ಶೀತಲ್ ಮುರಗಿ
ಕುಂದಗೋಳ: ಇಲ್ಲಿನ ಹಿರಿಯ ಸಹಾಯಕ ತೋಟಗಾರಿಕೆಇಲಾಖೆ ಕಚೇರಿ ಸಿಬ್ಬಂದಿ ಕೊರತೆಯಿಂದಾಗಿ ಸದಾಬಾಗಿಲು ಮುಚ್ಚಿದ್ದು, ತಾಲೂಕಿನ ರೈತರು ನಿತ್ಯವೂ ಕಚೇರಿಗೆ ಅಲೆಯುವಂತಾಗಿದೆ. ಇದರಿಂದಾಗಿ ಸರಕಾರದ ಸೌಲಭ್ಯವು ರೈತರಿಗೆ ಮರೀಚಿಕೆಯಾದಂತಾಗಿದೆ.
ಗುಡಗೇರಿ, ಯಲಿವಾಳ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಕೊಳವೆ ಬಾವಿಗಳಿದ್ದು ಈ ಭಾಗದ ರೈತರು ಸರಕಾರದ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.ಆದರೆ ಏನು ಆಯ್ತು ಎಂದು ಹೇಳಲು ಯಾರೂ ಇಲ್ಲದೇ ಇರುವುದರಿಂದ ನಿತ್ಯವೂ ಕಚೇರಿಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಹುಡುಗರೇ ಬಾಗಿಲು ತೆರೆದು ಕಚೇರಿಯಲ್ಲಿ ಕುಳಿತಿರುತ್ತಾರೆ.
ಸಾಹೇಬರು ಎಲ್ಲಿ ಹೋಗ್ಯಾರ ಎಂದು ರೈತರು ಕೇಳಿದಾಗ ಸಾಹೇಬ್ರು ಮೀಟಿಂಗ್‌ಗೆ ಹೋಗ್ಯಾರ್ರಿ ಎಂಬ ಉತ್ತರ ಸದಾ ಕೇಳಿ ಬರುತ್ತಿದೆ.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗೆ ಮೂರ್‍ನಾಲ್ಕು ತಿಂಗಳಿಗೊಬ್ಬರು ವರ್ಗಾವಣೆಗೊಳ್ಳುತ್ತಿರುವುದರಿಂದ ರೈತರಿಗೆ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಹಿಂದಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸರಕಾರದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಹೋದ ರೈತರು ಮತ್ತೆ ಕಚೇರಿಗೆ ಬಂದರೆ ಬೇರೆ ಅಧಿಕಾರಿ ಕಾಣಿಸಿಕೊಳ್ಳುತ್ತಾರೆ.
ಅರ್ಜಿಯ ವಿಚಾರ ರೈತರು ಕೇಳಿದಾಗ ಸಮರ್ಪಕ ಉತ್ತರ ದೊರೆಯದೇ ಪುನಃ ಅರ್ಜಿ ನೀಡಿ ಎಂದು ಉತ್ತರ ದೊರೆಯುತ್ತಿರುವುದರಿಂದ ರೈತರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಈಗ ಈ ಹುದ್ದೆಗೆ ಕಳೆದ 15 ದಿನಗಳಿಂದ ಶಿವಯೋಗಪ್ಪ ಅವರು ಆಗಮಿಸಿದ್ದು ಅವರು ಸಹ 15ದಿನದಲ್ಲಿ ಕೇವಲ 2 ದಿನ ಮಾತ್ರ ಕಚೇರಿಗೆ ಬಂದಿದ್ದಾರೆ.
ಈ ಕುರಿತು ಅವರನ್ನು ಮಾತನಾಡಿಸಿದಾಗ, ನಾವು ಪ್ರಭಾರಿಯಾಗಿ ಇಲ್ಲಿ ಬಂದಿದ್ದೇವೆ. ಸಿಬ್ಬಂದಿ ಕೊರತೆಯಿಂದ ಸ್ವಲ್ಪ ತೊಂದರೆಯಾಗುತ್ತಿದೆ ಎಂದು ಹೇಳಿದರು.ಕಚೇರಿಗೆ ಹಿರಿಯ ಸಹಾಯಕ ತೋಟಗಾರಿಕೆನಿರ್ದೇಶಕ, ಸಹಾಯಕ ತೋಟಕಾರಿಕೆ ನಿರ್ದೇಶಕ,ಸಹಾಯಕ ತೋಟಗಾರಿಕೆ ಅ ಧಿಕಾರಿ-2 ಹುದ್ದೆ,ತೋಟಗಾರಿಕೆ ಸಹಾಯಕ 2 ಹುದ್ದೆ, ಪ್ರಥಮ ದರ್ಜೆಸಹಾಯಕ 1 ಹುದ್ದೆ, ಡಿ ದರ್ಜೆ 1 ಹುದ್ದೆ ಇದ್ದು ಕೇವಲಒಬ್ಬ ತೋಟಗಾರಿಕೆ ಸಹಾಯಕ ಹಾಗೂ ಪ್ರಭಾರಿಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಇಬ್ಬರೇಕಾರ್ಯ ನಿರ್ವಹಿಸುತ್ತಿದ್ದಾರೆ.
ಇದರಿಂದಾಗಿ ಇಲ್ಲಿನರೈತರಿಗೆ ಇಲಾಖೆಯ ಸೌಲಭ್ಯಗಳು ಸಮರ್ಪಕವಾಗಿದೊರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು,ಶಾಸಕರು ಹಾಗೂ ಜನಪ್ರತಿನಿ ಧಿಗಳು ಇಲಾಖೆಯ ಎಲ್ಲಹುದ್ದೆಗಳನ್ನು ಭರ್ತಿ ಮಾಡಿ ಯೋಜನೆಗಳನ್ನು ರೈತರಿಗೆ ತಲುಪಿಸಲು ಪ್ರಯತ್ನಿಸಬೇಕಿದೆ.