Advertisement

ಲಕ್ಷ್ಮೇಶ್ವರದಲ್ಲೂ ಕಾಡಿದ ಪ್ರಯಾಣಿಕರ ಕೊರತೆ

01:44 PM May 20, 2020 | Suhan S |

ಲಕ್ಷ್ಮೇಶ್ವರ: ಸರ್ಕಾರ ಲಾಕ್‌ಡೌನ್‌ ಸಡಿಲಿಸಿ ಮಂಗಳವಾರದಿಂದ ಬಸ್‌ ಸಂಚಾರ ಪ್ರಾರಂಭಿಸಿದ್ದರೂ ಜನರು ಮಾತ್ರ ಬಸ್‌ ಹತ್ತಲು ಹಿಂದೇಟು ಹಾಕಿದ್ದು ಕಂಡು ಬಂದಿತು.

Advertisement

ಮಂಗಳವಾರ ಸಕಲ ಸಿದ್ಧತೆಗಳೊಂದಿಗೆ ಲಕ್ಷ್ಮೇಶ್ವರ ಘಟಕದಿಂದ ಹುಬ್ಬಳ್ಳಿ, ಗದಗ, ಗುತ್ತಲ, ಶಿರಹಟ್ಟಿ ಮತ್ತು ಗ್ರಾಮೀಣ ಪ್ರದೇಶಗಳು ಸೇರಿ 35 ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಓಡಿದ್ದು ಮಾತ್ರ ಕೇವಲ 5 ಬಸ್‌. ಅದರಲ್ಲಿ 4 ಹುಬ್ಬಳ್ಳಿಗೆ ಮತ್ತು 1 ಬಸ್‌ನ್ನು ಗದಗಕ್ಕೆ ಓಡಿಸಲಾಯಿತು. ಹಾವೇರಿ, ಹುಬ್ಬಳ್ಳಿ ಡಿಪೋದ ನಾಲ್ಕೈದು ಬಸ್‌ ಗಳು ಲಕ್ಷ್ಮೇಶ್ವರಕ್ಕೆ ಬಂದು ಹೊಗಿವೆ. ಬುಧವಾರ ಪ್ರಯಾಣಿಕರ ಸಂಖ್ಯೆ ಗಮನಿಸಿ ಹೆಚ್ಚಿನ ಬಸ್‌ ಓಡಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಶೇಖರ ನಾಯಕ ತಿಳಿಸಿದರು.

ಲಾಕ್‌ಡೌನ್‌ ನಂತರದ ಎರಡು ತಿಂಗಳಿಂದ ಇಲ್ಲಿನ ಡಿಪೋದಲ್ಲಿ ಲಾಕ್‌ ಆಗಿದ್ದ ಬಸ್‌ಗಳನ್ನು ರಿಪೇರಿ ಮಾಡಿ, ಸ್ವತ್ಛಗೊಳಿಸಿ ಸಂಚಾರಕ್ಕೆ ಅಣಿಗೊಳಿಸಲಾಗಿತ್ತು. ಬಸ್‌ ನಿಲ್ದಾಣ ಸ್ವಚ್ಛಗೊಳಿಸಲಾಗಿತ್ತು. ಪ್ರಯಾಣಿಕರ ಆರೋಗ್ಯ ಪರೀಕ್ಷೆ, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಲಕ್ಷ್ಮೇಶ್ವರ ಬಸ್‌ ನಿಲ್ದಾಣದಿಂದ ಹೊರಟ ಎಲ್ಲ ಪ್ರಯಾಣಿಕರ ಥರ್ಮಲ್‌ ಸ್ಕ್ರಿನಿಂಗ್‌ ನಡೆಸಿ ಅವರ ಮಾಹಿತಿ ಕಲೆ ಹಾಕಲಾಗಿದೆ. ಒಟ್ಟು 215 ಜನರು ಪ್ರಯಾಣ ಮಾಡಿದ್ದಾರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next