಿ.ಗಿರೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು
– ಚಿ.ನಿ.ಪುರುಷೋತ್ತಮ್.